ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹೇಮಾವತಿ ಬಡಾವಣೆಯ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 155ನೇ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ಗಾಂಧಿ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿ, ಗಾಂಧಿ ಕೇವಲ ವ್ಯಕ್ತಿಯಲ್ಲ. ಅವರೊಂದು ಜಾಗತಿಕ ಶಕ್ತಿ. ಭಾರತದ ಅಂತಸತ್ವ ಗಾಂಧಿಯವರ ಚಿಂತನೆಗಳಲ್ಲಿ ಅಡಗಿದೆ. ಗಾಂಧೀಜಿ ಹೊರತು ಪಡಿಸಿ ಆಧುನಿಕ ಭಾರತದ ಪರಿಕಲ್ಪನೆ ಅಸಾಧ್ಯ ಎಂದರು.
ಸತ್ಯ ಮಾರ್ಗದಲ್ಲಿ ನಡೆಯುತ್ತಲೇ ಭಾರತೀಯರಿಗೆ ಬದುಕಿನ ಮಾರ್ಗದರ್ಶಿಯಾಗಿ ನಿಂತ ಗಾಂಧಿ ಶಾಂತಿ ದೂತರಾಗಿದ್ದು ಅಹಿಂಸೆ, ಶಾಂತಿ, ಸಹಬಾಳ್ವೆ ಮತ್ತು ಸರ್ವಧರ್ಮ ಸಮನ್ವಯತೆಯ ಸಂಕೇತವಾಗಿ ನಮ್ಮ ಮುಂದಿದ್ದಾರೆ ಎಂದರು.ಹೊಸ ತಲೆಮಾರಿನ ಯುವಕರಿಗೆ ನಾವು ಗಾಂಧಿಜೀಯವರ ಚಿಂತನೆಗಳನ್ನು ತಲುಪಿಸಬೇಕಾಗಿದೆ. ಸನ್ಮಾರ್ಗದ ಮೂಲಕವೇ ಮಹಾತ್ಮರಾದ ಗಾಂಧಿಜೀಯವರ ತತ್ವಗಳ ತಳಹದಿ ಮೇಲೆ ಜನಸೇವೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿ ಜನ್ಮದಿನ ಅಂಗವಾಗಿ ಜನರ ಬಳಿಗೆ ಅವರ ಚಿಂತನೆಗಳನ್ನು ತಲುಪಿಸುವ ಸಲುವಾಗಿ ಇಂದು ದೇಶವ್ಯಾಪಿ ವಿಶೇಷವಾಗಿ ಗಾಂಧಿ ಸ್ಮರಣೆ ಮಾಡುತ್ತಿದೆ ಎಂದರು.