ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಮಹಿಳಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಸಂವಿಧಾನ ಮೂಲಭೂತ ತತ್ವಗಳ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ಸಂವಿಧಾನ ಓದಿ ಅರ್ಥೈಸಿಕೊಳ್ಳಿವಿಶ್ವದಲ್ಲಿ ಇಂಗ್ಲೆಂಡ್ ಸಂವಿಧಾನ ಹೊರತುಪಡಿಸಿ 214 ದೇಶಗಳು ತಮ್ಮದೇ ಆದ ಲಿಖಿತ ಸಂವಿಧಾನವನ್ನು ಹೊಂದಿವೆ. ನಮ್ಮ ಸಂವಿಧಾನ ರಚನಾ ಕಾರ್ಯವು 1946ರಲ್ಲಿ ಪ್ರಾರಂಭವಾಗಿ 1949 ರಲ್ಲಿ ಮುಗಿದರೂ ವಾಸ್ತವವಾಗಿ 2ವರ್ಷ,11ತಿಂಗಳು,18 ದಿನಗಳ ಕಾಲ ಸಂವಿಧಾನ ರಚನೆ ಮಾಡಲಾಯಿತು ಎಂದು ಭಾಬಾ ಸಾಹೇಬರೇ ಹೇಳಿದ್ದಾರೆ. ಭಾರತ ದೇಶದ ಪರಮೋಚ್ಚ ಶಾಸನವೇ ನಮ್ಮ ಸಂವಿಧಾನವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಇದನ್ನು ಓದಿ ಅರ್ಥೈಸಿಕೊಳ್ಳಬೇಕಿದೆ ಎಂದರು.ನಮ್ಮದು ಲಿಖಿತ ಮತ್ತು ಬೃಹತ್ ಸಂವಿಧಾನವಾಗಿದೆ.ಇಂಗ್ಲೇಂಡ್ ಸಂವಿಧಾನ ಹೊರತು ಪಡಿಸಿ ಉಳಿದವು ಲಿಖಿತ ರೂಪದಲ್ಲಿ ಇದೆ.ನಮ್ಮ ಸಂವಿಧಾನದಲ್ಲಿ 395 ವಿಧಿಗಳು,8ಅನುಸೂಚಿಗಳು,22 ಭಾಗಗಳನ್ನು ಒಳಗೊಂಡಿದೆ.ನಮ್ಮದು ಸಂಸದೀಯ ವ್ಯವಸ್ಥೆಯ ಸರ್ಕಾರ ಹೊಂದಿದ್ದರೆ, ಅಮೆರಿಕದ್ದು ಅಧ್ಯಕ್ಷೀಯ ಸರ್ಕಾರವಾಗಿದೆ. ಚುನಾವಣೆ ನಮ್ಮ ಸಂವಿಧಾನದ ಮಹಾಶಕ್ತಿ ಎಂದರು.