ವಿವಿಗಾಗಿ ಸರ್ಕಾರದ ವಿರುದ್ಧ ನಿರಂತರ ಹೋರಾಟ

KannadaprabhaNewsNetwork |  
Published : Feb 25, 2025, 12:46 AM IST
ಕನ್ನಡಪ್ರಭ ವಾರ್ತೆ ವಿಜಯಪುರ: ರಾಜ್ಯದ 9ವಿವಿಗಳನ್ನು ಸರ್ಕಾರ ಮುಚ್ಚಲು ಹೊರಟಿರುವುದು ದುರಂತ. ಉನ್ನತ ಶಿಕ್ಷಣಕ್ಕೆ ಹೆಸರುವಾಸಿಯಾದ ಕರ್ನಾಟಕದಲ್ಲಿ 9 ವಿವಿಗಳನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.ನಗರದ ಎಬಿವಿಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ ನೇತ್ರತ್ಬದ ಉಪಸಮೀತಿ ವಿವಿಗಳನ್ನು ಮುಚ್ಚಲು ವರದಿ ತಯಾರು ಮಾಡಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಈ ಹಿಂದಿನ ಸರ್ಕಾರ ಸ್ಥಾಪನೆ ಮಾಡಿದ ವಿವಿಗಳನ್ನು ಇವರು ರದ್ದು ಮಾಡಲು ಹೊರಟಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಸ್ಥಾಪಿತವಾದ ವಿವಿಗಳನ್ನು ರದ್ದು ಮಾಡುವುದಿಂದ ಆ ಜಿಲ್ಲೆಗಳು ಶೈಕ್ಷಣಿಕವಾಗಿ ಮತ್ತಷ್ಟು ಹಿಂದೆ ಬೀಳುತ್ತವೆ. ಈ ವಿವಿಗಳು ಇರುವುದರಿಂದ ದೂರದಲ್ಲಿ ಹೋಗಿ ಉನ್ನತ ಶಿಕ್ಷಣ ಕಲಿಯಲಾಗದವರಿಗೆ ಇದು ಅನುಕೂಲ ಆಗುತ್ತದೆ. ವಿವಿ ರದ್ದುಗೊಳಿಸುವ ಸರ್ಕಾರದ ನಡೆ ಶಿಕ್ಷಣ ವಿರೋಧಿ ನಡೆ, ವಿದ್ಯಾರ್ಥಿಗಳ ವಿರೋಧಿ ನಡೆಯಾಗಿದೆ. ಯಾವುದೇ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಒದಗಿಸಬೇಕಿದೆ. ಸರ್ಕಾರಕ್ಕೆ ಶಿಕ್ಷಣ ಎಂಬುದು ಹೊರೆ ಆಗುತ್ತಿದೆ. ವಿವಿಗಳಿಂದ ಲಾಭಾಂಶ ಮಾಡಲು ಇವರು ವಿವಿ ಮಾಡಿದ್ದಾರಾ?, ಸರ್ಕಾರ ವಿವಿಗಳಿಂದ ಲಾಭ ನಿರೀಕ್ಷೆ ಮಾಡಬಾರದು. ವಿವಿಗಳ ಶಿಕ್ಷಣದ ಮೂಲ ಕಲ್ಪನೆಯನ್ನೇ ಇವರು ಹಾಳು ಮಾಡುತ್ತಿದ್ದಾರೆ‌ ಯಾವಯಾವ ಯೋಜನೆಗಳಿಗೆಲ್ಲ 50ಸಾವಿರ ಕೋಟಿ ಅನುದಾನ ಇಡುತ್ತೀರಿ. ವಿವಿಗಳಿಗಾಗಿ ಕೇವಲ 350 ಕೋಟಿ ಅನುದಾನ ಕೊಡಲು ಆಗುವುದಿಲ್ಲ‌ ಎಂದರೆ ಈ ಸರ್ಕಾರ ಯಾವ ಲೆವೆಲ್ ಗೆ ಬಂದು ನಿಂತಿದೆ ಎಂಬುದು ತಿಳಿಯಲಿದೆ. ಬೊಕ್ಕಸ ಖಾಲಿ ಮಾಡಿಕೊಂಡಿರುವ ಸರ್ಕಾರಕ್ಕೆ ಮೊನ್ನೆ ದಿನ ಪ್ರತಿಭಟನೆ ಮಾಡಿದ ಎಬಿವಿಪಿ ಕಾರ್ಯಕರ್ತರು ಭಿಕ್ಷೆ ಬೇಡಿ 3528 ರೂಪಾಯಿ ಹಣವನ್ನು