ನೀರಿಗಾಗಿ ಜಲಮೂಲಗಳ ಸಂರಕ್ಷಣೆ ಅಗತ್ಯ

KannadaprabhaNewsNetwork | Published : Mar 23, 2025 1:30 AM

ಸಾರಾಂಶ

ನೀರು ಎಲ್ಲ ಜೀವಿಗಳಿಗೆ ಅವಶ್ಯಕ. ಆಹಾರ ಮತ್ತು ಗಾಳಿ ಎಷ್ಟು ಮುಖ್ಯವೋ ಅಷ್ಟೇ ನೀರೂ ಮುಖ್ಯ. ಅಸಮರ್ಪಕ ಬಳಕೆ, ಜಲಮಾಲಿನ್ಯ ಮತ್ತು ಹವಾಮಾನ ಬದಲಾವಣೆಯಂತಹ ಕಾರಣಗಳಿಂದ ನೀರಿನ ಕೊರತೆ ತೀವ್ರಗೊಳ್ಳುತ್ತಿದೆ, ಇದರಿಂದ ಕೃಷಿ, ಕೈಗಾರಿಕೆ ಮತ್ತು ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ ಕುಡಿಯುವ ನೀರಿನ ಸಮಸ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಗಂಭೀರ ಸಮಸ್ಯೆಯಾಗಿ ಪರಿವರ್ತನೆಗೊಳ್ಳುತ್ತಿದೆ, ಖಾಸಗಿ ಮತು ಸಾರ್ವಜನಿಕ ನೀರಿನ ಬಳಕೆ ಹೆಚ್ಚಾಗುತ್ತಿರುವುದರಿಂದ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಕೆಜಿಎಫ್‌ನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಮುಜಫರ್ ಎ ಮಾಂಜರಿ ತಿಳಿಸಿದರು.

ನಗರಸಭೆ ಸಭಾಗಂಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನೀರು ಎಲ್ಲ ಜೀವಿಗಳಿಗೆ ಅವಶ್ಯಕ. ಆಹಾರ ಮತ್ತು ಗಾಳಿ ಎಷ್ಟು ಮುಖ್ಯವೋ ಅಷ್ಟೇ ನೀರೂ ಮುಖ್ಯ. ಅಸಮರ್ಪಕ ಬಳಕೆ, ಜಲಮಾಲಿನ್ಯ ಮತ್ತು ಹವಾಮಾನ ಬದಲಾವಣೆಯಂತಹ ಕಾರಣಗಳಿಂದ ನೀರಿನ ಕೊರತೆ ತೀವ್ರಗೊಳ್ಳುತ್ತಿದೆ, ಇದರಿಂದ ಕೈಗಾರಿಕೆ ಮತ್ತು ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟರು.2ಂ50ರ ವೇಳೆಗೆ ನೀರಿನ ಕ್ಷಾಮ

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನೋದ್‌ಕುಮಾರ್ ಮಾತನಾಡಿ, ವಿಶ್ವ ಸಂಪನ್ಮೂಲ ಸಂಸ್ಥೆಯ ವರದಿ ಪ್ರಕಾರ, ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿರುವ ೧೭ ದೇಶಗಳಲ್ಲಿ ಭಾರತ ೧೩ ನೇ ಸ್ಥಾನದಲ್ಲಿದೆ, ೨೦೫೦ ರ ವೇಳೆಗೆ ನೀರಿನ ಬೇಡಿಕೆ ಶೇ೨೦-೨೫ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದರು,

ಜಲಮೂಲಗಳಾದ ನದಿಗಳು, ಕೆರೆಗಳು, ಬೂಗತ ಜಲಮೂಲಗಳನ್ನು ಕಾಪಾಡುವುದು ಅವಶ್ಯಕವಾಗಿದ್ದು ಇದರ ಜೊತೆಗೆ ಅನಗತ್ಯ ನೀರಿನ ಖರ್ಚು ಕಡಿಮೆ ಮಾಡಬೇಕು, ಜಲಮಾಲಿನ್ಯ ತಡೆಯುವುದು ಸಹ ಪ್ರಮುಖ ಅಂಶವಾಗಿದ್ದು, ಕೈಗಾರಿಕಾ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ನೀರಿನಲ್ಲಿ ಬಿಡದಂತೆ ನೋಡಿಕೊಳ್ಳುವುದು, ಮಳೆ ನೀರಿನ ಸಂಗ್ರಹಣೆ ಮತ್ತು ಮರುಬಳಕೆ ಬಗ್ಗೆ ಗಮನ ಹರಿಸಬೇಕೆಂದು ಸಭೆಯಲ್ಲಿ ಅಮೂಲ್ಯವಾದ ಸಲಹೆಗಳನ್ನು ನ್ಯಾಯಾಧೀಶರು ನೀಡಿದರು..ಬೇತಮಂಗಲ ಕೆರೆ ನೀರು ಘಟಕ

