ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ

KannadaprabhaNewsNetwork |  
Published : Oct 31, 2023, 01:16 AM IST

ಸಾರಾಂಶ

ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸೋಮವಾರವೂ ಕೂಡ ಮಧ್ಯಾಹ್ನದ ನಂತರ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಎನ್‌.ಆರ್‌.ಪುರ ಹಾಗೂ ಕೊಪ್ಪ ತಾಲೂಕುಗಳಲ್ಲಿ ಮಳೆ ಬಂದಿದ್ದು, ಇನ್ನುಳಿದ ತಾಲೂಕುಗಳಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಮುಂದುವರೆದಿತ್ತು. ಚಿಕ್ಕಮಗಳೂರಿನಲ್ಲಿ ಸಂಜೆ 8 ಗಂಟೆಯ ವೇಳೆಗೆ ಆರಂಭವಾದ ಮಳೆ, ಮುಂಗಾರಿನಂತೆ ನಿರಂತರವಾಗಿ ಸಾಧಾರಣವಾಗಿ ಸುರಿಯುತ್ತಲೇ ಇತ್ತು. ಇದರ ನಡುವೆ ಆಗಾಗ ಗುಡುಗಿನ ಸದ್ದು ಮುಂದುವರೆದಿತ್ತು. ತರೀಕೆರೆಯಲ್ಲಿ ಸಂಜೆಯ ನಂತರ ಸಾಧಾರಣ ಮಳೆಯಾಗಿದೆ. ಎನ್.ಆರ್‌. ಪುರ ತಾಲೂಕಿನಲ್ಲಿ ಸಂಜೆ 5.30 ಕ್ಕೆ ಆರಂಭವಾದ ಮಳೆ ರಾತ್ರಿ 8 ಗಂಟೆ ನಂತರವೂ ಮುಂದುವರೆದಿತ್ತು. ಗುಡುಗು ಮತ್ತು ಮಿಂಚಿನ ಆರ್ಭಟ ಜೋರಾಗಿತ್ತು. ಶೃಂಗೇರಿ ತಾಲೂಕಿನಾದ್ಯಂತ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ರಾತ್ರಿ ವರೆಗೆ ಮುಂದುವರೆದಿತ್ತು. ಕೊಪ್ಪ, ಮೂಡಿಗೆರೆಯಲ್ಲಿ ಸಾಧಾರಣವಾಗಿ ಮಳೆ ಬಂದಿದೆ. ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ ತಾಲೂಕುಗಳಲ್ಲಿ ಮಳೆ ಮತ್ತು ಗುಡುಗಿನಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕಡೂರು ತಾಲೂಕಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿತ್ತು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