ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಸಮಾಜಕ್ಕೆ ಆದರ್ಶ ಪುರುಷ: ಶಾಸಕ ಶ್ರೀನಿವಾಸ್ ಅಭಿಮತ

KannadaprabhaNewsNetwork | Published : Dec 9, 2024 12:48 AM

ಸಾರಾಂಶ

ತರೀಕೆರೆ: ಡಾ.ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ, ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸಮಾಜಕ್ಕೆ ಅವರು ಆದರ್ಶ ಪುರುಷರಾಗಿದ್ದಾರೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ತರೀಕೆರೆ: ಡಾ.ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ, ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸಮಾಜಕ್ಕೆ ಅವರು ಆದರ್ಶ ಪುರುಷರಾಗಿದ್ದಾರೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಸದ್ಗುರು ಜನಸೇವಾ ಫೌಂಡೇಷನ್ ವತಿಯಿಂದ, ತಾಲೂಕು ಲಿಂಗದಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ನಡೆದ ಡಾ. ಅಂಬೇಡ್ಕರ್ ಜೀವನ ಮೌಲ್ಯ ಮತ್ತು ವಿಚಾರಧಾರೆ ಹಾಗೂ ಕಾನೂನು ಅರಿವು ಮೂಡಿಸುವ ನಾಟಕೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರು ಮಾತನಾಡಿದರು. ನಾವೆಲ್ಲರೂ ಅಂಬೇಡ್ಕರ್‌ ಅವರ ಆದರ್ಶಗಳನ್ನು ಪಾಲಿಸಬೇಕು. ಇಂತಹ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿರುವ ಸದ್ಗುರು ಜನಸೇವಾ ಫೌಂಡೇಷನ್ ಉದ್ದೇಶ ಪ್ರಶಂಸನೀಯ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಸದ್ಗುರು ಜನಸೇವಾ ಫೌಂಡೇಷನ್‌ ಅಧ್ಯಕ್ಷ ಟಿ.ಎನ್.ಜಗದೀಶ್ ಮಾತನಾಡಿದರು. ಮಾಜಿ ತಾಪಂ ಅಧ್ಯಕ್ಷ ರವಿಕುಮಾರ್, ಕೆಡಿಪಿ ಸದಸ್ಯರಾದ ರಚನಾ ಶ್ರೀನಿವಾಸ್, ಸದ್ಗುರು ಜನಸೇವಾ ಫೌಂಡೇಷನ್ ಕಾಯ೯ದಶಿ೯ ದೇವರಾಜ್ ಟಿ.ಎಸ್., ಖಚಾಂಚಿ ದಶ೯ನ್ ದುಗ್ಲಾಪುರ, ವಸಂತ, ರವಿ ಶಾಂತಿಪುರ, ವಿನೋದ್, ಲಿಂಗದಹಳ್ಳಿ ಗ್ರಾಪಂ ಸವ೯ ಸದಸ್ಯರು ಮತ್ತು ಅಭಿವೃದ್ಧಿ ಅಧಿಕಾರಿ ನಾಗರಾಜ್, ಯುವ ಸ್ಫೂತಿ೯ ಅಕಾಡೆಮಿ ಅಧ್ಯಕ್ಷ ಸುಂದರೇಶ್ ಹಾಗೂ ಸದ್ಗುರು ಜನಸೇವಾ ಫೌಂಡೇಷನ್ ಸವ೯ ಸದಸ್ಯರು, ಜಯ ಕನಾ೯ಟಕ ಸಂಘಟನೆ ಪದಾಧಿಕಾರಿಗಳು ಮತ್ತು ಶಾಲಾ-ಕಾಲೇಜಿನ ಪ್ರಾಶುಂಪಾಲರು, ಉಪನ್ಯಾಸಕರು, ಶಿಕ್ಷಕರು ಮತ್ತು ವಿದ್ಯಾಥಿ೯ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

- - - -8ಕೆಟಿಆರ್.ಕೆ.1ಃ.ಜೆಪಿಜಿ:

ತರೀಕೆರೆ ಸಮೀಪದ ಲಿಂಗದಹಳ್ಳಿಯಲ್ಲಿ ಡಾ.ಅಂಬೇಡ್ಕರ್ ಕುರಿತ ನಾಟಕೋತ್ಸವ ಕಾಯ೯ಕ್ರಮವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಸದ್ಗುರು ಜನಸೇವಾ ಫೌಂಡೇಷನ್ ಅಧ್ಯಕ್ಷ ಜಗದೀಶ್ ಟಿ.ಎನ್. ಕೆಡಿಪಿ ಸದಸ್ಯೆ ರಚನ ಶ್ರೀನಿವಾಸ್ ಮತ್ತಿತರರು ಇದ್ದರು.

Share this article