ಕಾಂಗ್ರೆಸ್ ಪಕ್ಷ ಅಭಿವೃದ್ಧಿ ವಿಚಾರದಲ್ಲಿ ಓಟು ಕೇಳುತ್ತದೆ

KannadaprabhaNewsNetwork | Published : Feb 4, 2024 1:30 AM

ಸಾರಾಂಶ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಮಮಂದಿರ ವಿಚಾರದಲ್ಲಿ ಓಟು ಪಡೆಯಲು ಮುಂದಾದರೆ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ವಿಚಾರದಲ್ಲಿ ಓಟು ಕೇಳುತ್ತದೆ ಎಂದು ಶಾಸಕ ಎಚ್ಎಂ ಗಣೇಶ್ ಪ್ರಸಾದ್ ಹೇಳಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಮಮಂದಿರ ವಿಚಾರದಲ್ಲಿ ಓಟು ಪಡೆಯಲು ಮುಂದಾದರೆ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ವಿಚಾರದಲ್ಲಿ ಓಟು ಕೇಳುತ್ತದೆ ಎಂದು ಶಾಸಕ ಎಚ್ಎಂ ಗಣೇಶ್ ಪ್ರಸಾದ್ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಬಿಜೆಪಿಯವರು ರಾಮನ ಜಪ ಮಾಡಲಿ ನಮ್ಮದೇನು ತಕರಾರಿಲ್ಲ. ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಹೆಸರಲ್ಲಿ ಮತ ಕೇಳಬೇಕು ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಐದು ಗ್ಯಾರಂಟಿ ಜಾರಿಗೆ ತಂದಿದೆ ಹಾಗಾಗಿ ಅಭಿವೃದ್ಧಿ ಕೆಲಸದಲ್ಲಿ ಸ್ವಲ್ಪ ಹಿನ್ನಡೆಯಾಗಿತ್ತು ಇನ್ಮುಂದೆ ಪೂರ್ವ ಬಜೆಟ್ ಬಳಿಕ ಅಭಿವೃದ್ಧಿ ಶುರುವಾಗಲಿದೆ ಎಂದರು. ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 25 ಕೋಟಿ ಅನುದಾನ ಬಂದಿದೆ. ಜನರಿಗೆ ಹೆಚ್ಚು ಅನುಕೂಲವಾಗುವ ಕೆಲಸಕ್ಕೆ ಅನುದಾನ ಬಳಸಲಾಗುವುದು ಕಾರ್ಯಕರ್ತರು ವಿಪಕ್ಷದ ಮಾತಿಗೆ ಕಿವಿಗೊಡದೆ ಪಕ್ಷದ ಪರವಾಗಿ ದುಡಿಯಬೇಕು ಎಂದರು. ವಿಧಾನಸಭೆ ಚುನಾವಣೆಯೇ ಬೇರೆ, ಲೋಕಸಭೆ ಚುನಾವಣೆಯೇ ಬೇರೆ ಹಾಗಾಗಿ ಬಿಜೆಪಿಯ ಭಾವನಾತ್ಮಕ ವಿಚಾರ ಎತ್ತಲಿದೆ ಇದಕ್ಕೆ ಕಾರ್ಯಕರ್ತರು ಎದೆಗುಂದದೆ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಹಾಕಿದರೆ ಹೆಚ್ಚಿನ ಮತಗಳು ಕೈ ಪಾಲಾಗಲಿವೆ ಎಂದರು. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎರಡು ಬ್ಲಾಕ್ ಗಳಿವೆ. ಗುಂಡ್ಲುಪೇಟೆ ಬ್ಲಾಕ್‌ನಲ್ಲಿ ಕಾಂಗ್ರೆಸ್ ಕಚೇರಿಯಿದೆ. ಬೇಗೂರಲ್ಲೂ ಕಾಂಗ್ರೆಸ್ ಕಚೇರಿ ಆರಂಭಿಸಲಾಗುವುದು ಜೊತೆಗೆ ಸ್ವಂತ ಕಟ್ಟಡ ಕಟ್ಟಲಾಗುವುದು ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಟೇಕಾಫ್ ಆಗಿದೆ. ಪಕ್ಷದ ಕಾರ್ಯಕರ್ತರಿಗೆ ಸರ್ಕಾರದಲ್ಲಿ ನಾಮ ನಿರ್ದೇಶನದ ಮೂಲಕ ಸ್ಥಾನಮಾನ ಕಲ್ಪಿಸಲಾಗುವುದು ಎಂದರು. ಸಭೆಯಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ,ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ಬಿ.ಎಂ.ಮುನಿರಾಜು, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಜಿಪಂ ಮಾಜಿ ಸದಸ್ಯ ಕೆರಹಳ್ಳಿ ನವೀನ್, ಕಾಂಗ್ರೆಸ್ ಮುಖಂಡರಾದ ಹೆಚ್.ಎಸ್.ಪ್ರಭುಸ್ವಾಮಿ, ಬಿ.ಕುಮಾರಸ್ವಾಮಿ, ಪಿ.ಸುರೇಂದ್ರ, ಎಚ್.ಎನ್.ಬಸವರಾಜು ಸೇರಿದಂತೆ ನೂರಾರು ಮಂದಿ ಇದ್ದರು.

Share this article