ಪಿಕಾರ್ಡ್ ಬ್ಯಾಂಕ್ ಆಡಳಿತದ ಚುಕ್ಕಾಣಿ ಕಾಂಗ್ರೆಸ್‌ಗೆ

KannadaprabhaNewsNetwork |  
Published : Sep 02, 2025, 01:00 AM IST
ಜೇವರ್ಗಿ : ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದಂತೆಯೆ ಕಾಂಗ್ರೆಸ್ ಕಾರ‍್ಯಕರ್ತರು ವಿಜಯೋತ್ಸವ ಆಚರಿಸಿದರು. ಪ್ರತಾಪ ಕಟ್ಟಿ, ಸಾಂಬಶಿವ ಮಲ್ಲಯ್ಯ, ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಚಂದ್ರಶೇಖರ ಹರನಾಳ, ಸಂಗನಗೌಡ ಗುಳ್ಯಾಳ ಇದ್ದರು. | Kannada Prabha

ಸಾರಾಂಶ

ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪ್ರತಾಪ ತಂದೆ ಚಿದಾನಂದ ಕಟ್ಟಿ, ಅಧ್ಯಕ್ಷರಾಗಿ, ಸಾಂಬಶಿವ ತಂದೆ ಮಲ್ಲಯ್ಯ ಉಪಾಧ್ಯಕ್ಷರಾಗಿ ತಲಾ 8 ಮತಗಳನ್ನು ಪಡೆದು ಆಯ್ಕೆಯಾದರು.

ಜೇವರ್ಗಿ: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪ್ರತಾಪ ತಂದೆ ಚಿದಾನಂದ ಕಟ್ಟಿ, ಅಧ್ಯಕ್ಷರಾಗಿ, ಸಾಂಬಶಿವ ತಂದೆ ಮಲ್ಲಯ್ಯ ಉಪಾಧ್ಯಕ್ಷರಾಗಿ ತಲಾ 8 ಮತಗಳನ್ನು ಪಡೆದು ಆಯ್ಕೆಯಾದರು.

ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಾಬುಗೌಡ ಮಾಲಿಪಾಟೀಲ್ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಇಂದಿರಾ ಚನ್ನಪ್ಪಗೌಡ ತಲಾ 7 ಮತಗಳನ್ನು ಪಡೆದು ಪರಾಭವ ಗೊಂಡರು ಎಂದು ಚುನಾವಣಾಧಿಕಾರಿ ಪ್ರಮೋದ ಕರಣನ್ ಹಾಗೂ ಕಲ್ಯಾಣರಾವ್ ಕಣಮೇಶ್ವರ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಚುನಾವಣೆ ನಡೆದಿದ್ದು, ಜಿದ್ದಾಜಿದ್ದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ೮, ಜೆಡಿಎಸ್ ಬೆಂಬಲಿತ-೬, ಬಿಜೆಪಿ ಬೆಂಬಲಿತ-೧, ಸ್ಥಾನಗಳಲ್ಲಿ ನಿರ್ದೆಶಕರಾಗಿ ಗೆಲವು ಸಾಧಿಸಿದರು.

ವಿಜಯೋತ್ಸವ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದಂತೆಯೆ ಕಾಂಗ್ರೆಸ್ ಪಕ್ಷದ ಮುಖಂಡರು ವಿಜಯೋತ್ಸವ ಆಚರಿಸಿದರು. ರುಕುಂಪಟೇಲ್ ಇಜೇರಿ, ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಷಣ್ಮುಖಪ್ಪ ಹಿರೇಗೌಡ, ಸಂಗನಗೌಡ ಗುಳ್ಯಾಳ, ಕಾಸಿಂ ಪಟೇಲ್ ಮುದಬಾಳ, ಶಾಂತಪ್ಪ ಕುಡಲಗಿ, ಮಾಜೀದ್ ಸೇಠ ಗಿರಣಿ, ಚಂದ್ರಶೇಖರ ಹರನಾಳ, ವಿಜಯಕುಮಾರ ಹಿರೇಮಠ, ಅಬ್ದುಲ್ ರಹಿಮಾನ್ ಪಟೇಲ್, ಸಲ್ಲಿಂ ಕಣ್ಣಿ, ರಜಾಕ ಮನಿಯಾರ, ಶಾಂತಗೌಡ ಮಾಗಣಗೇರಿ, ಸೋಫಿ ಗಂವ್ಹಾರ, ಎ.ಬಿ.ಹಿರೇಮಠ, ಇಮರಾನ ಕುಕನೂರ ಸೇರಿದಂತೆ ಕಾರ‍್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು