- ಕೈ ನಾಯಕರು ಯಶವಂತ ರಾವ್ ಹೇಳಿಕೆಗೆ ಮೊದಲು ಉತ್ತರಿಸಲಿ: ಎಸ್‌ಟಿ ಮೋರ್ಚಾ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಕಾಂಗ್ರೆಸ್ಸಿನ ಕೆಲವರು ಬಿಜೆಪಿ ನಾಯಕರ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಿ, ಅವಹೇಳನಾಕಾರಿಯಾಗಿ ಮಾತನಾಡುತ್ತಿದ್ದಾರೆ. ಇನ್ನು ಮುಂದೆ ಯೋಚನೆ ಮಾಡಿ ಹೇಳಿಕೆಗಳ ನೀಡಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ಬಿಜೆಪಿ ಹಾಗೂ ಪಕ್ಷದ ಎಸ್‌ಟಿ ಮೋರ್ಚಾದಿಂದ ಉಗ್ರ ಪ್ರತಿಭಟನೆ ನಡೆಸಬೇಕಾದೀತು ಎಂದು ಬಿಜೆಪಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೆ.ಆರ್.ಕೃಷ್ಣಕುಮಾರ ತ್ಯಾವಣಿಗೆ ಎಚ್ಚರಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಸಿಪಿ- ಟಿಎಸ್‌ಪಿ ಹಣದ ದುರ್ಬಳಕೆ ವಿರುದ್ಧ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ದಾವಣಗೆರೆ ಕಚೇರಿಗೆ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ನೇತೃತ್ವದಲ್ಲಿ ಮುತ್ತಿಗೆ ಹಾಕಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಲಾಗಿತ್ತು. ಜಿಲ್ಲಾ ಸಚಿವ, ಶಾಸಕರು, ಸಂಸದರ ಟೀಕಿಸಿದ್ದಕ್ಕೆ ಕಾಂಗ್ರೆಸ್ಸಿಗರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಯುವ ಘಟಕ ಅಧ್ಯಕ್ಷ ವರುಣ ಬೆಣ್ಣೆಹಳ್ಳಿ ಅವರು ನಮ್ಮ ಪಕ್ಷದ ನಾಯಕ ಬಂಗಾರು ಹನುಮಂತು ಬಗ್ಗೆ ಸಚಿವ, ಶಾಸಕರು, ಸಂಸದರಿಗೆ ಏಕವಚನದಲ್ಲಿ ಮಾತನಾಡಿದ್ದಾರೆಂದು ಆರೋಪಿಸಿದ್ದಾರೆ. ಇದು ಶುದ್ಧ ಸುಳ್ಳು. ಸತ್ಯಕ್ಕೆ ದೂರವಾದ ಸಂಗತಿ. ಯಾವುದೇ ರೀತಿಯಲ್ಲೂ ಏಕವಚನದಲ್ಲಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಮೊದಲು ದಲಿತರಿಗಾದ ಮೋಸ, ಅನ್ಯಾಯದ ವಿರುದ್ಧ ಕಾಂಗ್ರೆಸ್ಸಿಗರು ಧ್ವನಿ ಎತ್ತಲಿ. ನ್ಯಾಯವಾಗಿ ಸಿಗಬೇಕಾದ ಹಕ್ಕನ್ನು ಕೊಡಿಸುವ ಕೆಲಸ ಮಾಡಲಿ. ಸತ್ಯ ವಿಚಾರ ತಿಳಿಯದೇ, ರಾಜ್ಯಾಧ್ಯಕ್ಷ ಬಂಗಾರು ಹನುಮಂತರ ಬಗ್ಗೆ ಹಗುರವಾಗಿ ಹಾಗೂ ಮೆದುಳು ಜ್ವರ ಬಂದಿದೆಯೆಂಬ ಹೇಳಿಕೆ ನೀಡಿದ್ದಾರೆ. ನಿಮ್ಮೆಲ್ಲ ಹೇಳಿಕೆಗಳನ್ನು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.
ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಲೋಹಿತಕುಮಾರ್ ಮಾತನಾಡಿ, ಕಾಂಗ್ರೆಸ್‌ನ ಕೆಲವರು ದೊಡ್ಡವರ ಬಗ್ಗೆ ಮಾತನಾಡಿದರೆ, ತಾವೂ ದೊಡ್ಡವರಾಗುತ್ತೇವೆಂಬ ಭ್ರಮೆಯಲ್ಲಿ ತೇಲಾಡುತ್ತಿದ್ದಾರೆ. ಶಾಮನೂರು ಕುಟುಂಬದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ಈಗಾಗಲೇ ಕಾಂಗ್ರೆಸ್ಸಿನವರಿಗೆ ಏನು ಹೇಳಬೇಕಿತ್ತೋ ಅದನ್ನು ನಮ್ಮ ಪಕ್ಷದ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸಾಕ್ಷ್ಯಾಧಾರ, ದಾಖಲೆಗಳ ಮೂಲಕವೇ ಹೇಳಿ, ಸವಾಲು ಹಾಕಿದ್ದಾಗಿದೆ. ಯಶವಂತ ರಾವ್ ಆರೋಪಕ್ಕೆ ನಿಮ್ಮ ನಾಯಕರಿಗೆ ಮೊದಲು ಪ್ರತಿಕ್ರಿಯೆ ನೀಡಲು ಹೇಳಿ. ಗ್ರಾಪಂ ಚುನಾವಣೆಗೆ ನಿಂತು, ಗೆದ್ದು ಸದಸ್ಯನಾಗದ ನಿಮ್ಮಂತಹವರು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷರ ಬಗ್ಗೆ ಆರೋಪ ಮಾಡುತ್ತಿದ್ದೀರಲ್ಲ. ಮೊದಲು ಗ್ರಾಪಂ ಚುನಾವಣೆಗೆ ನಿಂತು, ಗೆದ್ದು ತೋರಿಸಿ ಎಂದು ಸವಾಲು ಹಾಕಿದರು.ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ನಾಯಕ, ಮುಖಂಡರಾದ ಗುಮ್ಮನೂರು ಶ್ರೀನಿವಾಸ, ಎಚ್.ಬಿ.ದುರುಗೇಶ, ಕರೆಲಕ್ಕೇನಹಳ್ಳಿ ಓಂಕಾರಪ್ಪ, ಎನ್.ಎಚ್. ಹಾಲೇಶ ನಾಯ್ಕ, ಸಾಲಕಟ್ಟೆ ಸಿದ್ದೇಶ, ಆಕಾಶ ಮಾಳಗಿ, ಐ.ಹನುಮಂತಪ್ಪ, ಗೋಶಾಲೆ ಸುರೇಶ, ಶಿವಕುಮಾರ ಮ್ಯಾಸರಹಳ್ಳಿ, ಹಳ್ಳಿ ಮಲ್ಲಾಪುರ ರಾಜಣ್ಣ, ತರಕಾರಿ ಶಿವು, ಅಂಜಿನಪ್ಪ, ಹಾಲೇಶ ಇತರರು ಇದ್ದರು.
- - -(ಕೋಟ್) ಬಿಜೆಪಿಯಲ್ಲಿ ಗುಂಪುಗಳಾಗಲೀ, ಬಣಗಳಾಗಲೀ ಇಲ್ಲಲ್ಲ. ನಾವೆಲ್ಲರೂ ಒಂದು ಪಕ್ಷದ ಕಾರ್ಯಕರ್ತರು. ಸಣ್ಣಪುಟ್ಟ ಗೊಂದಲಗಳಿಗೆ ಶೀಘ್ರವೇ ಪರಿಹಾರ ಕಾಣಲಿವೆ. ಇಲ್ಲಿಯವರೆಗೆ ನಾಯಕರ ಚುನಾವಣೆ ಮಾಡಿದ್ದ ಕಾರ್ಯಕರ್ತರಿಗೆ ಈಗ ಚುನಾವಣೆ ಬರಲಿವೆ. ಅಷ್ಟರಲ್ಲಿ ಬಿಜೆಪಿ ಮತ್ತೆ ಹಳೆಯ ಲಯ ಕಂಡುಕೊಂಡು, ದೊಡ್ಡ ಶಕ್ತಿಯಾಗಿ ಕಾರ್ಯಕರ್ತರ ಗೆಲುವಿಗೆ ಶ್ರಮಿಸಲಿದೆ.
- ಅನಿಲ ಕುಮಾರ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿಜೆಪಿ.- - -
-20ಕೆಡಿವಿಜಿ1.ಜೆಪಿಜಿ:ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಆರ್. ಕೃಷ್ಣಕುಮಾರ ತ್ಯಾವಣಿಗೆ, ಚನ್ನಗಿರಿ ಲೋಹಿತಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.