ಬಸವಾಪಟ್ಟಣ ಗ್ರಾಪಂಗೆ ಸಂವಿಧಾನ ಜಾಗೃತಿ ರಥ
ಬಸವಾಪಟ್ಟಣ: ಭಾರತದ ಸಂವಿಧಾನ ದೇಶದ ಜನತೆಯ ಭದ್ರತೆಯ ಪ್ರತೀಕವಾಗಿದೆ. ಎಷ್ಟೇ ವರ್ಷಗಳಾದರೂ ದೇಶದ ಸಮಗ್ರತೆ, ಐಕ್ಯತೆಗೆ ಧಕ್ಕೆ ಬಾರದ ರೀತಿಯಲ್ಲಿ ಸಂವಿಧಾನವನ್ನು ರಚಿಸಲಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರ ಸುಮಾರು ೩ ವರ್ಷಗಳ ಚಿಂತನೆ ಮತ್ತು ಹಲವು ವರ್ಷಗಳ ಅವರ ಅಧ್ಯಯನದ ಫಲವಾಗಿ ಭಾರತ ದೇಶವು ಸುಭದ್ರ ಸಂವಿಧಾನವನ್ನು ಹೊಂದಿದೆ ಎಂದು ಬಸವಾಪಟ್ಟಣ ಗ್ರಾಮದ ಕೆ.ಪಿ.ಎಸ್ ಶಾಲೆಯ ಪಿಯು ವಿಭಾಗದ ರಾಜ್ಯಶಾಸ್ತ್ರ ಉಪನ್ಯಾಸಕ ಹರೀಶ್ ತಿಳಿಸಿದರು.ಗ್ರಾಮ ಪಂಚಾಯಿತಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಸ್ವಾಗತಿಸಿ ಮಾತನಾಡಿ, ‘ನಮ್ಮ ದೇಶದ ಸಂವಿಧಾನವು ಬಹಳ ವಿಶಾಲವಾಗಿದೆ. ನಮ್ಮದು ಬೃಹತ್ ಸಂವಿಧಾನವಾಗಿದ್ದು ದೇಶದ ಜನತೆಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಮೂಲಭೂತ ಹಕ್ಕುಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಸುಗಮವಾಗಿ ಪ್ರಜೆಗಳು ಜೀವಿಸಲು ಇವುಗಳನ್ನು ನೀಡಲಾಗಿದೆ. ದೇಶದ ಪ್ರಜೆಗಳು ಕೆಲವು ಕರ್ತವ್ಯಗಳನ್ನು ಸಹ ನಿರ್ವಹಿಸುವ ಬಗ್ಗೆಯೂ ಸಂವಿಧಾನದಲ್ಲಿ ತಿಳಿಸಲಾಗಿದೆ. ಎಲ್ಲರೂ ಸಂವಿಧಾನದ ಹಾದಿಯಲ್ಲೇ ನಡೆಯಬೇಕು. ಇದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಆಶಯವಾಗಿತ್ತು ಎಂದು ತಿಳಿಸಿದರು.
ಇದಕ್ಕೂ ಮೊದಲು ಬಸವಾಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಸಂವಿಧಾನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಕೆ.ಪಿ.ಎಸ್ ಶಾಲೆಯ ವಿದ್ಯಾರ್ಥಿಗಳು ಎಸ್‌ಡಿವಿಡಿಎಸ್ ಶಾರದ ವಿದ್ಯಾಸಂಸ್ಥೆ ಕಾಲೇಜು ವಿಭಾಗದ ಸುಮಾರು ೧೫೦೦ ವಿದ್ಯಾರ್ಥಿಗಳು ಅಲ್ಲದೆ ಗ್ರಾಮ ಪಂಚಾಯಿತಿ, ತಾಲೂಕು ಅಡಳಿತದ ಇಲಾಖೆಯ ಅಧಿಕಾರಿಗಳು, ಅರೋಗ್ಯ ಇಲಾಖಾಧಿಕಾರಿಗಳು, ಅಂಬೇಡ್ಕರ್ ಯುವಕ ಸಂಘ ಬಸವಾಪಟ್ಟಣ ಗ್ರಾಮಪಂಚಾಯಿತಿ ಅಧ್ಯಕ್ಷೆ ರಾಧಾ, ಉಪಾಧ್ಯಕ್ಷ ಕುಮಾರ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರವಿಕುಮಾರ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಡಾ.ಅಶೋಕ್, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವೀರಭದ್ರಪ್ಪ, ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್ ಅಲ್ಲದೆ ಮಾಜಿ ಅಧ್ಯಕ್ಷರಾದ ಪ್ರಶಾಂತ್, ಮಹೇಂದ್ರಕುಮಾರ್, ಅನುಷಾ ಯೋಗೇಶ್, ಮಾಜಿ ಉಪಾಧ್ಯಕ್ಷರಾದ ವಸಂತ್‌ಕುಮಾರ್, ರಾಣಿಶಂಕರಶೆಟ್ಟಿ. ಯೋಗೇಶ್, ಮಂಜುನಾಥ್, ಪುಟ್ಟಸ್ವಾಮಿ ಬಹುಜನ, ರಮೇಶ್ ಎಸ್.ಆರ್, ಯೋಗೇಶ್ ಅಂಬೇಡ್ಕರ್ ಯುವಕ ಸಂಘದ ಸದಸ್ಯರು ಮತ್ತಿತರರು ಹಾಜರಿದ್ದರು.ಬಸವಾಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಜನಪ್ರತಿನಿಧಿಗಳು ಸ್ವಾಗತಿಸಿದರು.