ಕನ್ನಡಪ್ರಭ ವಾರ್ತೆ ಇಳಕಲ್ಲ
ಬಿಜೆಪಿ ಸದಸ್ಯರ ಸಂಖ್ಯಾಬಲ ಹೆಚ್ಚಾಗಿದ್ದರೂ ಮಂಗಳವಾರ ನಡೆದ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ನ ಸುಧಾರಾಣಿ ಮುರಗೇಶ ಸಂಗಮ ಅಧ್ಯಕ್ಷೆಯಾಗಿ, ಕಾಳಮ್ಮ ವಿರುಪಾಕ್ಷಪ್ಪ ಜಕ್ಕಾ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.ಒಟ್ಟು 31 ಸದಸ್ಯರ ಬಲ ಹೊಂದಿದ ಇಳಕಲ್ಲ ನಗರಸಭೆಯಲ್ಲಿ ಓರ್ವ ಸದಸ್ಯರ ಮರಣ ಹೊಂದಿದ್ದು, 30 ಸದಸ್ಯರ ಬಲ ಹಾಗೂ ಒಂದು ಶಾಸಕರ ಮತ ಮತ್ತು ಒಂದು ಸಂಸದರ ಮತ ಒಟ್ಟು ೩೨ ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್‌ನ 8 ಸದಸ್ಯರು ಬಿಜೆಪಿ 20, 2 ಜೆಡಿಎಸ್, ಒಂದು ಪಕ್ಷೇತರ ಸದಸ್ಯರನ್ನು ನಗರಸಭೆ ಹೊಂದಿದೆ. ಅದರಲ್ಲಿ ಬಿಜೆಪಿಯ ಓರ್ವ ಸದಸ್ಯ ನಿಧನ ಹೊಂದಿರುವ ಕಾರಣ ಬಿಜೆಪಿ ಸಂಖ್ಯಾಬಲ 19ಕ್ಕೆ ಇಳಿದಿದೆ. ಆದರೆ, ಮತದಾನದ ವೇಳೆ ಆರು ಬಿಜೆಪಿ ಸದಸ್ಯರು ಕಾಂಗ್ರೆಸ್‌ನ ವಾಲಿದರು.ಈ ವೇಳೆ ಕಾಂಗ್ರೆಸ್‌ನ ಎಂಟು ಸದಸ್ಯರು, ಜೆಡಿಎಸ್‌ನ ಇಬ್ಬರು, ಪಕ್ಷೇತರ ಒಂದು ಹಾಗೂ ಶಾಸಕರ ಒಂದು ಮತ ಕಾಂಗ್ರೆಸ್‌ನ ಸುಧಾರಾಣಿ ಮುರಗೇಶ ಸಂಗಮ ಇವರು ಪಡೆದುಕೊಂಡು ಅಧ್ಯಕ್ಷರಾಗಿ ಆಯ್ಕೆಯಾದರು. ಇನ್ನು ಕಾಂಗ್ರೆಸ್ ಸೇರಿದ ಕಾಳಮ್ಮ ವಿರುಪಾಕ್ಷಪ್ಪ ಜಕ್ಕಾ ಇವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿಯ ವಿಜಯಾ ಗಿರಡ್ಡಿ 14, ಬಿಜೆಪಿಯ ಸವಿತಾ ಆರಿ 14 ಮತ ಪಡೆದು ಪರಾಭವಗೊಂಡರು.
ಶಾಸಕ ವಿಜಯಾನಂದ ಕಾಶಪ್ಪನವರ ತಮ್ಮ ಚಾಣಾಕ್ಷತನದಿಂದ ಇಳಕಲ್ಲ ನಗರಸಭೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ವಿಜಯ ಪತಾಕಿಯನ್ನು ಇಳಕಲ್ಲ ನಗರಸಭೆಯ ಮೇಲೆ ಹಾರಿಸಿದರು. ಈ ವಿಜಯೋತ್ಸವ ಕಾರ್ಯದಲ್ಲಿ ಶಾಸಕ ವಿಜಯಾನಂದ ಇವರೊಂದಿಗೆ ಹಿರಿಯರಾದ ಶಾಂತಕುಮಾರ ಸುರಪುರ, ವೆಂಕಟೇಶ ಸಾಕಾ, ರಾಜು ಬೋರಾ, ಅಬ್ದುಲ್ ರಜಾಕ ತಟಗಾರ, ಮುತಣ್ಣ ಕಲ್ಗುಡಿ ಇತರು ಇದ್ದರು.ಇದೇ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ನಗರಸಭೆಯ ಎದುರು ಕಂಠಿ ವೃತ್ತದಲ್ಲಿ ಗುಲಾಲ ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡಿದರು. ಈ ವೇಳೆ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಅಭಿನಂದಿಸಿದರು. ಈ ಚುನಾವಣೆಯ ಕಾರ್ಯಗಳನ್ನು ಬಾಗಲಕೋಟೆ ಜಿಲ್ಲಾ ಅಪರ ಜಿಲ್ಲಾಧಿಕಾರ ಸಂತೋಷ ಜಗಲಸಾರ ಇವರು ನಿರ್ವಹಣೆ ಮಾಡಿದರು.
---ಬಿಗಿ ಪೊಲೀಸ್ ಬಂದೋಬಸ್ತ್
ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವೇಳೆ ಯಾವುದೇ ಅಹಿತರಕ ಘಟನೆಗಳು ನಡೆಯದಂತೆ ೧೪ ಪೊಲೀಸ್ ವಾಹನಗಳನ್ನು ಬಂದೋಬಸ್ತ್‌ಗೆ ಒದಗಿಸಲಾಗಿತ್ತು. ಅಪರ ಜಿಲ್ಲಾ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಇವರ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.