ಕನ್ನಡಪ್ರಭ ವಾರ್ತೆ ಬೆಂಗಳೂರು
ರಂಗನತಿಟ್ಟು ಪಕ್ಷಿಧಾಮದ ಪಾರಂಪರಿಕ ಪ್ರವಾಸಿ ಕೇಂದ್ರವಾಗಿದ್ದು, ಅದರಿಂದ ಮಾಸಿಕ ಲಕ್ಷಾಂತರ ರು. ಆದಾಯ ಬರುತ್ತಿದೆ. ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಪಕ್ಷಿಧಾಮವು 40 ಎಕರೆ ವಿಸ್ತೀರ್ಣದಲ್ಲಿದೆ. ಇಲ್ಲಿ ಬೋಟಿಂಗ್ ಸೇರಿ ಪಕ್ಷಿಗಳ ವೀಕ್ಷಣೆಗೆ ಅವಕಾಶವಿದೆ. ಈ ಬೋಟಿಂಗ್ ವ್ಯವಸ್ಥೆಯಿಂದಲೇ ಪಕ್ಷಿಧಾಮಕ್ಕೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ.
ಬೋಟಿಂಗ್ ಸೇವೆ ನೀಡಲು ಗುತ್ತಿಗೆ ಆಧಾರದಲ್ಲಿ 15 ಬೋಟ್‌ಮೆನ್‌ಗಳು ಕೆಲಸ ಮಾಡುತ್ತಿದ್ದು, ಅವರು ಇದೀಗ ತಮ್ಮ ಕೆಲಸವನ್ನು ಕಾಯಂ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿ ಹೈಕೋರ್ಟ್ ವಕೀಲ ಪ್ರಶಾಂತ್ ಮಿಥುಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಪತ್ರ ಬರೆದಿದ್ದಾರೆ.ಬೋಟ್‌ಮೆನ್‌ಗಳು ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ 5.30ರವರೆಗೆ ಕೆಲಸ ಮಾಡುತ್ತಿದ್ದು, ಅವರಿಗೆ ಕನಿಷ್ಠ ವೇತನವೂ ಸಿಗುತ್ತಿಲ್ಲ. ಅಲ್ಲದೆ, ಈಗಾಗಲೇ ಇಲಾಖೆ ಅಡಿಯಲ್ಲಿ ಆನೆ ಮಾವುತರನ್ನು ಕಾಯಂ ಮಾಡಲಾಗಿದ್ದು, ಅದೇ ಮಾದರಿ ಅನುಸರಿಸಿ ರಂಗತಿಟ್ಟು ಪಕ್ಷಿಧಾಮದ ಬೋಟ್‌ಮೆನ್‌ಗಳನ್ನೂ ಕಾಯಂಗೊಳಿಸಬೇಕು. ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯ: