- ಅಮರಾವತಿದಲ್ಲಿ ಸಂತ ಅಲೋಶಿಯಸ್ ಕಾಲೇಜು ವಾರ್ಷಿಕೋತ್ಸವ - - - ಹರಿಹರ: ನಗರದ ಅಮರಾವತಿ ಗ್ರಾಮ ಸಮೀಪದ ಸಂತ ಅಲೋಶಿಯಸ್ ಇಂಟರ್ ನ್ಯಾಷನಲ್ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಬೌದ್ಧಿಕ, ಸಾಂಸ್ಕೃತಿಕ, ಪ್ರತಿಭಾ ವಿಕಸನದ ಅಲೋಶಿಯಸ್ ವೈಭವ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಮಾತೃಸಂಸ್ಥೆ ಮಂಗಳೂರು ರೆಕ್ಟರ್ ಫಾದರ್ ಎಸ್.ಜೆ. ಮೆಲ್ವಿನ್ ಪಿಂಟೋ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಕಾರ್ಯದಲ್ಲಿ ಫೋಷಕರು ಹಾಗೂ ಶಿಕ್ಷಕರು ನಿಷ್ಟೆಯಿಂದ ಕಾರ್ಯನಿರ್ವಹಿಸಬೇಕು. ಆಗ ಆ ಶ್ರಮ ಫಲದಾಯಕವಾಗುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಹಿತದೃಷ್ಟಿಯಿಂದ ಎಲ್ಲರ ಪ್ರೋತ್ಸಾಹ ನಿರಂತರ ಇರಬೇಕಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಅಲೋಶಿಯಸ್ ಶಿಕ್ಷಣ ಸಂಸ್ಥೆ ಕೇವಲ ಶಿಕ್ಷಣ ಕೇಂದ್ರವಾಗಿರದೇ, ಕಳೆದ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಜೊತೆಗೆ, ಮಾನವೀಯ ಸೇವಾ ಕಾರ್ಯದಲ್ಲಿ ತೊಡಗಿರುವುದು ಪ್ರಶಂಸನೀಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳಲು ಅಂಕಗಳ ಜೊತೆಗೆ ಬಹುಮುಖ ಪ್ರತಿಭೆಯೂ ಪ್ರಧಾನವಾಗುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಗತ್ಯ ರೂಪುರೇಷೆಗಳನ್ನು ಕೈಗೊಂಡು ಕಾರ್ಯರೂಪಕ್ಕೆ ತರಬೇಕೆಂದು ಹೇಳಿದರು.
ಜಿಲ್ಲಾ ಉಪ ನಿರ್ದೇಶಕ (ಆಡಳಿತ ವಿಭಾಗ) ಕೊಟ್ರೇಶ್ ಜಿ., ಕ್ಷೇತ್ರ ಶಿಕ್ಷಣಾಧಿಕಾರಿ ದುರ್ಗಪ್ಪ ಡಿ., ಬಾತಿ ತಪೋವನ ಅಧ್ಯಕ್ಷ ಡಾ. ಶಶಿಕುಮಾರ್ ಮೆಹರ್ವಾಡೆ, ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರಗಳನ್ನು ನೀಡಿ ಗೌರವಿಸಿದರು. ವಿದ್ಯಾರ್ಥಿ ಸುಹೇಲ್, ಸಂಸ್ಥೆಯ ಹಿತೈಷಿ ಹಾಗೂ ಪೋಷಕರೂ ಆಗಿರುವ ರಮೇಶ್ ಹಿರೇಬಿದ್ರಿ ಅವರನ್ನು ಸನ್ಮಾನಿಸಲಾಯಿತು.ಫಾದರ್ ಜಾರ್ಜ್ ಕೆ.ಎ., ಫಾದರ್ ಎರಿಕ್ ಮಥಾಯಸ್ ಎಸ್.ಜೆ., ಬೆಳ್ಳೂಡಿ ಕ್ಲಸ್ಟರ್ ಸಿ.ಆರ್.ಪಿ. ಚೆನ್ನಮ್ಮ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪುಷ್ಪಲತಾ ಅರಸ್, ಶಾಲಾ ಪ್ರಾಂಶುಪಾಲರಾದ ಭಗಿನಿ ಶಾಂತಿ ಡೇವಿಡ್, ಉಪನ್ಯಾಸಕರಾದ ಶಮೀಮ್ ಬಾನು ಹಾಗೂ ಶಿಕ್ಷಕಿ ಸ್ಟೆಲ್ಲಾ ರೋಸ್ಲಿನ್, ಉಪನ್ಯಾಸಕ ಅಬ್ದುಲ್ ರೆಹಮಾನ್, ಭಗಿನಿ ಏಂಜೆಲ್ ಇತರರು ಭಾಗವಹಿಸಿದ್ದರು.
- - - -25ಎಚ್.ಆರ್.ಆರ್03:ಹರಿಹರದ ಸಂತ ಅಲೋಶಿಯಸ್ ಇಂಟರ್ ನ್ಯಾಷನಲ್ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಬೌದ್ಧಿಕ, ಸಾಂಸ್ಕೃತಿಕ, ಪ್ರತಿಭಾ ವಿಕಸನದ “ಅಲೋಶಿಯಸ್ ವೈಭವ” ವಾರ್ಷಿಕೋತ್ಸವ ನಡೆಯಿತು.