ಸಿಎಂ ಅವರ ಖಾತೆಗೆ ಹಾಕಿದ್ದಾರೆ. ಎಬಿವಿಪಿಯಿಂದ ನಗರದಲ್ಲಿ ಭಿಕ್ಷಾಟನೆ ಮಾಡಿ ಹಣ ಕೂಡಿ ಸಿಎಂ ಖಾತೆಗೆ ಹಾಕಿದ್ದೇವೆ. ಮೊನ್ನೆ ನಡೆದ ಎಬಿವಿಪಿ ದುಂಡುಮೇಜಿನ ಸಭೆಯಲ್ಲಿ ವಿವಿಗಳನ್ನು ಮುಚ್ಚಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ತೀರ್ಮಾನಿಸಲಾಗಿದೆ. ಇದೇ ವಿಚಾರಕ್ಕಾಗಿ ಮುಂದಿನ ಒಂದು ವಾರ ರಾಜ್ಯಾದ್ಯಂತ ವಿವಿಧೆಡೆ ಹೋರಾಟ ಮಾಡಲಿದೆ. ಹೋರಾಟದಲ್ಲಿ ಸ್ವಾಮೀಜಿಗಳು, ಶಿಕ್ಷಣ ತಜ್ಞರು ಸಹ ಭಾಗವಹಿಸಲಿದ್ದಾರೆ. ಈ ಸಾಲಿನ ಬಜೆಟ್ ನಲ್ಲಿ ಸರ್ಕಾರ ವಿವಿಗಳಿಗೆ ಅನುದಾನ ಕೊಡಲೇಬೇಕು ಎಂದು ಒತ್ತಾಯಿಸಿದರು.ಶಿಕ್ಷಣ ಎನ್ನುವುದು ಸರ್ಕಾರಕ್ಕೆ ಹೊರೆಯಲ್ಲ ಅದು ಆಯಾ ಸರ್ಕಾರಗಳ ಜವಾಬ್ದಾರಿ. ಸರ್ಕಾರಗಳು ಸಮಸ್ಯೆಗಳ ಬಗ್ಗೆ ಮಾತನಾಡಬಾರದು ಹೊರತು ಪರಿಹಾರದ ಬಗ್ಗೆ ಮಾತನಾಡಬೇಕು. ಕರ್ನಾಟಕ ರಾಜ್ಯ ಗುಣಮಟ್ಟದ ವಿಶ್ವ ವಿದ್ಯಾಲಯಗಳನ್ನು ಹೊಂದಿರುವ ರಾಜ್ಯವಾಗಿದ್ದು, ಗುಣಮಟ್ಟದ ಉನ್ನತ ಶಿಕ್ಷಣ ದೊರೆಯುವ ಕಾರಣಕ್ಕೆ ಬೇರೆ ಬೇರೆ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಕರ್ನಾಟಕಕ್ಕೆ ಉನ್ನತ ಶಿಕ್ಷಣವನ್ನ ಪಡೆಯಲು ಬರುತ್ತಾರೆ. ಸ್ಥಾಪನೆಯಾಗಿರುವ ಹೊಸ ವಿಶ್ವವಿದ್ಯಾಲಯಗಳಲ್ಲಿ ಕೆಲವೊಂದಿಷ್ಟು ಮೂಲಭೂತ ಸಮಸ್ಯೆಗಳು ಇರುವುದು ನಿಜ. ಆ ಕೊರತೆಯನ್ನು ನೀಗಿಸಬೇಕಾದದ್ದು ಸರ್ಕಾರಗಳ ಮೂಲ ಆದ್ಯತೆ ಆಗಬೇಕು, ಹೊರತು ವಿವಿಗಳನ್ನು ಮುಚ್ಚುವುದು ಪರಿಹಾರವಲ್ಲ. ಸರ್ಕಾರ ಜನಪರ ವಿದ್ಯಾರ್ಥಿಪರ ಕಾರ್ಯ ಮಾಡುವುದೇ ಆದರೆ ಸವಾಲನ್ನು ಸ್ವೀಕರಿಸಿ ಉತ್ತಮ ಗುಣಮಟ್ಟದ ವಿಶ್ವವಿದ್ಯಾಲಯಗಳನ್ನಾಗಿ ನಿರ್ಮಾಣ ಮಾಡಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ.ಸಾಮಾನ್ಯವಾಗಿ 10,000 ವಿದ್ಯಾರ್ಥಿಗಳಿಗೆ ಒಂದು ವಿಶ್ವವಿದ್ಯಾಲಯಗಳು ಇರಬೇಕೆಂಬುವುದು ಆದರ್ಶವಾದ ವಿಚಾರವಾಗಿದೆ. ಆದರೆ ನಮ್ಮಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ ಈಗಿರುವ ವಿಶ್ವವಿದ್ಯಾಲಯಗಳ ಸಂಖ್ಯೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪತ್ರ ಚಳುವಳಿ, ಸಚಿವರ ಕಚೇರಿಗೆ ಮುತ್ತಿಗೆ, ಸಹಿ ಸಂಗ್ರಹ, ರಸ್ತೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮೂಲಕ ವಿಭಿನ್ನ ಪ್ರತಿಭನೆಯನ್ನು ಮಾಡಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸ್ನೇಹಾ ಹಿರೇಮಠ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸಂದೀಪ ಅರಳಗುಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಚಿತ್ರ: 24BIJ01ಬರಹ: ಸರ್ಕಾರದ ವಿರುದ್ಧ ಹೋರಾಟ ಖಚಿತ: ಎಬಿವಿಪಿ ಕಾರ್ಯದರ್ಶಿ ಸಚಿನ ಕುಳಗೇರಿ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಸರ್ಕಾರ ಮುಚ್ಚಲು ಹೊರಟಿರುವುದು ದುರಂತ. ಉನ್ನತ ಶಿಕ್ಷಣಕ್ಕೆ ಹೆಸರುವಾಸಿಯಾದ ಕರ್ನಾಟಕದ 9 ವಿವಿ ಬಂದ್‌ ಮಾಡಲು ಮುಂದಾಗಿರುವ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಸರ್ಕಾರ ಮುಚ್ಚಲು ಹೊರಟಿರುವುದು ದುರಂತ. ಉನ್ನತ ಶಿಕ್ಷಣಕ್ಕೆ ಹೆಸರುವಾಸಿಯಾದ ಕರ್ನಾಟಕದ 9 ವಿವಿ ಬಂದ್‌ ಮಾಡಲು ಮುಂದಾಗಿರುವ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.

ನಗರದ ಎಬಿವಿಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಉಪಸಮಿತಿ ವಿವಿಗಳನ್ನು ಮುಚ್ಚಲು ವರದಿ ತಯಾರು ಮಾಡಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಈ ಹಿಂದಿನ ಸರ್ಕಾರ ಸ್ಥಾಪನೆ ಮಾಡಿದ ವಿವಿಗಳನ್ನು ರದ್ದು ಮಾಡಲು ಹೊರಟಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಸ್ಥಾಪಿತವಾದ ವಿವಿಗಳನ್ನು ರದ್ದು ಮಾಡುವುದಿಂದ ಆ ಜಿಲ್ಲೆಗಳು ಶೈಕ್ಷಣಿಕವಾಗಿ ಮತ್ತಷ್ಟು ಹಿಂದೆ ಬೀಳುತ್ತವೆ. ಯಾವುದೇ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಒದಗಿಸಬೇಕಿದೆ. ಸರ್ಕಾರಕ್ಕೆ ಶಿಕ್ಷಣ ಹೊರೆಯಾಗುತ್ತಿದೆ. ವಿವಿಗಳಿಂದ ಲಾಭಾಂಶ ಮಾಡಲು ಇವರು ವಿವಿ ಮಾಡಿದ್ದಾರಾ?, ಸರ್ಕಾರ ವಿವಿಗಳಿಂದ ಲಾಭ ನಿರೀಕ್ಷೆ ಮಾಡಬಾರದು. ವಿವಿಗಳ ಶಿಕ್ಷಣದ ಮೂಲ ಕಲ್ಪನೆಯನ್ನೇ ಇವರು ಹಾಳು ಮಾಡುತ್ತಿದ್ದಾರೆ‌ ಯಾವಯಾವೋ ಯೋಜನೆಗಳಿಗೆಲ್ಲ ₹ 50 ಸಾವಿರ ಕೋಟಿ ಅನುದಾನ ಇಡುತ್ತೀರಿ. ವಿವಿಗಳಿಗಾಗಿ ಕೇವಲ ₹ 350 ಕೋಟಿ ಅನುದಾನ ಕೊಡಲು ಆಗುವುದಿಲ್ಲ‌ವೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬೊಕ್ಕಸ ಖಾಲಿ ಮಾಡಿಕೊಂಡಿರುವ ಸರ್ಕಾರಕ್ಕೆ ಮೊನ್ನೆ ದಿನ ಪ್ರತಿಭಟನೆ ಮಾಡಿ ಎಬಿವಿಪಿ ಕಾರ್ಯಕರ್ತರು ಭಿಕ್ಷೆ ಬೇಡಿ ₹ 3528 ಹಣವನ್ನು ಸಿಎಂ ಅವರ ಖಾತೆಗೆ ಹಾಕಿದ್ದಾರೆ. ಎಬಿವಿಪಿಯಿಂದ ನಗರದಲ್ಲಿ ಭಿಕ್ಷಾಟನೆ ಮಾಡಿ ಹಣ ಕೂಡಿ ಸಿಎಂ ಖಾತೆಗೆ ಹಾಕಿದ್ದೇವೆ ಎಂದು ಸಿಎಂ ಖಾತೆಗೆ ಹಣ ಜಮೆ ಮಾಡಿದ ರಸೀದಿ ಪ್ರದರ್ಶಿಸಿದರು. ಮೊನ್ನೆ ನಡೆದ ಎಬಿವಿಪಿ ದುಂಡುಮೇಜಿನ ಸಭೆಯಲ್ಲಿ ವಿವಿಗಳನ್ನು ಮುಚ್ಚಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ತೀರ್ಮಾನಿಸಲಾಗಿದೆ. ಈ ವಿಚಾರವಾಗಿ ಮುಂದಿನ ಒಂದು ವಾರ ರಾಜ್ಯಾದ್ಯಂತ ವಿವಿಧೆಡೆ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಹೋರಾಟದಲ್ಲಿ ಸ್ವಾಮೀಜಿಗಳು, ಶಿಕ್ಷಣ ತಜ್ಞರು ಸಹ ಭಾಗವಹಿಸಲಿದ್ದಾರೆ. ಈ ಸಾಲಿನ ಬಜೆಟ್‌ನಲ್ಲಿ ಸರ್ಕಾರ ವಿವಿಗಳಿಗೆ ಅನುದಾನ ಕೊಡಲೇಬೇಕು ಎಂದು ಒತ್ತಾಯಿಸಿದರು.

ಸ್ಥಾಪನೆಯಾಗಿರುವ ಹೊಸ ವಿಶ್ವವಿದ್ಯಾಲಯಗಳಲ್ಲಿ ಕೆಲವು ಮೂಲಭೂತ ಸಮಸ್ಯೆಗಳು ಇರುವುದು ನಿಜ. ಆ ಕೊರತೆಯನ್ನು ನೀಗಿಸಬೇಕಾದದ್ದು ಸರ್ಕಾರಗಳ ಆದ್ಯತೆ ಆಗಬೇಕು, ಹೊರತು ವಿವಿಗಳನ್ನು ಮುಚ್ಚುವುದು ಪರಿಹಾರವಲ್ಲ. ಸರ್ಕಾರ ಜನಪರ ವಿದ್ಯಾರ್ಥಿಪರ ಕಾರ್ಯ ಮಾಡುವುದೇ ಆದರೆ ಸವಾಲನ್ನು ಸ್ವೀಕರಿಸಿ ಉತ್ತಮ ಗುಣಮಟ್ಟದ ವಿಶ್ವವಿದ್ಯಾಲಯಗಳನ್ನಾಗಿ ನಿರ್ಮಾಣ ಮಾಡಬೇಕೆಂದು ಎಬಿವಿಪಿ ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪತ್ರ ಚಳುವಳಿ, ಸಚಿವರ ಕಚೇರಿಗೆ ಮುತ್ತಿಗೆ, ಸಹಿ ಸಂಗ್ರಹ, ರಸ್ತೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸ್ನೇಹಾ ಹಿರೇಮಠ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸಂದೀಪ ಅರಳಗುಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