ಬಾಕಿ ಬಿಲ್‌ ಬಿಡುಗಡೆಗಾಗಿ ಬೀದಿಗಿಳಿದ ಗುತ್ತಿಗೆದಾರರು

KannadaprabhaNewsNetwork | Published : Feb 15, 2025 12:30 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬಾಕಿ ಬಿಲ್‌ ಬಿಡುಗಡೆ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಗುತ್ತಿಗೆದಾರರು ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ವ್ಯಾಪಾರಸ್ಥರ ಸಂಘ, ಜಿಲ್ಲಾ ನ್ಯಾಯವಾದಿಗಳ ಸಂಘ,ಸಿಮೆಂಟ್‌ ಡೀಲರ್‌ ಅಸೋಸಿಯೇಷನ್‌, ಸಿಮೆಂಟ್ ವರ್ತಕರು, ಎಪಿಎಂಸಿ ಮರ್ಚಂಟ್ಸ್ ಅಸೋಸಿಯೇಷನ್‌ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಾಕಿ ಬಿಲ್‌ ಬಿಡುಗಡೆ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಗುತ್ತಿಗೆದಾರರು ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ವ್ಯಾಪಾರಸ್ಥರ ಸಂಘ, ಜಿಲ್ಲಾ ನ್ಯಾಯವಾದಿಗಳ ಸಂಘ,ಸಿಮೆಂಟ್‌ ಡೀಲರ್‌ ಅಸೋಸಿಯೇಷನ್‌, ಸಿಮೆಂಟ್ ವರ್ತಕರು, ಎಪಿಎಂಸಿ ಮರ್ಚಂಟ್ಸ್ ಅಸೋಸಿಯೇಷನ್‌ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದರು. ಸರ್ಕಾರ ಬಾಕಿ ಬಿಲ್‌ ಮಾಡದಿದ್ದರೆ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಂಡರೆ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.

ನಗರದ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ಪ್ರತಿಭಟನೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ಸಿ.ಆರ್.ರೂಢಗಿ ಮಾತನಾಡಿ, ಗುತ್ತಿಗೆದಾರರು ಬಿಲ್ ಪಾವತಿಯಾಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಲೋಕೋಪಯೋಗಿ, ಮಹಾನಗರ ಪಾಲಿಕೆ, ಸಣ್ಣ ನೀರಾವರಿ, ಬೃಹತ್ ನೀರಾವರಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಕಳೆದ ಎರಡು ಮೂರು ವರ್ಷಗಳಿಂದ ಬಿಲ್ ಪಾವತಿಯಾಗಿಲ್ಲ. ಕಾಮಗಾರಿಗಳಿಗೆ ಬೇಕಾದ ಸಾಮಗ್ರಿಗಳು, ಕಚ್ಚಾ ವಸ್ತುಗಳು, ಸಿಮೆಂಟ್, ಕಬ್ಬಿಣ, ಜಲ್ಲಿ, ಬಣ್ಣ, ಇಟ್ಟಿಗೆ ಮೊದಲಾದವುಗಳನ್ನು ಖರೀದಿಸಿದ್ದು, ಈ ಎಲ್ಲ ವರ್ತಕರಿಗೆ ಹಣ ನೀಡಲು ಗುತ್ತಿಗೆದಾರರಿಗೆ ಸಾಧ್ಯವಾಗುತ್ತಿಲ್ಲ. ಈ ಎಲ್ಲ ಖರ್ಚು ನಿಭಾಯಿಸಲು ಪಡೆದ ಕೈಗಡ ಸಾಲ ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.ಜಿಲ್ಲಾ ಗುತ್ತಿಗೆದಾರರ ಸಂಘ ಪ್ರಧಾನ ಕಾರ್ಯದರ್ಶಿ ಐ.ಎಂ.ಪಟ್ಟಣಶೆಟ್ಟಿ ಮಾತನಾಡಿ, ಕಳೆದ ೨-೩ ವರ್ಷಗಳಿಂದ ಗುತ್ತಿಗೆದಾರರು ವಿವಿಧ ಇಲಾಖೆಗಳಲ್ಲಿ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಿದ್ದು, ಹಣ ಪಾವತಿ ವಿಳಂಬವಾಗುತ್ತಾ ಬಂದಿದೆ. ಆದರೆ, ಬಾಕಿ ಬಿಲ್‌ಗಳು ಈ ವರೆಗೂ ಪಾವತಿಯಾಗಿಲ್ಲ. ಬಾಕಿ ಬಿಲ್‌ ಬಿಡುಗಡೆ ಕುರಿತುವಿಧಾನಸಭೆ ಕಲಾಪದಲ್ಲಿಯೂ ಪ್ರಸ್ತಾಪವಾಗಿದೆ. ೨೦೨೫ ಫೆಬ್ರುವರಿ ಅಂತ್ಯದೊಳಗೆ ಸರ್ಕಾರ ಬೇಡಿಕೆಯನ್ನು ಈಡೇರಿಸದಿದ್ದರೆ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಆತ್ಮಹತ್ಯೆಯ ನಿರ್ಧಾರ ಕೈಗೊಂಡರೆ ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ. ಕೂಡಲೇ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.ಗೌರವಾಧ್ಯಕ್ಷ ಅರುಣ ಮಠ, ಕಾರ್ಯಾಧ್ಯಕ್ಷ ಸತೀಶ ಡೋಣೂರಮಠ, ಎಚ್.ಆರ್.ಚಿಂಚಲಿ, ಐ.ಎಂ.ಪಟ್ಟಣಶೆಟ್ಟಿ, ಸುನೀಲ್ ಉಳ್ಳಾಗಡ್ಡಿ, ಬಿ.ಆರ್.ನಂದ್ಯಾಗೋಳ, ಎಸ್.ಸಿ.ಚಿಕರೆಡ್ಡಿ, ಬಿ.ಎಸ್.ಬಿರಾದಾರ, ಎಸ್.ಎಸ್.ಆಲೂರ, ಎಚ್.ಟಿ.ಬಿಂಜಲಭಾವಿ, ಎ.ಎಸ್.ಪಾಟೀಲ, ಪ್ರವೀಣ ಹಿರೇಮಠ, ಸಿ.ಆರ್.ಗಂಗಾಧರ, ಉಮೇಶ ಮೆಟಗಾರ, ಸಂಜೀವ ಜತ್ತಿ, ರವೀಂದ್ರ ಬಿಜ್ಜರಗಿ, ಎಸ್.ಎಸ್.ಶಿರಾಡೋಣ, ಸುರೇಶಗೌಡ ಪಾಟೀಲ, ಎಂ.ಆರ್.ತಾಂಬೋಳೆ, ಸುಜಿತ ಬಿಜ್ಜಲಬಾವಿ, ಸಿದ್ದು ಬಿರಾದಾರ, ಶ್ಯಾಮ ಪಾತ್ರದ, ಜೆ.ಜಿ.ಕಲ್ಲೂರ, ಆರ್.ಎಂ.ಮಾವಿನಗಿಡದ, ಎ.ಎಸ್.ಬಿರಾದಾರ, ಆರ್.ಬಿ.ನಂದ್ಯಾಗೋಳ, ಎಸ್.ಸಿ.ಚಿಕ್ಕರಡ್ಡಿ, ಬಿ.ಎಸ್. ಬಿರಾದಾರ, ಎನ್.ವಿ.ಕುಲಕರ್ಣಿ, ಎಸ್.ಎಸ್.ಆಲೂರ, ಎಸ್.ಟಿ.ಬಿಜ್ಜಲಬಾವಿ, ಎ.ಎಸ್.ಪಾಟೀಲ, ಪ್ರವೀಣ ಹಿರೇಮಠ, ಸಿ.ಆರ್. ಗಂಗಾಧರ, ಉಮೇಶ ಮೆಟಗಾರ, ಸಂಜು ಜತ್ತಿ, ಡಿ.ಜಿ.ಬಿರಾದಾರ, ರವೀಂದ್ರ ಬಿಜ್ಜರಗಿ, ಎಸ್.ಎಸ್.ಸಿರಾಡೋಣ, ಶಿವು ಗದಿಗೆಪ್ಪಗೌಡ, ಸುಭಾಸ ಪಾಟೀಲ, ರಾಜು ಪದ್ಮಣ್ಣವರ ಮುಂತಾದವರು ಭಾಗವಹಿಸಿದ್ದರು.

ಕೋಟ್‌

ರಾಜ್ಯದಲ್ಲಿ ಆರ್ಥಿಕಷ ಸಂಕಷ್ಟದಿಂದ ಅನೇಕ ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗುವಂತಾಗಿದೆ. ವಿಜಯಪುರ ಜಿಲ್ಲೆಯ ಅನೇಕ ಗುತ್ತಿಗೆದಾರರು ಒತ್ತಡ ಎದುರಿಸುತ್ತಿದ್ದಾರೆ, ಒಂದು ವೇಳೆ ಸರ್ಕಾರ ಕೂಡಲೇ ಬಿಲ್ ಪಾವತಿ ಪಾವತಿ ಮಾಡದೇ ಹೋದರೆ ಗುತ್ತಿಗೆದಾರರಿಗೆ ಆಗುವ ಪ್ರಾಣಹಾನಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ.

ಸಿ.ಆರ್.ರೂಢಗಿ, ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ

Share this article