2.50 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ

KannadaprabhaNewsNetwork |  
Published : Nov 28, 2026, 12:30 AM IST
27 ಟಿವಿಕೆ 1 – ತುರುವೇಕೆರೆ ತಾಲೂಕು ಹೊಡಿಕೇಘಟ್ಟದಲ್ಲಿ ಸುಮಾರು 2.50 ಕೋಟಿ ವೆಚ್ಚದ ಚೆಕ್ ಡ್ಯಾಂಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ತಾಲೂಕಿನ ದಬ್ಬೇಘಟ್ಟ ಹೋಬಳಿ ಹೊಡಿಕೇಘಟ್ಟ ಬಳಿ ಸಣ್ಣ ನೀರಾವರಿ ಇಲಾಖಾ ವತಿಯಿಂದ ಸುಮಾರು 2.50 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ದಬ್ಬೇಘಟ್ಟ ಹೋಬಳಿ ಹೊಡಿಕೇಘಟ್ಟ ಬಳಿ ಸಣ್ಣ ನೀರಾವರಿ ಇಲಾಖಾ ವತಿಯಿಂದ ಸುಮಾರು 2.50 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಹೊಡಿಕೇಘಟ್ಟದ ಕೆರೆ ಪ್ರದೇಶದಲ್ಲಿ ಚೆಕ್ ಡ್ಯಾಂಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಈ ಪ್ರದೇಶದಲ್ಲಿ ಹರಿಯುವ ಮಳೆ ನೀರಾಗಬಹುದು ಅಥವಾ ಹೇಮಾವತಿ ನೀರಾಗಬಹುದು ಅದನ್ನು ತಡೆದು ಅಂತರ್ಜಲ ವೃದ್ದಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದರು. ಇದೇ ಇಲಾಖಾ ವತಿಯಿಂದ ತೋವಿನಕೆರೆಯಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ, ವರಾಹಸಂದ್ರದಲ್ಲೂ 75 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ದಬ್ಬೇಘಟ್ಟದ 3 ಕಿಮೀ ದೂರದ ಸಂಪರ್ಕ ರಸ್ತೆಯನ್ನು ಸುಮಾರು 2.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಈ ವೇಳೆ ಎತ್ತಿನಹೊಳೆ ಯೋಜನೆಯ ಎಇ ಸುರೇಶ್, ಗ್ರಾಮದ ಮುಖಂಡರಾದ ಪಟೇಲ್ ಕೆಂಪೇಗೌಡ, ದೇವರಾಜಣ್ಣ, ನಾಗರಾಜು, ರಮೇಶಣ್ಣ, ವಿಜಯೇಂದ್ರ, ಬಸವರಾಜು, ಬೆನಕನಕೆರೆ ಬಸವರಾಜು, ಶಿವಣ್ಣ, ಕೃಷ್ಣಪ್ಪ, ಪುರದ ಚಲುವರಾಜು, ಗುತ್ತಿಗೆದಾರ ಶಂಕರೇಗೌಡ, ಪಂಡಿತ್ ಮೋಹನಾಚಾರ್, ದಬ್ಬೇಘಟ್ಟ ಕುಮಾರ್, ಸುಮತಿ ಕುಮಾರ್, ಮಂಜಣ್ಣ, ಸುನಿಲ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕದಾಸರ ಸಮಾನತೆ, ಮಾನವೀಯ ಸಂದೇಶ ಇಂದಿಗೂ ಪ್ರಸ್ತುತ: ಜಯರಾಮ್
ಕನಕದಾಸರ ಸಮಾಜಮುಖಿ ಸಂದೇಶಗಳು ಸಾರ್ವಕಾಲಿಕ ಸತ್ಯ-ಶಾಸಕ ಮಾನೆ