ವಕೀಲದ ಸಂಘದ ಅಧ್ಯಕ್ಷರಾದ ರಾಜಗೋಪಾಲಗೌಡ ಮಾತನಾಡಿ, ೧೨೨ ವರ್ಷಗಳಷ್ಟು ಹಳೆಯದಾದ ಬೇತಮಂಗಲದ ಕೆರೆಯ ಕುಡಿವ ನೀರಿನ ಶುದ್ಧೀಕರಣ ಘಟಕವನ್ನು ಉನ್ನತೀಕರಿಸಿ ನಗರದ ೩೫ ವಾರ್ಡ್‌ಗಳ ಜನರಿಗೆ ಸಹಿ ನೀರನ್ನು ಸರಬರಾಜು ಮಾಡಲು ಕ್ಷೇತ್ರದ ಶಾಸಕರಲ್ಲಿ ಮನವಿ ಮಾಡಿದರು, ನಗರದ ಜನರು ಫ್ಲೋರೈಡ್ ನೀರು ಉಪಯೋಗಿಸುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಕಳವಳ ವ್ಯಕ್ತಪಡಿಸಿದರು.

ಮನೆಗಳಲ್ಲಿ ಅಳವಡಿಸಿರುವ ಸೋಲಾರ್ ಸಿಸ್ಟಮ್, ಮನೆಯಲ್ಲಿ ಬೆಳೆಬಾಳುವ ನಲ್ಲಿಗಳು, ಫ್ಲೋರೈಡ್ ನೀರಿನಿಂದ ಒಗೆಯುವ ಬಟ್ಟೆ, ಇನ್ನೂ ಕುಡಿವ ನಿರಿನ ಫಿಲ್ಟರ್‌ಗಳು ಸೇರಿದಂತೆ ಎಲ್ಲವೂ ಅತಿ ಬೇಗನೆ ಶಿಥಿಲಗೊಳ್ಳುತ್ತವೆ, ಮುಂದಿನ ದಿನಗಳಲ್ಲಿ ಶಾಸಕರು ತಾಲೂಕಿನ ಸುತ್ತಲು ಇರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ನರಗದ ಜನತೆ ಶುದ್ಧ ಕುಡಿವ ನೀರಿನ್ನು ಸರಬರಾಜು ಮಾಡುವಂತೆ ಮನವಿ ಮಾಡಿದರು. 122 ವರ್ಷ ಹಳೆಯ ಘಟಕ

ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಎ.ಆರ್. ಶಿವಕುಮಾರ್ ಮಾತನಾಡಿ, ೨೦೨೫-೨೬ ನೇ ಸಾಲಿನ ವಿಶ್ವ ಜಲ ದಿನಾಚರಣೆ ಥೀಮ್ ಬಗ್ಗೆ ಮಾತನಾಡಿ, ೧೯೦೩ ರಲ್ಲಿ ಪ್ರಾರಂಭವಾಗಿರುವ ಬೇತಮಂಗಲ ಶುದ್ಧ ಕುಡಿವ ನೀರಿನ ಘಟಕ ಪ್ರಾರಂಭವಾಗಿ ೧೨೨ ವರ್ಷಗಳು ಕಳೆದಿದ್ದು, ಅಂದಿನ ಜನಸಂಖ್ಯೆ ಅನುಗುಣವಾಗಿ ಶುದ್ಧ ನೀರಿನ ಘಟಕವನ್ನು ಪ್ರಾರಂಭಿಸಲಾಗಿತ್ತು ಎಂದರು.

ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಿ

ಆದರೆ ಈಗ ನಗರದ ಜನಸಂಖ್ಯೆ ೨ ಲಕ್ಷ ಮೀರಿದೆ, ನಮ್ಮ ವ್ಯಾಪ್ತಿಯಲ್ಲಿ ಆಗುವಂತಹ ಕೆಲಸವನ್ನು ಮಾಡಬಹುದು, ಶುದ್ಧೀಕರಣದ ಘಟವನ್ನು ಮೇಲ್ದರ್ಜೆಗೆ ಏರಿಸಲು ಅನುದಾನದ ಅವಶ್ಯವಿದ್ದು, ಕ್ಷೇತ್ರದ ಶಾಸಕರಿಗೆ ಮನವಿ ಮಾಡಿದ್ದೇವೆ, ಅಗತ್ಯವಿರುವ ಅನುದಾನ ಜೊತೆಗೆ ಬೇತಮಂಗಲ ಕೆರೆಯು ನೀರಿನ ಸಾಮರ್ಥ್ಯವನ್ನು ಹೆಚ್ಚಿಸಲು ಶಾಸಕರ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಂ.ದAದ್ರಶೇಖರ್, ವಕೀಲರ ಸಂಘದ ಉಪಾಧ್ಯಕ್ಷರಾದ ಮಣಿವಣ್ಣನ್, ಜಲಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು

Share this article