ನಿವೇಶನ ಖರೀದಿಗೆ ಮುನ್ನ ಕೆಯುಡಿಎ ಸಂಪರ್ಕಿಸಿ

KannadaprabhaNewsNetwork | Published : Aug 14, 2024 1:01 AM

ಸಾರಾಂಶ

ಪ್ರಾಧಿಕಾರದಿಂದ ಅನುಮೋದನೆ ನೀಡಿರುವ ಬಡಾವಣೆಗಳ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡುವ ಮೊದಲು ಪ್ರಾಧಿಕಾರದಿಂದ ಕಡ್ಡಾಯವಾಗಿ ಕಟ್ಟಡ ನಕ್ಷೆ ಅನುಮೋದನೆ ಪಡೆದು ನಂತರ ಸ್ಥಳೀಯ ಸಂಸ್ಥೆಯಲ್ಲಿ ಪರವಾನಗಿ ಪಡೆದು ಕಟ್ಟಡ ನಿರ್ಮಾಣ ಕೈಗೊಳ್ಳಬೇಕು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೆಜಿಎಫ್ ಮತ್ತು ಬಂಗಾರಪೇಟೆ ನಗರಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ವಸತಿ ನಿವೇಶನಗಳನ್ನು ಖರೀದಿ ಮಾಡುವ ಮೊದಲು ಬಡಾವಣೆ ಬಗ್ಗೆ ಪ್ರಾಧಿಕಾರದಿಂದ ಸಂಪೂರ್ಣ ಮಾಹಿತಿ ಪಡೆದು ಖಚಿತಪಡಿಸಿಕೊಂಡು ನಂತರ ನಿವೇಶನಗಳನ್ನು ಖರೀದಿ ಮಾಡಿ ಎಂದು ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಿ ಆರ್ ಗೋಪಾಲರೆಡ್ಡಿ ಸೂಚಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಾಧಿಕಾರದಿಂದ ಅನುಮೋದನೆ ನೀಡಿರುವ ಬಡಾವಣೆಗಳ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡುವ ಮೊದಲು ಪ್ರಾಧಿಕಾರದಿಂದ ಕಡ್ಡಾಯವಾಗಿ ಕಟ್ಟಡ ನಕ್ಷೆ ಅನುಮೋದನೆ ಪಡೆದು ನಂತರ ಸ್ಥಳೀಯ ಸಂಸ್ಥೆಯಲ್ಲಿ ಪರವಾನಗಿ ಪಡೆದು ಕಟ್ಟಡ ಕಾಮಗಾರಿಯನ್ನು ನಿರ್ವಹಿಸಬೇಕು ಎಂದರು.

ಪ್ರಾಧಿಕಾರಿದ ಅನುಮತಿ ಕಡ್ಡಾಯ

ಕೆ.ಜಿ.ಎಫ್ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳನ್ನು ನಿರ್ಮಿಸಬಾರದು ಹಾಗೂ ಪ್ರಾಧಿಕಾರದ ಅನುಮೋದನೆ ಪಡೆದು ವಸತಿ ಬಡಾವಣೆಗಳನ್ನು ಕಡ್ಡಾಯವಾಗಿ ನಿರ್ಮಿಸಬೇಕು. ಕೆ.ಜಿ.ಎಫ್ ತಾಲ್ಲೂಕು, ಬೇತಮಂಗಲ ಹೋಬಳಿ, ಗುಟ್ಟಹಳ್ಳಿ ಮತ್ತು ಗರುಡಾದ್ರಿಹಳ್ಳಿ ಗ್ರಾಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ 26ಎ-04.08ಗುಂಟೆ ಜಮೀನಿನಲ್ಲಿ ಭೂ ಮಾಲಿಕರು ಹಾಗೂ ಪ್ರಾಧಿಕಾರದ ಸಹಭಾಗಿತ್ವದೊಂದಿಗೆ ಶೇ 50:50ರ ಅನುಪಾತದಲ್ಲಿ ವಸತಿ ಯೋಜನೆಯನ್ನು ಕೈಗೊಳ್ಳಲು ಯೋಜನಾ ವರದಿಯನ್ನು ತಯಾರಿಸಿ ಸರ್ಕಾರದ ಮಂಜೂರಾತಿಗಾಗಿ ಸಲ್ಲಿಸಲಾಗಿದೆ ಎಂದರು.

ಹಾಗೂ ಪ್ರಾಧಿಕಾರದ ಅಧಿನದಲ್ಲಿ ಇರುವ ವಾಣಿಜ್ಯ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಾಣ ಮಾಡಲು ಐದು ಕೋಟಿ ವೆಚ್ಚಕ್ಕೆ ಯೋಜನಾ ವರದಿಯನ್ನು ತಯಾರಿಸಿ ಸರ್ಕಾರದಿಂದ ಮಂಜೂರಾತಿಗಾಗಿ ಸಲ್ಲಿಸಲಾಗಿದೆ ಎಂದರು.

ತಂತಿ ಬೇಲಿ ನಿರ್ಮಿಸಲು ₹5 ಕೋಟಿ

ಇಂಟಿಗ್ರೇಟೆಡ್ ಟೌನ್‌ಶಿಪ್ ನಿರ್ಮಾಣಕ್ಕಾಗಿ ಈ ಪ್ರಾಧಿಕಾರಕ್ಕೆ ಸರ್ಕಾರದಿಂದ ಹಸ್ತಾಂತರಿಸಿರುವ ಕೋಲಾರ ಜಿಲ್ಲೆ, ಕೆ.ಜಿ.ಎಫ್ ತಾಲೂಕಿನ ಬಂಗಾರದಗಣಿ ಗ್ರಾಮದ ಸ.ನಂ.03ರಲ್ಲಿನ 294ಎ-0ಗು ಜಮೀನಿಗೆ ತಂತಿ ಬೇಲಿ ನಿರ್ಮಿಸಲು 5 ಕೋಟಿ ವೆಚ್ಚವಾಗುತ್ತದೆ ಎಂದು ತಿಳಿಸಿದರು.

Share this article