ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಭಗವಾನ್ ಬುದ್ಧರ ದಾತುವಿನ ಪ್ರತಿಷ್ಠಾಪನೆಯನ್ನು ಹೊಸದಾಗಿ ನಿರ್ಮಿಸಿರುವ ಸ್ತೂಪದಲ್ಲಿ ನೆರವೇರಿತು.ಅಧ್ಯಕ್ಷತೆಯನ್ನು ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಅಧ್ಯಕ್ಷ ಕಸಪ ಮಹಾಥೇರ ವಹಿಸಿದ್ದರು. ಶ್ರೀಲಂಕಾ ದೇಶದ ವಿನಯಾಲಂಕಾರಮಯರಾದ ಆನಂದ ಥೇರೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭಿಕ್ಷುಗಳಿಗೆ ಸಂಘದಾನ, ತಿಸರಣ ಹಾಗೂ ಶೀಲಯಾಚನೆ, ಬುದ್ಧ ವಂದನ, ಪರಿತ್ತ ಸುತ್ತ ಪಠಣ ಮತ್ತು ಧ್ಯಾನ, ಧಮ್ಮ ಪ್ರವಚನ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲ ಗ್ರಾಮದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.