ಉದ್ಯೋಗಪತಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಿ

KannadaprabhaNewsNetwork |  
Published : Jun 27, 2026, 03:15 AM IST
ಜಮಖಂಡಿ ತಾಲುಕು ಗಾಣಿಗ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಮಾಜಿ ಶಾಸಕ ಆನಂದ ನ್ಯಾಮಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ,ಎಸ್‌,ನ್ಯಾಮಗೌಡ ಉದ್ಘಾಟಿಸಿದರು.  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿ ವಿದ್ಯಾರ್ಥಿಗಳು ಕೇವಲ ನೌಕರಿಗಳನ್ನು ಪಡೆಯಲು ಸಾಧನೆ ಮಾಡದೇ ಭವಿಷ್ಯದಲ್ಲಿ ಉದ್ಯೋಗಪತಿಗಳಾಗುವತ್ತ ಸಾಧನೆ ಮಾಡಿರಿ, ಉದ್ಯೋಗಿಗಳಾಗಿ ನೀವೇ ನೌಕರಿಗಳನ್ನು ಕೊಡುವ ಮಟ್ಟಿಗೆ ಬೆಳೆಯಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿವಿದ್ಯಾರ್ಥಿಗಳು ಕೇವಲ ನೌಕರಿಗಳನ್ನು ಪಡೆಯಲು ಸಾಧನೆ ಮಾಡದೇ ಭವಿಷ್ಯದಲ್ಲಿ ಉದ್ಯೋಗಪತಿಗಳಾಗುವತ್ತ ಸಾಧನೆ ಮಾಡಿರಿ, ಉದ್ಯೋಗಿಗಳಾಗಿ ನೀವೇ ನೌಕರಿಗಳನ್ನು ಕೊಡುವ ಮಟ್ಟಿಗೆ ಬೆಳೆಯಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಗಾಣಿಗ ಸಮಾಜ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಐ ಬಂದಾಗಿನಿಂದ ಸ್ಪರ್ಧೆ ಹೆಚ್ಚಾಗಿದೆ. 90-95 ಅಂಕಗಳನ್ನು ಪಡೆಯುವದು ಸಾಮಾನ್ಯ ಎಂಬ ವಾತಾವರಣ ನಿರ್ಮಾಣವಾಗಿದೆ. ಪರಿಶ್ರಮದಿಂದ ಉನ್ನತ ಗುರಿಗಳನ್ನಿಟ್ಟುಕೊಂಡು ಸಾಧನೆ ಮಾಡಬೇಕು, ಉದ್ಯಮಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು. ಗಾಣಿಗ ಸಮಾಜದ ವತಿಯಿಂದ ತಾಲುಕು ಮಟ್ಟದಲ್ಲಿ ಸಾಧನೆ ಮಾಡಿದ ಉಳಿದ ಸಮಾಜದ ವಿದ್ಯಾರ್ಥಿಗಳಿಗೆ ಪುರಸ್ಕರಿಸಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ಲಾಘಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಜೆ.ಎಸ್‌.ನ್ಯಾಮಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಾಣಿಗ ಸಮಾಜ ಎಲ್ಲರ ಜೊತೆ ಸೇರಿ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ಹೆಚ್ಚು ಸಾಧನೆ ಮಾಡಿದ್ದು ಸಮಾಜಕ್ಕೆ ಕೀರ್ತಿ ತಂದಿದ್ದಾರೆ. ಸುಮಾರು 166 ವಿದ್ಯಾರ್ಥಿಗಳು ಸನ್ಮಾನಿತರಾಗಿದ್ದಾರೆ. ಇವರಂತೆ ಉಳಿದ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ ಎಂದು ಹೇಳಿದರು.

ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ರಾಹುಲ್‌ ಕಲೂತಿ ಮಾತನಾಡಿ, ಸಮಾಜದ ಮಕ್ಕಳು ಇತರರಿಗೆ ಮಾದರಿಯಾಗಿ ಬೆಳೆಯಬೇಕು, ವಿದ್ಯಾರ್ಥಿನಿಯರು ಹೆಚ್ಚು ಸಂಖ್ಯೆಯಲ್ಲಿ ಸಾಧನೆ ಮಾಡಿದ್ದು ಖುಷಿ ತಂದಿದೆ. ಎಲ್ಲ ಮಕ್ಕಳು ಉತ್ತಮ ಸಾಧನೆ ಮಾಡಿ ಸಮಾಜದ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.

ಸಮಾಜದ ಮುಖಂಡ ಎಂ.ಎನ್‌.ನ್ಯಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಸಿಬಿಎಸ್‌ಸಿ, ಎಲ್ಲ ಮಾಧ್ಯಮಗಳ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ವಿಭಾಗದ ಮಕ್ಕಳನ್ನು ಗುರುತಿಸಿ ಸಮಾಜದ ದಾನಿಗಳಿಂದ ದೇಣಿಗೆ ಪಡೆದು ಸನ್ಮಾನ ಕಾರ್ಯಕ್ರಮ ಕಳೆದ 17 ವರ್ಷಗಳಿಂದ ನಡೆಯುತ್ತಿದೆ. ವಧು ವರರ ಸಮಾವೇಶ, ಸಮಾಜದ ಕಡು ಬಡವರಿಗೆ ಆರ್ಥಿಕ ಸಹಾಯ ಮುಂತಾದ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಕೆ.ಕೆ,ತುಪ್ಪದ ಮಾತನಾಡಿ, ಹೆಚ್ಚು ಅಂಕಗಳ ಜೊತೆಗೆ ಸಾಮಾನ್ಯ ಜ್ಞಾನ, ವೃತ್ತಿ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಸಂಘ ಜೀವಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿದ್ದಸಿದ್ಧ ಮುತ್ಯಾ ಶ್ರೀಗಳು ಆಶೀರ್ವಚನ ನೀಡಿದರು. ಜಿ.ಎಸ್‌. ಕಡಕೋಳ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಕನ್ನಡ ಶಾಲೆಯ ಅಧ್ಯಕ್ಷ ಸಿದ್ದರಾಮ ಜಂಬಗಿ, ನೌಕರರ ಸಂಘದ ಅಧ್ಯಕ್ಷ ಜಗದೇವ ಪಾಸೊಡಿ, ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ನ್ಯಾಮಗೌಡ, ಉಪಾಧ್ಯಕ್ಷ ನಾಗಪ್ಪ ಮುತ್ತಕ್ಕನವರ, ಯುವ ಘಟಕದ ವಿರೇಂದ್ರ ಕಲೂತಿ, ಮಹಿಳಾ ಯುವ ಘಟಕದ ಅಧ್ಯಕ್ಷೆ ರಾಜಶ್ರೀ ನ್ಯಾಮಗೌಡ ಸೇರಿದಂತೆ ಸಮಾಜದ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ವಿವಿಯಲ್ಲಿ ನೇಮಕಾತಿ ಮರು ಪರಿಶೀಲಿಸಲು ಮನವಿ
ಮಹಿಳಾ ವಿವಿ, ಸೆಲ್ಕೊ ಸೋಲಾರ್‌ ಲೈಟ್ ಕಂಪನಿ ಮಧ್ಯೆ ಒಡಂಬಡಿಕೆ