ಸೇನೆಗೆ ಸೇರಲು ಕಾಂಗ್ರೆಸ್‌ ಸಿದ್ಧ: ದಿನೇಶ್

KannadaprabhaNewsNetwork |  
Published : May 08, 2025, 12:31 AM IST
ಕ್ಯಾಪ್ಷನ7ಕೆಡಿವಿಜಿ43 ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಡಾ.ಎನ್.ಎಸ್.ಹರ್ಡೆಕರ್ ಹುಟ್ಟುಹಬ್ಬ ಆಚರಿಸಲಾಯಿತು. | Kannada Prabha

ಸಾರಾಂಶ

ಪಾಕ್‌ ಉಗ್ರರ ತಾಣಗಳನ್ನು ದ್ವಂಸ ಮಾಡಿದ ಭಾರತೀಯ ಸೇನೆ ಕಾರ್ಯ ಅಭಿನಂದನೀಯ. ಕಾಂಗ್ರೆಸ್ ಉಗ್ರ ಚಟುವಟಿಕೆಗಳನ್ನು ಯಾವತ್ತೂ ಪ್ರೋತ್ಸಾಹಿಸುವುದಿಲ್ಲ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದ್ದಾರೆ.

ದಾವಣಗೆರೆ: ಪಾಕ್‌ ಉಗ್ರರ ತಾಣಗಳನ್ನು ದ್ವಂಸ ಮಾಡಿದ ಭಾರತೀಯ ಸೇನೆ ಕಾರ್ಯ ಅಭಿನಂದನೀಯ. ಕಾಂಗ್ರೆಸ್ ಉಗ್ರ ಚಟುವಟಿಕೆಗಳನ್ನು ಯಾವತ್ತೂ ಪ್ರೋತ್ಸಾಹಿಸುವುದಿಲ್ಲ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಜಿಲ್ಲಾ ಸೇವಾದಳ ವತಿಯಿಂದ ಡಾ. ಎನ್.ಎಸ್. ಹರ್ಡೆಕರ್ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಾಕ್ ಮೇಲೆ ಯುದ್ಧ ಸಂಭವಿಸಿದ್ದಲ್ಲಿ ನಮ್ಮ ದಾವಣಗೆರೆ ಜಿಲ್ಲಾ ಕಾಂಗ್ರೆಸ್ಸಿನಿಂದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾರ್ಗದರ್ಶನದಂತೆ ಎಲ್ಲ ಘಟಕಗಳಿಂದ 5000ಕ್ಕೂ ಹೆಚ್ಚು ಕಾರ್ಯಕರ್ತರು ಸೇನೆಗೆ ಸೇರಿ, ಯೋಧರಿಗೆ ಪ್ರೋತ್ಸಾಹ ನೀಡುತ್ತೇವೆ ಎಂದು ತಿಳಿಸಿದರು.

ಡಾ. ಎನ್.ಎಸ್. ಹರ್ಡೆಕರ್ ಅವರು ಹಾವೇರಿ ಜಿಲ್ಲೆ ತಿಳುವಳ್ಳಿಯಲ್ಲಿ ಹುಟ್ಟಿ, ರಾಜ್ಯಸಭಾ ಸದಸ್ಯರಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದ ಸಾಧಕರು. ಸೇವಾದಳ ಸಂಸ್ಥಾಪಕರಾಗಿ ಸಂಘಟನೆಗೆ ಒತ್ತುಕೊಟ್ಟಿದ್ದರು ಎಂದರು.

ಜಿಲ್ಲಾ ಸೇವಾದಳ ಅಧ್ಯಕ್ಷ ಡಿ.ಶಿವಕುಮಾರ್, ಎಲ್.ಬಿ. ಹನುಮಂತಪ್ಪ, ಡೋಲಿ ಚಂದ್ರು, ಎ.ನಾಗರಾಜ್ , ಉಮಾ ತೋಟಪ್ಪ, ಬುನಿಯನ್ ಬಾಸ್ಕರ್, ಸಾಕಮ್ಮ, ಇಂದ್ರಮ್ಮ, ವಿನೋದ್, ರವಿಚಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ವರುಣ್ ಬೆಣ್ಣೆಹಳ್ಳಿ, ಎಲ್‌ಎಂಎಚ್ ಸಾಗರ್, ಕಾವೇರಿ, ತಿಪ್ಪೇಸ್ವಾಮಿ, ಹೆಗ್ಗೇರಿ ರಂಗಪ್ಪ ಇತರರು ಇದ್ದರು.

- - -

-7ಕೆಡಿವಿಜಿ43.ಜೆಪಿಜಿ:

ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಡಾ. ಎನ್.ಎಸ್. ಹರ್ಡೆಕರ್ ಹುಟ್ಟುಹಬ್ಬ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು