ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ: ವರ್ತೂರು ಪ್ರಕಾಶ್

KannadaprabhaNewsNetwork |  
Published : Jul 24, 2025, 12:45 AM IST
೨೩ಕೆಎಲ್‌ಆರ್-೬ವೇಮಗಲ್ ಪಟ್ಟಣ ಪಂಚಾಯಿತಿಗೆ ಈಗಾಗಲೇ ಚುನಾವಣೆ ಹಿನ್ನಲೆಯಲ್ಲಿ  ಚನ್ನಪ್ಪನಹಳ್ಳಿ, ಪುರಹಳ್ಳಿ, ವೇಮಗಲ್ ಬೆಟ್ಟಹೊಸಪುರ, ಕಲ್ವ ಗ್ರಾಮಗಳಿಗೆ ಭೇಟಿ ನೀಡಿ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರ ಸಭೆಯಲ್ಲಿ ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಕಾಂಗ್ರೆಸ್ ನಾಯಕರಿಗೆ ಈಗಾಗಲೇ ಗೊತ್ತಾಗಿದೆ, ವೇಮಗಲ್ ಪಟ್ಟಣ ಪಂಚಾಯಿತಿಯಲ್ಲಿ ತಾವು ಅಧಿಕಾರಕ್ಕೆ ಬರುವುದಿಲ್ಲವೆಂದು, ಆದ್ದರಿಂದ ನಮ್ಮ ಪಕ್ಷದ ಮುಖಂಡರನ್ನು ಸೆಳೆಯಲು ಕಾಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಆಸೆ- ಆಮಿಷಗಳಿಗೆ ಒಳಗಾಗದೆ ಬಿಜೆಪಿ- ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಸಿಗುತ್ತದೆ .

ಕನ್ನಡಪ್ರಭ ವಾರ್ತೆ ಕೋಲಾರ

ವೇಮಗಲ್ ಪಟ್ಟಣ ಪಂಚಾಯಿತಿಗೆ ಈಗಾಗಲೇ ಚುನಾವಣೆ ನಿಗದಿಯಾಗಿದ್ದು, ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಮತ್ತು ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್‌ರ ನೇತೃತ್ವದಲ್ಲಿ ಚನ್ನಪ್ಪನಹಳ್ಳಿ, ಪುರಹಳ್ಳಿ, ವೇಮಗಲ್ ಬೆಟ್ಟಹೊಸಪುರ, ಕಲ್ವ ಗ್ರಾಮಗಳಿಗೆ ಭೇಟಿ ನೀಡಿ, ಬಿಜೆಪಿ- ಜೆಡಿಎಸ್ ನಾಯಕರ ಸಭೆ ನಡೆಸಿ ಚುನಾವಣೆ ಕುರಿತು ಮೈತ್ರಿ ಪಕ್ಷದ ಮುಖಂಡರ ಅಭಿಪ್ರಾಯ ಸಂಗ್ರಹಿಸಿದರು.

ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ಮಾತನಾಡಿ, ನಾನು ಎರಡು ಬಾರಿ ಶಾಸಕನಾಗಿದ್ದಾಗ ಅಭಿವೃದ್ಧಿ ಆಗಿದ್ದ ಕೆಲಸಗಳು ಬಿಟ್ಟರೆ ಮತ್ತೆ ಯಾವುದೇ ಅಭಿವೃದ್ಧಿ ಕ್ಷೇತ್ರದಲ್ಲಿ ನಡೆಯುತ್ತಿಲ್ಲ, ಮುಂದೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ, ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷ ಅಧಿಕಾರದಲ್ಲಿರುತ್ತದೆ, ವೇಮಗಲ್‌ಗೆ ಇದೇ ಮೊದಲ ಬಾರಿಗೆ ಪಟ್ಟಣ ಪಂಚಾಯಿತಿ ಚುನಾವಣೆ ನಡೆಯುತ್ತಿದೆ ಎಂದು ತಿಳಿಸಿದರು.

ಮೈತ್ರಿ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ, ಪಟ್ಟಣ ಪಂಚಾಯಿತಿಯಲ್ಲಿ ನಾವೇ ಅಧಿಕಾರದಲ್ಲಿ ಇರುತ್ತೇವೆ. ಪಟ್ಟಣ ಪಂಚಾಯತ್‌ನಿಂದ ಆಗಬೇಕಾಗಿರುವ ಕೆಲಸಗಳನ್ನು ಸಾರ್ವಜನಿಕರಿಗೆ ಮಾಡಿಕೊಡುತ್ತೇವೆ. ಯಾವುದೇ ಕಾರಣಕ್ಕೂ ಮೈತ್ರಿ ಮುಖಂಡರು ಕಾಂಗ್ರೆಸ್ ಪಕ್ಷದತ್ತ ಹೋಗಬಾರದು, ಅಭಿವೃದ್ಧಿಗಾಗಿ ಮೈತ್ರಿ ಪಕ್ಷದ ಮುಖಂಡರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ, ಕಾಂಗ್ರೆಸ್ ನಾಯಕರಿಗೆ ಈಗಾಗಲೇ ಗೊತ್ತಾಗಿದೆ, ವೇಮಗಲ್ ಪಟ್ಟಣ ಪಂಚಾಯಿತಿಯಲ್ಲಿ ತಾವು ಅಧಿಕಾರಕ್ಕೆ ಬರುವುದಿಲ್ಲವೆಂದು, ಆದ್ದರಿಂದ ನಮ್ಮ ಪಕ್ಷದ ಮುಖಂಡರನ್ನು ಸೆಳೆಯಲು ಕಾಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಆಸೆ- ಆಮಿಷಗಳಿಗೆ ಒಳಗಾಗದೆ ಬಿಜೆಪಿ- ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಸಿಗುತ್ತದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ, ಮಾಜಿ ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಬಂಕ್ ಮಂಜುನಾಥ್, ಅರುಣ್ ಪ್ರಸಾದ್, ಸೂಲೂರು ಆಂಜಿನಪ್ಪ, ಬಣಕನಹಳ್ಳಿ ನಟರಾಜ್, ಡಾ.ರಮೇಶ್, ಕಡಗಟ್ಟೂರು ವಿಜಯ್ ಕುಮಾರ್, ಕೃಷ್ಣ, ವೆಂಕಟೇಶ್, ಜೆಸಿಬಿ ಸುಬ್ಬು, ಎಂ.ಐ.ಸಿ.ಟಿ ಮಂಜುನಾಥ್, ನವೀನ್ ಕುಮಾರ್, ಲೋಕೇಶ್ ಮರಿಯಪ್ಪ, ಕಾಂತರಾಜ್, ಭಾಗ್ಯಲಕ್ಷ್ಮೀ ನಾರಾಯಣಮೂರ್ತಿ, ಕುರುಗಲ್ ಗಿರೀಶ್, ರಾಮುಶಿವಣ್ಣ, ಸಿ.ಡಿ.ರಾಮಚಂದ್ರೆಗೌಡ, ತಂಬಳ್ಳಿ ಮುನಿಯಪ್ಪ, ವೇಮಗಲ್ ಸತೀಶ್ ಇದ್ದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’