ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ- ಮಾಜಿ ಶಾಸಕ ಡಿ.ಆರ್‌. ಪಾಟೀಲ

KannadaprabhaNewsNetwork | Published : Apr 27, 2024 1:19 AM

ಸಾರಾಂಶ

ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಕಾಲದಲ್ಲಿ ಜನರ ಬೆಂಬಲ ಸಿಕ್ಕ ರೀತಿಯಲ್ಲಿ ಈ ಬಾರಿ ರಾಜ್ಯದಲ್ಲಿ ದೊರೆಯುತ್ತಿದೆ. ಮತಗಟ್ಟೆಗೆ ಜನರನ್ನು ತರುವಂತಹ ಪ್ರಾಮಾಣಿಕ ಕೆಲಸ ಮಾಡಿದಲ್ಲಿ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಖಂಡಿತ ಅಧಿಕಾರಕ್ಕೆ ಬರಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಡಿ.ಆರ್. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಬ್ಯಾಡಗಿ: ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಕಾಲದಲ್ಲಿ ಜನರ ಬೆಂಬಲ ಸಿಕ್ಕ ರೀತಿಯಲ್ಲಿ ಈ ಬಾರಿ ರಾಜ್ಯದಲ್ಲಿ ದೊರೆಯುತ್ತಿದೆ. ಮತಗಟ್ಟೆಗೆ ಜನರನ್ನು ತರುವಂತಹ ಪ್ರಾಮಾಣಿಕ ಕೆಲಸ ಮಾಡಿದಲ್ಲಿ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಖಂಡಿತ ಅಧಿಕಾರಕ್ಕೆ ಬರಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಡಿ.ಆರ್. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಬ್ಯಾಡಗಿ ಮತ್ತು ಕಾಗಿನೆಲೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ದೇಶ ಕಂಡ ಅಪ್ರತಿಮ ಪ್ರಧಾನಿ ದಿ.ಇಂದಿರಾಗಾಂಧಿ ಅವರ ಬಡವರ ಹಾಗೂ ಜನಪರ ಕಾಳಜಿ ಇಂದಿಗೂ ಯಾವುದೇ ಪ್ರಧಾನಿಯವರನ್ನು ಕಂಡಿಲ್ಲ, ಅಂತಹ ಮಹಾನ್ ನಾಯಕಿ ಆದರ್ಶಗಳನ್ನು ಇಂದಿನ ಯುವ ಮತದಾರರಿಗೆ ತಿಳಿಸಿಕೊಡುವ ಕೆಲಸವಾಗಬೇಕಾಗಿದೆ ಎಂದರು.ಜನ ತೀರ್ಮಾನಿಸಿದ್ದಾರೆ: ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಕುರಿತು ಜನತೆ ತೀರ್ಮಾನಿಸಿದ್ದಾರೆ. ಯಾವುದೇ ಅಲೆಗಳ ಬಗ್ಗೆ ಚರ್ಚಿಸದೇ ಕಾರ್ಯಕರ್ತರು ಮಾತ್ರ ಮತದಾರರ ಬಗ್ಗೆ ವಿಶೇಷ ಕಾಳಜಿ ಮತ್ತು ಆಸಕ್ತಿ ವಹಿಸಿ ಮತಯಂತ್ರದ ಹತ್ತಿರ ತರುವಂತಹ ಕೆಲಸದಲ್ಲಿ ತೊಡಗುವಂತೆ ಕರೆ ನೀಡಿದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿಯವರ ಬಣ್ಣದ ಮಾತುಗಳನ್ನು ನಂಬಬೇಡಿ, ಸಿದ್ದರಾಮಯ್ಯ ಸರಕಾರದ ಸಾಧನೆ ನೋಡಿ ತಾಳೆ ಹಾಕಿ ಅವಲೋಕನ ಮಾಡಿದಲ್ಲಿ ತಿಳಿಯುತ್ತದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೋಲುವ ಪ್ರಶ್ನೆ ಇಲ್ಲವೆಂದರು.

ಈ ಸಂದರ್ಭದಲ್ಲಿ ದಾನಪ್ಪ ಚೂರಿ, ರಾಜು ಕಳ್ಯಾಳ, ಬಸವರಾಜ ಸವಣೂರ, ವೀರನಗೌಡ್ರ ಪೊಲೀಸ ಪಾಟೀಲ, ಲಕ್ಷ್ಮೀ ಜಿಂಗಾಡೆ, ರವಿ ಪೂಜಾರ, ಡಿ.ಎಚ್.ಬುಡ್ಡನಗೌಡ್ರ, ಶಿವಪ್ಪ ಅಂಬಲಿ, ಸುರೇಶಗೌಡ್ರ ಪಾಟೀಲ ಹಾಗೂ ಇನ್ನಿತರರಿದ್ದರು.

Share this article