ಕನ್ನಡಪ್ರಭ ವಾರ್ತೆ ಗುಡಿಬಂಡೆ
ತಾಲೂಕಿನ ಈ ಮೂರು ಗ್ರಾಮಗಳಲ್ಲಿ ಹರಿಯುವ ಕಾಲುವೆಯ ಮೇಲೆ ಸೇತುವೆ ನಿರ್ಮಾಣ ಮಾಡುವ ಸಂಬಂಧ ಸ್ಥಳ ಪರಿಶೀಲನೆ ಮಾಡಿ ಶಾಸಕರು ಮಾತನಾಡಿದರು.
ಜನತೆಯ ಬಹುದಿನಗಳ ಬೇಡಿಕೆಸುಮಾರು ದಿನಗಳಿಂದ ಈ ಭಾಗದ ಜನರು ನೀರು ಹರಿಯುವಂತಹ ಕಾಲುವೆಗಳ ಮೇಲೆ ಮೇಲ್ಸೇತುವೆ ನಿರ್ಮಾಣ ಮಾಡಲು ಮನವಿ ಮಾಡುತ್ತಿದ್ದರು. ಕೃಷಿ ಚಟುವಟಿಕೆ ಸೇರಿದಂತೆ ಹಲವು ಕೆಲಸಗಳಿಗೆ ತೆರಳಲು ಸ್ಥಳೀಯರು ಸಮಸ್ಯೆ ಪಡುತ್ತಿದ್ದರು. ಇದರಿಂದಾಗಿ ನಮ್ಮ ಸರ್ಕಾರದೊಂದಿಗೆ ಮಾತನಾಡಿ ಸುಮಾರು 10 ಕೋಟಿಯಷ್ಟು ಅನುದಾನ ಬಿಡುಗಡೆ ಮಾಡಿಸಿರುವುದಾಗಿ ಹೇಳಿದರು.
ಕೋಡಿ ಅಭಿವೃದ್ಧಿಗೆ ₹4 ಕೋಟಿ
ಈ ಎರಡೂ ಕಾಮಗಾರಿಗಳೂ ಸಹ ಶೀಘ್ರದಲ್ಲೇ ನೆರವೇರಲಿವೆ. ಗುಡಿಬಂಡೆ ಕೆರೆ ಕೋಡಿಯ ಅಭಿವೃದ್ದಿಗೆ 4 ಕೋಟಿ ಅನುದಾನ ನೀಡಲಾಗಿದೆ. ಅಲ್ಲಿ ಕಾಮಗಾರಿ ನಡೆಸಲು ಈ ಅನುದಾನ ಸಾಕಾಗುವುದಿಲ್ಲ. ಈ ಬಜೆಟ್ ನಲ್ಲಿ ಮತ್ತಷ್ಟು ಅನುದಾನ ಒದಗಿಸಲು ಮನವಿ ಮಾಡುತ್ತೇನೆ. ಅನುದಾನವನ್ನು ಆದಷ್ಟು ಶೀಘ್ರವಾಗಿ ಬಿಡುಗಡೆ ಮಾಡಿಸಲು ಶ್ರಮಿಸುತ್ತೇನೆ ಎಂದರು.ಗುಣಮಟ್ಟ ಕಾಪಾಡಲು ಸೂಚನೆ
ಜನರೂ ಸಹ ಕಾಮಗಾರಿ ನಡೆಯುವಾಗ ಆಗಾಗ ಪರಿಶೀಲನೆ ನಡೆಸುತ್ತಿರಬೇಕು. ಕಾಮಗಾರಿ ಗುಣಮಟ್ಟ ಕಾಪಾಡುವುದು ಸ್ಥಳೀಯರ ಜವಾಬ್ದಾರಿಯಾಗಿದೆ ಕಾಮಗಾರಿಯಲ್ಲಿ ಕಳಪೆ ಕಂಡುಬಂದರೇ ಕೂಡಲೇ ನನಗೆ ಮಾಹಿತಿ ನೀಡಬೇಕು. ಕಾಮಗಾರಿಯನ್ನು ಗುಣಮಟ್ಟದಿಂದ ನಡೆಸಲು ನಾನು ಸೂಚನೆ ನೀಡುತ್ತೇನೆ. ಇನ್ನೂ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸಲು ತಾವು ಸದಾ ಸಿದ್ದನಾಗಿರುರುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಸುನೀಲ್, ಮುಖಂಡರಾದ ಆದಿರೆಡ್ಡಿ, ಆನಂದರೆಡ್ಡಿ, ಮಂಜುನಾಥ, ದಪ್ಪರ್ತಿ ನಂಜುಂಡ, ಹಳೇಗುಡಿಬಂಡೆ ಮಂಜುನಾಥ, ನಾರಾಯಣಸ್ವಾಮಿ ಸೇರಿದಂತೆ ಹಲವರು ಇದ್ದರು.