ಅಪಪ್ರಚಾರ ಮಾಡಿದ ಕಾಂಗ್ರೆಸ್‌ಗೆ ತಕ್ಕ ಪಾಠ: ಅರುಣ ಕುಮಾರ್

KannadaprabhaNewsNetwork |  
Published : Nov 16, 2025, 02:00 AM IST
ನರಸಿಂಹರಾಜಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಪಕ್ಷದಿಂದ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅರುಣಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ದೇಶದ ಉದ್ದಕ್ಕೂ ಬಿಜೆಪಿ ಪಕ್ಷದವರನ್ನು ಮತ ಚೋರಿ ಎಂದು ಅಪಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್ ಗೆ ಬಿಹಾರ ಮತ ದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅರುಣಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ದೇಶದ ಉದ್ದಕ್ಕೂ ಬಿಜೆಪಿ ಪಕ್ಷದವರನ್ನು ಮತ ಚೋರಿ ಎಂದು ಅಪಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್ ಗೆ ಬಿಹಾರ ಮತ ದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅರುಣಕುಮಾರ್ ತಿಳಿಸಿದರು.

ಶುಕ್ರವಾರ ಸಂಜೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿಯಿಂದ ಬಿಹಾರ ಚುನಾವಣೆಯಲ್ಲಿ ಬಹುಮತ ಬಂದ ಹಿನ್ನೆಲೆಯಲ್ಲಿ ನಡೆದ ವಿಜಯೋತ್ಸವದಲ್ಲಿ ಮಾತನಾಡಿದರು. ಕಾಂಗ್ರೆಸ್ ನವರು, ಬಿಜೆಯವರನ್ನು ಮತ ಚೋರಿ ಎನ್ನುತ್ತಾರೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಬಹುಮತದಿಂದ ಗೆದ್ದಿದೆ. ಇದು ಮತ ಚೋರಿಯೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿಕೊಳ್ಳ ಬೇಕಾಗಿದೆ. ಚುನಾವಣೆ ಆಯೋಗ ಕರಡು ಮತದಾರರ ಪಟ್ಟಿಯನ್ನು ಮೊದಲೇ ಬಿಡುಗಡೆ ಮಾಡಿ ಪ್ರತಿ ತಾಲೂಕು ಕೇಂದ್ರಕ್ಕೂ ಕಳಿಸುತ್ತದೆ. ತಪ್ಪಿದ್ದರೆ ಆಕ್ಷೇಪಣೆ ಸಲ್ಲಿಸಬಹುದು. ಬಿಹಾರದ ವಿಧಾನ ಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿಗೆ ಪ್ರಧಾನ ನರೇಂದ್ರ ಮೋದಿ, ಬಿಹಾರದ ಸಿ.ಎಂ. ನಿತೀಶ್ ಕುಮಾರ್ ಹಾಗೂ ಗೃಹ ಸಚಿವ ಅಮಿತ್ ಷಾ ನಾಯಕತ್ವ ಕಾರಣ. ದೇಶದಲ್ಲಿ ಭಯೋತ್ಪಾದಕರಿಂದ ದಾಳಿ ನಡೆದಾಗ ಪ್ರತಿಯೊಬ್ಬ ಭಾರತೀಯರು ಖಂಡಿಸಿ ದೇಶದ ಪರವಾಗಿ ನಿಲ್ಲಬೇಕು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ವಿ. ನೀಲೇಶ್ ಮಾತನಾಡಿ, ಬಿಹಾರದ ಚುನಾವಣೆ ಫಲಿತಾಂಶ ನೋಡಿಯಾದರೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಬಾಲಿಷ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು .ಅವರ ಹೇಳಿಕೆಗಳಿಗೆ ವಿರುದ್ಧವಾಗಿ ಬಿಹಾರದಲ್ಲಿ ಫಲಿತಾಂಶ ಬಂದಿದೆ ಎಂದರು. ಬಿಜೆಪಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ದಯಾನಂದ್ ಮಾತನಾಡಿದರು.

ವಿಜಯೋತ್ಸವದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಎ.ಬಿ.ಮಂಜುನಾಥ್, ಎಚ್‌.ಡಿ.ಲೋಕೇಶ್, ಅಶ್ವನ್, ಪ್ರೀತಂ, ಸುರಭಿ ರಾಜೇಂದ್ರ, ಪರ್ವೀಜ್‌, ಎಂ.ಎನ್. ನಾಗೇಶ್, ಕೆಸವಿ ಮಂಜುನಾಥ್,ಜಯರಾಂ, ವಿಜಯಕುಮಾರ್‌ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.

PREV

Recommended Stories

ಸಹಕಾರಿ ವ್ಯವಸ್ಥೆ ದೇಶದ ಆರ್ಥಿಕತೆಗೆ ಪೂರಕ: ವೆಂಕಟೇಶ್
ಚಾಲಕನಿಗೆ ಚಾಕುವಿನಿಂದ ಇರಿದುಕಾರು ಸಹಿತ ಪರಾರಿಯಾದವ ಸೆರೆ