ಬಾಬಾನಗರ ಬಳಿ ಜಲಾಶಯ ನಿರ್ಮಾಣ

KannadaprabhaNewsNetwork |  
Published : Jul 19, 2025, 01:00 AM IST
ಪಾಟೀಲ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತಿಕೋಟಾ ತಾಲೂಕಿನ ಬಾಬಾನಗರ ಬಳಿ ಸುಮಾರು 400 ಎಕರೆ ಪ್ರದೇಶದಲ್ಲಿ ₹ 557 ಕೋಟಿ ವೆಚ್ಚದಲ್ಲಿ 0.77 ಟಿಎಂಸಿ ಜಲಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಕೋಟಾ

ತಾಲೂಕಿನ ಬಾಬಾನಗರ ಬಳಿ ಸುಮಾರು 400 ಎಕರೆ ಪ್ರದೇಶದಲ್ಲಿ ₹ 557 ಕೋಟಿ ವೆಚ್ಚದಲ್ಲಿ 0.77 ಟಿಎಂಸಿ ಜಲಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ತಿಕೋಟಾ ಪಟ್ಟಣದ ಕೊರಬು ಗಲ್ಲಿಯಲ್ಲಿ ಮಲಕನದೇವರಹಟ್ಟಿ, ಇಟರಾಯನಗುಡಿ ರಸ್ತೆಯಿಂದ ಸಿದ್ದಾಪುರ.ಕೆ- ತಿಕೋಟಾ ಕೂಡು ರಸ್ತೆ ವರೆಗೆ ರಸ್ತೆ ಕಾಮಗಾರಿಗೆ ಭೂಮಿಪೂಜೆ ಹಾಗೂ ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆಯ ಡಿ ಸಿ-2ರಿಂದ ಜಂಕ್ಷನ್‌ವರೆಗೆ ವ್ಹಾಯಾ ತಿಕೋಟಾ ಕೆರೆ ಮತ್ತು ಕೊರಬು ಗಲ್ಲಿ ಮಸೂತಿವರೆಗೆ ರಸ್ತೆ ಸುಧಾರಣೆ ಮತ್ತು ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಬಾಬಾನಗರ ಬಳಿ ಜಲಾಶಯ ನಿರ್ಮಾಣದಿಂದ ಈ ಭಾಗದ ರೈತರಿಗೆ ಬೇಸಿಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಷ್ಟೇ ಅಲ್ಲ, ಮತಕ್ಷೇತ್ರ ವ್ಯಾಪ್ತಿಯ ಕಾಲುವೆಗಳ ಮೂಲಕ 156 ಹಳ್ಳಗಳಲ್ಲಿ ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗುವುದು. ಇದರಿಂದ ಈ ಭಾಗಗಳಲ್ಲಿ ಅಂತರ್ಜಲ ವೃದ್ಧಿಸಲಿದೆ. ದೇಶಕ್ಕೆ ಮಾದರಿಯಾಗುವ ಕೆಲಸಗಳನ್ನು ಬಬಲೇಶ್ವರ ಮತ ಕ್ಷೇತ್ರದಲ್ಲಿ ಮಾಡಲಾಗುತ್ತಿದೆ. ಈಗ ನಿರ್ಮಿಸಲಾಗುತ್ತಿರುವ ಎರಡೂ ರಸ್ತೆಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಈ ರಸ್ತೆಗಳ ಅಭಿವೃದ್ಧಿಯಿಂದ ಯಾರೊಬ್ಬರಿಗೂ ಅನ್ಯಾಯವಾಗುವುದಿಲ್ಲ ಎಂದು ತಿಳಿಸಿದರು.

ಈಗಾಗಲೇ ಮತಕ್ಷೇತ್ರದ ಎರಡೂ ತಾಲೂಕುಗಳಲ್ಲಿ ಎರಡು ಮಿನಿ ವಿಧಾನಸೌಧ, ಎರಡು ಸಬ್ ರಜಿಸ್ಟಾರ್‌ ಕಚೇರಿ, ಎರಡು ಇಂದಿರಾ ಕ್ಯಾಂಟೀನ್ ಸೇರಿ ಸಾಕಷ್ಟು ಕಚೇರಿಗಳು ಕಾರ್ಯಾರಂಭ ಮಾಡಿವೆ. ಅಭಿವೃದ್ಧಿಯಲ್ಲಿ ಬಬಲೇಶ್ವರ ಮತಕ್ಷೇತ್ರ ಎಲ್ಲರಿಗೂ ಮಾದರಿಯಾಗುತ್ತಿದೆ ಎಂದರು.

ಮುಖಂಡರಾದ ಸೋಮನಾಥ ಬಾಗಲಕೋಟ, ಆರ್.ಬಿ.ದೇಸಾಯಿ, ಯಾಕೂಬ್ ಜತ್ತಿ, ಬಸಯ್ಯ ವಿಭೂತಿಮಠ, ಪ್ರಭಾವತಿ ನಾಟೀಕಾರ ಮಾತನಾಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧು ಗೌಡನವರ, ಮುಖಂಡರಾದ ಜಗದೀಶಗೌಡ ಪಾಟೀಲ, ಶೋಭಾ ಹಲ್ಯಾಳ, ವಿಜುಗೌಡ ಪಾಟೀಲ, ಡಾ.ಗಜಾನನ ಮಹಿಶ್ಯಾಳೆ, ಯಮನಪ್ಪ ಮಲಕನವರ, ಈರಣ್ಣಗೌಡ ಬಿರಾದಾರ, ವಿ.ಎಂ.ಪಾಟೀಲ, ಕೆ.ಎನ್.ಎನ್.ಎಲ್ ಎಇಇ ಅಂಬಣ್ಣ ಹರಳಯ್ಯ, ಎಇ ಮಹಾದೇವ ನಡಗಡ್ಡಿ, ತಹಸೀಲ್ದಾರ್‌ ಸುರೇಶ ಚವಲರ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಬಸವಣ್ಣೆಪ್ಪ ಬಿರಾದಾರ, ಪಪಂ ಮುಖ್ಯಾಧಿಕಾರಿ ರಾಘು ನಡುವಿನಮನಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''