ವರ್ಷದೊಳಗೆ ವಾಸವಿ ಸಮುದಾಯ ಭವನ ನಿರ್ಮಾಣ

KannadaprabhaNewsNetwork | Published : May 20, 2024 1:31 AM

ಸಾರಾಂಶ

ಮುಂದಿನ ವಾಸವಿ ಜಯಂತಿಯೊಳಗೆ ಜಿಲ್ಲಾಡಳಿತದಿಂದ ಜಾಗವನ್ನು ಗುರುತಿಸಿ ವಾಸವಿ ಸಮುದಾಯದ ಬಂಧುಗಳಿಗೆ ಅನುಕೂಲವಾಗುವಂತೆ ಭವನವನ್ನು ನಿರ್ಮಿಸಲು ಸರಕಾರದಿಂದ ಹಾಗೂ ವೈಯಕ್ತಿಕವಾಗಿ ಅನುದಾನ ನೀಡಲಾಗುತ್ತದೆ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಕೋಲಾರಮುಂದಿನ ವಾಸವಿ ಜಯಂತಿಯೊಳಗೆ ಜಿಲ್ಲಾಡಳಿತದಿಂದ ಜಾಗವನ್ನು ಗುರುತಿಸಿ ವಾಸವಿ ಸಮುದಾಯದ ಬಂಧುಗಳಿಗೆ ಅನುಕೂಲವಾಗುವಂತೆ ಭವನವನ್ನು ನಿರ್ಮಿಸಲು ಸರಕಾರದಿಂದ ಹಾಗೂ ವೈಯಕ್ತಿಕವಾಗಿ ಅನುದಾನ ನೀಡಲಾಗುತ್ತದೆ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ಭರವಸೆ ನೀಡಿದರು.ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಮಂಡಳಿ, ವಾಸವಿ ಮಹಿಳಾ ಮಂಡಳಿ, ಹಾಗೂ ವಾಸವಿ ಯುವಜನ ಸಂಘದಿಂದ ನಡೆದ ವಾಸವಿ ಜಯಂತಿ, ಶ್ರೀನಿವಾಸ ಕಲ್ಯಾಣೋತ್ಸವ, ಹಾಗೂ ಪುಷ್ಪ ಯಾಗಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಗರದ ಹೃದಯ ಭಾಗದಲ್ಲಿ ಇರುವ ವಾಸವಿ ಮಾತೆಯು ಎಲ್ಲರಿಗೂ ಒಳ್ಳೆಯದು ಮಾಡಲಿ ಮನುಷ್ಯ ಯಾರಿಗೂ ಕೆಡುಕನ್ನು ಬಯಸದೆ ನ್ಯಾಯ, ನೀತಿ, ಧರ್ಮದಿಂದ ಕೈಲಾದ ಸಹಾಯವನ್ನು ಮಾಡುವಂತಹ ಶಕ್ತಿಯನ್ನು ದೇವರು ಎಲ್ಲರಿಗೂ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಲಾಗಿದೆ ಎಂದು ತಿಳಿಸಿದರುಜಿಲ್ಲೆಯಲ್ಲಿ ಸಾಕಷ್ಟು ಜನರು ರಾಜಕೀಯವನ್ನು ಪ್ರವೇಶ ಮಾಡಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ ಅವರಂತೆಯೇ ನಾನು ಕೆಲಸ ಮಾಡಲು ಬಂದಿದ್ದೇನೆ, ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿ ಅಭಿವೃದ್ಧಿ ವಿಚಾರಕ್ಕೆ ಅನುದಾನ ಕೊರತೆಯಿಲ್ಲ ಸಮುದಾಯದ ಮಕ್ಕಳ ಶೈಕ್ಷಣಿಕವಾಗಿ ಮುಂದೆ ಬರಲು ಹಾಗೂ ವಾಸವಿ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ಅಗತ್ಯ ನೆರವಿನ ಜೊತೆಗೆ ನಿಮ್ಮ ಜೊತೆಯಲ್ಲಿ ನಾನು ಇದ್ದು ಕೆಲಸವನ್ನು ಮಾಡಿಕೊಂಡು ಹೋಗುತ್ತೇನೆ ಎಂದರು.ವಿಪ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಜನರ ಸೇವೆ ಮಾಡಲು ಎಲ್ಲರಿಗೂ ಅವಕಾಶವನ್ನು ನೀಡುವುದಿಲ್ಲ ಆದರೆ ನಿಮ್ಮಗಳ ಸೇವೆ ಮಾಡುವ ಅವಕಾಶವನ್ನು ನಮಗೆ ನೀಡಿದ್ದಾರೆ. ನಾವು ಅಭಿವೃದ್ಧಿಯ ಪರವಾಗಿ ಯಾವುದೇ ಮೋಸ ವಂಚನೆಯಿಲ್ಲದೇ ಭ್ರಷ್ಟಾಚಾರವಿಲ್ಲದ ರೀತಿಯಲ್ಲಿ ಸರಕಾರದ ಅನುದಾನವನ್ನು ಹಾಗೂ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲು ದೇವರು ಆಶೀರ್ವಾದ ಮಾಡಿದ್ದಾರೆ ಎಂದರು.ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎನ್.ಸಿ ಸತೀಶ್, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಶ್ರೀನಿವಾಸ ಮೂರ್ತಿ, ಉಪಾಧ್ಯಕ್ಷರಾದ ಸತ್ಯನಾರಾಯಣಶೆಟ್ಟಿ, ಬದ್ರೀನಾಥ್, ಚಲಪತಿ, ರಾಘವೇಂದ್ರ ಬಾಲಾಜಿ, ವೆಂಕಟೇಶ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡರಾದ ಮಲೇಷಿಯಾ ರಾಜಕುಮಾರ್, ವೈ.ಶಿವಕುಮಾರ್, ಚಿಂಟು ಇದ್ದರು.

Share this article