ಕನ್ನಡಪ್ರಭವಾರ್ತೆ ಚಳ್ಳಕೆರೆ
ಅವರು ಭಾನುವಾರ ತಾಲೂಕಿನ ಪರಶುರಾಮಪುರದ ಗುಂಡುತೋಪು ಪ್ರದೇಶದಲ್ಲಿ ಸುಮಾರು ₹23 ಲಕ್ಷ ವೆಚ್ಚದ ಅಂಗನವಾಡಿ ಬಿ. ಕೇಂದ್ರದ ನೂತನ ಕಟ್ಟಡ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಅಂಗನವಾಡಿ ಕೇಂದ್ರಗಳಲ್ಲೂ ಮಕ್ಕಳಿಗೆ ಪೌಷ್ಠಿಕ ಆಹಾರ ಸಕಾಲದಲ್ಲಿ ಸರ್ಕಾರ ಒದಗಿಸುತ್ತಾ ಬಂದಿದೆ ಎಂದರು.
ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರೆ ಎನ್. ಕಾವ್ಯ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುದಾನದಲ್ಲಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಸದಾ ಸಹಕಾರ ನೀಡುತ್ತಾ ಬಂದಿದ್ದಾರೆ. ನಿಗದಿತ ಅಧಿಯಲ್ಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗಲೂರಸ್ವಾಮಿ, ಉಪಾಧ್ಯಕ್ಷೆ ಸರೋಜಮ್ಮ, ತಾಲೂಕು ಪಂಚಾಯಿತಿ ನಾಮನಿರ್ದೇಶನ ಸದಸ್ಯ ಚೌಳೂರು ಬಸವರಾಜು, ಮುಖಂಡರಾದ ಚನ್ನಕೇಶವ, ಜಯವೀರಚಾರಿ, ಕೃಷ್ಣಪ್ಪ, ರುದ್ರೇಶ್, ಬೊಮ್ಮಕ್ಕ, ಮಂಜುಳಮ್ಮ, ಪ್ರಕಾಶ್, ನಾಗಭೂಷಣ್, ಕರಿಯಣ್ಣ, ಜಯಕುಮಾರ್, ಬಿ.ಕೆ. ಗುಜ್ಜಾರಪ್ಪ, ಪಿಡಿಒ ಗುಂಡಪ್ಪ ಮುಂತಾದವರು ಉಪಸ್ಥಿತರಿದ್ದರು.