ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸಲು ಶೀತಲ ಗೃಹ ನಿರ್ಮಾಣ

KannadaprabhaNewsNetwork |  
Published : Nov 15, 2026, 01:15 AM IST
ಪೋಟೋ 14hsd1:ಹೊಸದುರ್ಗದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 1500 ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಗೋದಾಮು ನಿರ್ಮಾಣಕ್ಕೆ ಶಾಸಕ ಬಿ.ಜಿ.ಗೋವಿಂದಪ್ಪ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

Construction of cold storage facilities to ensure better prices for farmers' produce

ಹೊಸದುರ್ಗ: ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ 1500 ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಿಸಲಾಗುವುದು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.

ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಶನಿವಾರ 1500 ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಗೋದಾಮು ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ

ಗೋಲ್ಡ್ ಸ್ಟೋರೇಜ್ ಘಟಕ ಆರಂಭಿಸಿದರೆ ತಾಲೂಕಿನ ರೈತರಿಗೆ ಅನುಕೂಲವಾಗಲಿದೆ. ರೈತರ ಉತ್ಪನ್ನಗಳನ್ನು ಗೋದಾಮಿನಲ್ಲಿ ಶೇಖರಿಸಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ಸಹಕಾರಿಯಾಗುತ್ತದೆ. ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಬೇಗ ಹಾಳಾಗದಂತೆ ಶೇಖರಿಸಿ ಮಾರುಕಟ್ಟೆಗೆ ಸರಬರಾಜು ಮಾಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಸತತವಾಗಿ ಒತ್ತಡ ತಂದು ಗೋಲ್ಡ್ ಸ್ಟೋರೇಜ್ ಘಟಕ ಮಂಜೂರು ಮಾಡಿಸಲಾಗಿದೆ ಎಂದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದ ಶಿವಾನಂದ ಪಾಟೀಲ ಅವರು ತಾಲೂಕಿಗೆ ಕೋಲ್ಡ್ ಸ್ಟೋರೇಜ್ ಗೋದಾಮು ಮಂಜೂರು ಮಾಡಿ ಅದಕ್ಕೆ ಅಗತ್ಯವಾದ 6.5 ಕೋಟಿ ಅನುದಾನವನ್ನು ಆರ್ ಐ ಡಿ ಎಪ್ ನಿಂದ ಮಂಜೂರು ಮಾಡಿಸಿಕೊಟ್ಟಿದ್ದಾರೆ. ಅದಕ್ಕೆ ಎಪಿಎಂಸಿ ಸಮಿತಿಯಿಂದ 50 ಲಕ್ಷ ಹಣ ಪಾವತಿ ಮಾಡಬೇಕಿತ್ತು. ಅಗತ್ಯವಾದ ಹಣ ಇರಲಿಲ್ಲ. ಆದರೆ ಎಪಿಎಂಸಿ ಗೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಬರಬೇಕಾಗಿದ್ದ 1.3 ಕೋಟಿ ಬಾಕಿ ಹಣವನ್ನು ಮಂಜೂರು ಮಾಡಿಸಿ ಗೋದಾಮು ನಿರ್ಮಾಣಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಸರ್ಕಾರ ಆದೇಶ ಮಾಡಿ ಅಗತ್ಯ ಹಣ ಒದಗಿಸಿದೆ. ಆದರೆ ಪ್ರಕೃತಿಯ ಅವಕೃಪೆಯಿಂದ ತಾಲೂಕಿನಲ್ಲಿ ರಾಗಿ ಬೆಳೆ ಸಂಪೂರ್ಣ ವಿಫಲವಾಗಿದೆ. ಆದರೂ ರಾಗಿ ಮಾರಾಟ ಕೇಂದ್ರಕ್ಕೆ ಬರಲಿದೆ. ಮಾರುಕಟ್ಟೆಯಲ್ಲಿ ಇರುವ ರಾಗಿಯೇ ಪುನರ್ವರ್ತನೆಯಾಗಿ ಖರೀದಿ ಕೇಂದ್ರಕ್ಕೆ ಬರಲಿದೆ ಎಂದರು.

ಗೊರವಿನಕಲ್ಲು ರಸ್ತೆಯಲ್ಲಿ ಕುರಿ ಸಂತೆಗೆ ಜಾಗವನ್ನು ಮಂಜೂರು ಮಾಡಲಾಗಿದೆ. 50 ಲಕ್ಷ ವೆಚ್ಚದಲ್ಲಿ ಮಾರುಕಟ್ಟೆಯ ನಿರ್ಮಾಣ ಕಾರ್ಯ ಆರಂಭವಾಗಿದೆ. ರೈತರು ಅಲ್ಲಿಯೇ ಕುರಿ ವ್ಯಾಪಾರಕ್ಕೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಸಮಾಜದ ಅಧ್ಯಕ್ಷ ರಾಗಿ ಶಿವಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ .ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಮಾಜಿ ಜಿ ಪಂ ಉಪಾಧ್ಯಕ್ಷ ರಾಜಣ್ಣ, ಆಗ್ರೋ ಶಿವಣ್ಣ, ಕೆಪಿಸಿಸಿ ಸದಸ್ಯ ಅಲ್ತಾಪ ಪಾಷಾ, ಎಂ. ಪಿ. ಶಂಕರ, ಕೆಡಿಪಿ ಸದಸ್ಯರಾದ ಪದ್ಮನಾಭ, ಪರಪ್ಪ, ಸುಮಂಗಲಮ್ಮ, ಅರುಣಕುಮಾರಿ ಇತರರಿದ್ದರು.

ಪೋಟೋ 14hsd1:

ಹೊಸದುರ್ಗದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 1500 ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಗೋದಾಮು ನಿರ್ಮಾಣಕ್ಕೆ ಶಾಸಕ ಬಿ.ಜಿ. ಗೋವಿಂದಪ್ಪ ಭೂಮಿ ಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಿಗರ ಉದ್ಯೋಗಕ್ಕಾಗಿ ಕರವೇ ಆಗ್ರಹ ಅಭಿಯಾನ
ಸಹಕಾರ ಕ್ಷೇತ್ರದಿಂದ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ: ಶೇಖರಗೌಡ ಮಾಲಿ ಪಾಟೀಲ್