ಕನ್ನಡಪ್ರಭವಾರ್ತೆ ತುರುವೇಕೆರೆ
ಹರಕನಕಟ್ಟೆಯಲ್ಲಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಶಿಂಷಾ ನದಿ ಪಾತ್ರವಾಗಿರುವ ಹರಕನಕಟ್ಟೆ ಮತ್ತು ಗುಡ್ಡೇನಹಳ್ಳಿ ನಡುವೆ ದೊಡ್ಡ ಹಳ್ಳವೊಂದು ಹಾದು ಹೋಗಿದೆ. ಮಳೆಗಾಲದಲ್ಲಂತೂ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದುದರಿಂದ ಜನರ ಓಡಾಟಕ್ಕೆ ತೀವ್ರ ತೊಂದರೆಯಾಗಿತ್ತು. ಇದನ್ನು ಮನಗಂಡ ತಾವು ಸರ್ಕಾರಕ್ಕೆ ಸುಮಾರು 4.90 ಕೋಟಿ ವೆಚ್ಚದಲ್ಲಿ ಸಂಪರ್ಕ ಸೇತುವೆ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದ್ದೆ. ಸರ್ಕಾರ ಈ ಕಾಮಗಾರಿಯ ಅಗತ್ಯತೆ ಕಂಡು ಜರೂರಾಗಿ ಮಂಜೂರು ಮಾಡಿದೆ. ಸುಮಾರು 83 ಮೀಟರ್ ಉದ್ದ, 5.5 ಮೀಟರ್ ನಷ್ಟು ಅಗಲದ ಸಂಪರ್ಕ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರುನೀರು ಹರಿಯುವ ಸಂದರ್ಭದಲ್ಲಿ ಜನರು ಗುಡ್ಡೇನಹಳ್ಳಿ ಕಡೆಗೆ ಎಡೆಯೂರು ಕಡೆಗೆ ತೆರಳಲು ಸುಮಾರು ಹತ್ತಾರು ಕಿಲೋಮೀಟರ್ ಸುತ್ತಿ ಬರುವಂತಹ ಸ್ಥಿತಿ ಇತ್ತು. ಇಲ್ಲಿ ಸಂಪರ್ಕ ಸೇತುವೆ ನಿರ್ಮಾಣ ಮಾಡಿಸಬೇಕೆಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದ್ದು ಬೇಸಿಗೆ ಮುಗಿಯುವ ಒಳಗೆ ಸೇತುವೆ ನಿರ್ಮಾಣವಾಗುವುದು. ಈ ರಸ್ತೆ ಎಡಿಯೂರು ರಸ್ತೆಗೆ ಸೇರಿಕೊಳ್ಳಲಿದೆ. ಈ ಭಾಗದಲ್ಲಿ ಇಂತಹ ಸೇತುವೆಗಳು ಸಂಪರ್ಕ ರಸ್ತೆ ಅಗತ್ಯವಿದ್ದು ಸರ್ಕಾರಕ್ಕೆ 28 ಕೋಟಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಗುಡ್ಡೇನಹಳ್ಳಿ ಬಸವರಾಜು, ಮುಕುಂದ, ರಮೇಶ್, ಬಿ.ವಿ.ರಾಮಚಂದ್ರು, ಕೆಂಚಯ್ಯ, ಅಣ್ಣಯ್ಯ, ಗೋವಿಂದಯ್ಯ, ಮಾರಯ್ಯ, ಅಶೋಕ್, ಖಾದರ್, ಹೇಮಾವತಿ ಎಇಇ ರಮೇಶ್ ಬಾಬು, ಎ.ಇ.ಕಾರ್ತಿಕ್, ಗುತ್ತಿಗೆದಾರರಾದ ನವೀನ್ ಕುಮಾರ್, ಶಂಕರೇಗೌಡ ಸೇರಿದಂತೆ ಮುಖಂಡರು ಇದ್ದರು.