ತಾಪಂ ಕಚೇರಿಯಲ್ಲಿ ಸಂವಿಧಾನದ ದಿನಾಚರಣೆ

KannadaprabhaNewsNetwork |  
Published : Nov 27, 2026, 01:15 AM IST
000 | Kannada Prabha

ಸಾರಾಂಶ

ತಾಪಂ ಕಚೇರಿಯಲ್ಲಿ ಸಂವಿಧಾನದ ದಿನಾಚರಣೆ

ತುಮಕೂರು: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಂದು ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಸಾಮೂಹಿಕವಾಗಿ ಓದುವುದರ ಮೂಲಕ ಸಂವಿಧಾನ ದಿನಾಚರಣೆಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀನಾರಾಯಣ ಸ್ವಾಮಿ ಅವರು ಭಾರತದ ಸಂವಿಧಾನದ ಪ್ರಸ್ತಾವನೆ(ಪೀಠಿಕೆ)ಯನ್ನು ವಾಚಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆದುಕೊಳ್ಳುವ ಪ್ರತಿಜ್ಞೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಲೋಕೇಶ್ ಕುಮಾರ್ ಬಿ, ಸಹಾಯಕ ನಿರ್ದೇಶಕ(ಗ್ರಾ ಉ), ಎಸ್ ಎಸ್ ಮಂಜುನಾಥ್, ಸಹಾಯಕ ಲೆಕ್ಕಧಿಕಾರಿ ಪರಮೇಶ್ವರ ಎಚ್ ಕೆ, ಸಹಾಯಕ ನಿರ್ದೇಶಕ(ಅ ದಾ) ಗಂಗಾಧರ್, ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಸಂವಿಧಾನದ ಮಹತ್ವ ಮತ್ತು ಅದರ ಆಶಯಗಳನ್ನು ಸ್ಮರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಾವುದೇ ಬೇಧವಿಲ್ಲದೆ ಸಮಾನತೆ ಸಾರುವ ಗ್ರಂಥವೇ ಸಂವಿಧಾನ: ನ್ಯಾ. ಸೌಭಾಗ್ಯ ಭೂಷೇರ್
ಸಂವಿಧಾನದ ಆಶಯಗಳನ್ನು ಈಡೇರಿಸುವುದು ಪ್ರತಿಯೊಬ್ಬರ ಕರ್ತವ್ಯ: ಸಚಿವ ಸಿ. ಪುಟ್ಟರಂಗಶೆಟ್ಟಿ