ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಭಾರತೀ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ರಾಜ್ಯಶಾಸ್ತ್ರ, ಇತಿಹಾಸ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ನಡೆದ 76ನೇ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿ, ಸ್ವಾತಂತ್ರ್ಯ, ಸಮಾನತೆ, ನ್ಯಾಯಾಂಗ ವ್ಯವಸ್ಥೆಯನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಅಂಬೇಡ್ಕರ್ ದೇಶದ ಪ್ರತಿಯೊಬ್ಬ ಪ್ರಜೆಗೆ ನ್ಯಾಯ ಒದಗಿಸಿದ್ದಾರೆ ಎಂದರು.
ವಿಶ್ವದ ಸಂವಿಧಾನಗಳಲ್ಲಿ ಭಾರತ ಸಂವಿಧಾನವು ಶ್ರೇಷ್ಠವಾಗಿದೆ. ಪ್ರತಿಯೊಬ್ಬರು ಸಂವಿಧಾನ ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿ ಕೊಂಡು ಆಶಯಗಳನ್ನು ಪಾಲನೆ ಮಾಡಬೇಕು. ತಮಗೆ ನೀಡಿರುವ ಹಕ್ಕು ಹಾಗೂ ಕರ್ತವ್ಯಗಳಿಗೆ ಚ್ಯುತಿ ಬಾರದಂತೆ ನಡೆಯಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಡಾ.ಎಂ.ಎಸ್.ಮಹದೇವಸ್ವಾಮಿ ಅವರು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಯಾವುದೇ ಧರ್ಮ, ಜಾತಿ, ಭಾಷೆಯಾದರೂ ವಿವಿಧತೆಯಲ್ಲಿ ಏಕತೆ ಇದೆ. ಹೀಗಾಗಿ ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.
ಇದೇ ವೇಳೆ ಭಾರತ ಸಂವಿಧಾನದ ಪ್ರಸ್ತಾವನೆಯನ್ನೂ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಸಂಯೋಜಕರಾದ ಬಿ.ಕೆ,ಕೃಷ್ಣ, ಟಿ. ಸುಜಾತ, ಎಚ್.ಎಲ್ ನಿಸರ್ಗ, ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ. ತೇಜೇಶ್ ಕುಮಾರ್, ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದರು.ನಾಳೆ ಕವಯತ್ರಿ ಅನಿತಾ ಚೇತನರ ಮೂರು ಪುಸ್ತಕಗಳ ಲೋಕಾರ್ಪಣೆ
ಕೆ.ಆರ್.ಪೇಟೆ: ಪಟ್ಟಣದ ಸ್ಕೂಲ್ ಆಫ್ ಇಂಡಿಯಾ ವತಿಯಿಂದ ನ.29ರಂದು ಶಾಲಾ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಹಾಗೂ ಕವಯತ್ರಿ ಬಿ.ಆರ್.ಅನಿತಾ ಚೇತನ್ ಬಾರ್ಗಲ್ ಅವರ ಮೂರು ಪುಸ್ತಕಗಳ ಲೋಕಾರ್ಪಣೆ ನಡೆಯಲಿದೆ.ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ, ಸಾಹಿತಿ ಟಿ.ಸತೀಶ್ ಜವರೇಗೌಡ ಶಿಕ್ಷಕಿ ಮತ್ತು ಕವಯತ್ರಿ ಬಿ.ಆರ್. ಅನಿತಾ ಚೇತನ್ ಬಾರ್ಗಲ್ ಅವರ ‘ಭಾವನೆಗೆ ಬಣ್ಣ ಹಚ್ಚೋ ಬಯಕೆ’ (ಕವನ ಸಂಕಲನ), ‘ಶ್ರೀರಮಣ ಮಹರ್ಷಿ’ ಮತ್ತು ‘ವಿಶ್ವಶಾಂತಿಗಾಗಿ ಸಂದೇಶ ಸಾರಿದ ದಾದಲೇಖರಾಜ್’ (ಜೀವನ ಚರಿತ್ರೆ) ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡುವರು. ಅತಿಥಿಯಾಗಿ ಹಿರಿಯ ಸಾಹಿತಿ ಶಿ.ಕುಮಾರಸ್ವಾಮಿ (ಶಿಕು) ಪಾಲ್ಗೊಳ್ಳುವರು. ಶಾಲೆ ಪ್ರಾಂಶುಪಾಲೆ ಶೈನಿ ಮೇರಿ ಡಯಾಸ್ ಅಧ್ಯಕ್ಷತೆ ವಹಿಸುವರು. ಕೃತಿಕಾರರಾದ ಬಿ.ಆರ್.ಅನಿತಾ ಚೇತನ್ ಬಾರ್ಗಲ್ ಉಪಸ್ಥಿತರಿರುವರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.