-ವಸತಿ ನಿಲಯಕ್ಕೆ ಪರವಾನಿಗೆ ಅನುಮಾನಾಸ್ಪದ, ಅಧಿಕಾರಿಗಳ ಗೊಂದಲದ ಹೇಳಿಕೆ ।
-ಬಸವತೀರ್ಥ ಮಠದಡಿ ಬಸವತೀರ್ಥ ಗುರುಕುಲ ಶಾಲೆ ವಸತಿ ನಿಲಯ------
ಕನ್ನಡಪ್ರಭ ವಾರ್ತೆ ಹುಮನಾಬಾದ್ತಾಲೂಕಿನ ಕಲ್ಲೂರ ಗ್ರಾಮದ ಹೊರವಲಯದಲ್ಲಿರುವ ಬಸವತೀರ್ಥ ಮಠದಡಿ ನಡೆಯುತ್ತಿರುವ ಬಸವತೀರ್ಥ ಗುರುಕುಲ ಶಾಲೆಯಲ್ಲಿ ನಡೆಸಲಾಗುತ್ತಿರುವ ವಸತಿ ನಿಲಯದಲ್ಲಿ ವಿಷಪೂರಿತ ಆಹಾರ ಸೇವನೆಯಿಂದಾಗಿ 58 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದ್ದು, ವಿದ್ಯಾರ್ಥಿಗಳನ್ನು ಹುಮನಾಬಾದ್ ಸಾರ್ವಜನಿಕ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ರಾತ್ರಿ ಉಳಿದ ಅನ್ನವನ್ನೇ ಒಗ್ಗರಣೆ ಹಾಕಿ ಮುಂಜಾನೆ ಮಕ್ಕಳಿಗೆ ನೀಡಲಾಗಿರುವದೇ ಮಕ್ಕಳಲ್ಲಿ ತೆಲೆ ಸುತ್ತುವಿಕೆ, ಹೊಟ್ಟೆ ನೋವು, ಕೆಲ ವಿದ್ಯಾರ್ಥಿಗಳಿಗೆ ವಾಂತಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಅಸ್ವಸ್ಥಗೊಂಡ ಮಕ್ಕಳನ್ನು ಕೂಡಲೇ ವಸತಿ ನಿಲಯದ ಸಿಬ್ಬಂದಿ, ಸ್ಥಳೀಯರು ಹುಮನಾಬಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ ಬದೋಲೆ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಮಕ್ಕಳಿಗೆ ಅಗತ್ಯ ಚಿಕಿತ್ಸೆಯನ್ನು ಕಲ್ಪಿಸುವಂತೆ ಸಂಬಂಧಿತ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಲೀಂ ಪಾಶಾ ಅವರು ಆಸ್ಪತ್ರೆಗೆ ಭೇಟಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗೂಡಾಳ ಮಾತನಾಡಿ, ಈಗಾಗಲೇ ವಸತಿ ನಿಲಯ ಪರವಾನಿಗೆ ಕುರಿತು ಮಾಹಿತಿ ಕೇಳಿ ಎರಡು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಇದಕ್ಕೆ ನಮ್ಮಲ್ಲಿ ಯಾವುದೇ ವಸತಿ ನಿಲಯ ನಡೆಸುತ್ತಿಲ್ಲ ಎಂದು ಶಾಲೆಯವರು ಉತ್ತರ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು. ಘಟನೆ ಸಂಬಂಧ ವಸತಿ ನಿಲಯ ಶಿಕ್ಷಕರು, ಆಡಳಿತ ಮಂಡಳಿ ಮಕ್ಕಳ ಆರೋಗ್ಯ ಕುರಿತು ಭೇಟಿ ನೀಡದೆ ಇರುವ ಹಿನ್ನಲೆಯಲ್ಲಿ ಪಾಲಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಲ್ಲದೆ, ಘಟನೆಯ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ. ವಿವಿಧ ಜಿಲ್ಲೆಯ ಬಡ ಕುಟುಂಬದ ವಿದ್ಯಾರ್ಥಿ ಇದ್ದು, ಇಂತಹ ಘಟನೆ ನಡೆದಿರುವುದು ವಿಷಾದನೀಯ ಸಂಗತಿ. ಈ ಕುರಿತು ಪರೀಶಿಲನೆ ಆಗಬೇಕಾಗಿದೆ. ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು.
ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಅವರು ದೂರವಾಣಿ ಮೂಲಕ ಮಕ್ಕಳ ಆರೋಗ್ಯ ಕುರಿತು ವಿಚಾರಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗೂಡಾಳ, ಡಿವೈಎಸ್‌ಪಿ ಜೆಎಸ್ ನ್ಯಾಮೇಗೌಡರ್, ಡಾ. ರೋಹಿತ ರಘೋಜಿ, ಶೈಲೇಜಾ ರಘೋಜಿ, ಡಾ. ವಿಶ್ವಾ ಸೈನಿರ, ಡಾ. ಮುಸ್ತಫಾ, ಡಾ. ಮುಝಫರ್, ಡಾ. ಸಬಾಜಾನಿ, ಡಾ. ಬಾಖರ್ ಜಾನಿ, ಡಾ. ನಾಜೀಯ್ಯಾ, ಡಾ. ಜಯಶ್ರೀ ಸೇರಿದಂತೆ ನುರಿತ ವೈದ್ಯರುಗಳು ಮಕ್ಕಳ ತಪಾಸಣೆ ನಡೆಸಲಾಗಿದೆ.--------
....ಕೋಟ್-1....ಎಲ್ಲ ಮಕ್ಕಳು ಅಪಾಯದಿಂದ ಪಾರಾಗಿದ್ದು, ಘಟನೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಮಕ್ಕಳು ಸೇವಿಸಿದ ಆಹಾರದ ಮಾದರಿಯನ್ನು ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಘಟನೆಯ ವಿವರ ದೊರಕಲಿದೆ.
- ಡಾ. ನಾಗನಾಥ ಹುಲಸೂರೆ ಮುಖ್ಯ ವೈದ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆ----------
....ಕೋಟ್-1....ಗುರುಕುಲ ಶಾಲೆಯಲ್ಲೆ ಪ್ರಾಥಮಿಕ ಆರೋಗ್ಯ ಸಿಬ್ಬಂದಿಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಮಾತ್ರ ಅಂತಹ ವಿದ್ಯಾರ್ಥಿಗಳನ್ನು ತಾಲೂಕು ಕೆಂದ್ರಕ್ಕೆ ರವಾನಿಸಲಾಗಿದೆ. ಇದಕ್ಕೆ ಪ್ರತ್ಯೇಕ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ.
- ಡಾ. ಅಶೋಕ ಸಿದ್ದೇಶ್ವರ ತಾಲೂಕ ವೈದ್ಯಾಧಿಕಾರಿ---
ಫೈಲ್ 13ಬಿಡಿ5