ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ನ್ಯಾಯವಾದಿಗಳೇ ಆಗಿದ್ದು, ದೇಶ ಕಟ್ಟುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹೇಳಿದರು.
ಸಿದ್ದರಾಮಯ್ಯ ಸ್ವತಃ ವಕೀಲರಾಗಿದ್ದ ಕಾರಣ ಭ್ರಷ್ಟಚಾರಮುಕ್ತ ಆಡಳಿತ ನೀಡಲು ಸಾಧ್ಯವಾಗಿದೆ. ಜೊತೆಗೆ ಅವರನ್ನು ಟೀಕಿಸಲು ಕೂಡ ವಿಪಕ್ಷದವರು ಹತ್ತಾರು ಬಾರಿ ಯೋಚಿಸುತ್ತಾರೆ. ನಿಜಲಿಂಗಪ್ಪ, ಬಂಗಾರಪ್ಪ ಹೀಗೆ ರಾಜಕಾರಣದಲ್ಲಿ ಉನ್ನತ ಸ್ಥಾನಮಾನ ಅಲಂಕರಿಸಿದವರು ವಕೀಲರಾಗಿದ್ದರು ಎಂಬುದು ವಿಶೇಷ. ಪಕ್ಷ ರಾಜಕಾರಣಕ್ಕೆ ಪ್ರವೇಶಿಸಿ ನಿಷ್ಠೆ, ತಾಳ್ಮೆ ವಹಿಸಿದರೇ ಉನ್ನತ ಹುದ್ದೆ ಅಲಂಕರಿಸಿದ ಬಹಳಷ್ಟು ವಕೀಲರ ರಾಜಕೀಯ ಬದುಕು ನಮ್ಮ ಕಣ್ಣ ಮುಂದೆ ಇದೆ ಎಂದರು.
ಪ್ರಸ್ತುತ ಜಾಪ್ರಭತ್ವ ಸಂಕಷ್ಟಕ್ಕೆ ಸಿಲುಕಿದೆ. ಸುಳ್ಳು ಸುದ್ದಿಗಳೇ ವೈಭವಿಕರಣಗೊಳ್ಳುತ್ತೀವೆ. ಸಾಮಾನ್ಯ ಜನರನ್ನು ಸುಳ್ಳುಗಳ ಮೂಲಕ ದಿಕ್ಕುತಪ್ಪಿಸುವ ಕೆಲಸ ನಡೆಯುತ್ತಿದೆ. ಬಡ, ಮಧ್ಯಮ ವರ್ಗದ ಜನರ ಬದುಕನ್ನು ಉತ್ತಮಗೊಳಿಸುವ ಗ್ಯಾರಂಟಿ ಯೋಜನೆಗಳ ಕುರಿತು ಅವಹೇಳನಕಾರಿ ಹೇಳಿಕೆಗಳು ಬರುತ್ತಿವೆ. ಈ ಸಂದರ್ಭ ವಕೀಲರ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದರು.ಅಪಾರ ಕಾನೂನು ಜ್ಞಾನ ಹೊಂದಿರುವ ವಕೀಲರು ಸಮಾಜದ ಕಣ್ಣುಗಳು. ನಿಮ್ಮ ದೃಷ್ಟಿ ಸಮಾಜಮುಖಿಯಾಗಿಯೇ ಇರಲಿದೆ. ನಿಮ್ಮನ್ನು ಈ ಸಮಾಜ ನಂಬುತ್ತದೆ, ಜೊತೆಗೆ ಗೌರವಿಸುತ್ತದೆ. ಆದ್ದರಿಂದ ಹೆಚ್ಚು ರಾಜಕೀಯ ಪ್ರವೇಶ ಆಗಬೇಕಿದೆ. ಜೊತೆಗೆ ಸಾರ್ವಜನಿಕ ಹಿತಾಸಕ್ತಿ ಮೂಲಕ ಸಮಾಜದ ರಕ್ಷಣೆಗೆ ಮುಂದಾಗಬೇಕು. ಧ್ವನಿಯಿಲ್ಲದ ಜನರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸಬೇಕು. ಈ ದೇಶವನ್ನು ಸಮರ್ಥವಾಗಿ ಕಟ್ಟುವ ಶಕ್ತಿ ಎಲ್ಲರಿಗಿಂತಲೂ ನಿಮ್ಮಲ್ಲಿ ಹೆಚ್ಚು ಇದೆ ಎಂದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಮಾಜಿ ಅಧ್ಯಕ್ಷ ಶಿವುಯಾದವ್, ಕಾಂಗ್ರೆಸ್ ಲೀಗಲ್ ಸೆಲ್ ಅಧ್ಯಕ್ಷ ಸುದರ್ಶನ್ , ಮಾಜಿ ಪ್ರಧಾನ ಕಾರ್ಯದರ್ಶಿ ದಯಾನಂದ್, ಲೋಕೇಶ್, ಕುಮಾರ್ ಇದ್ದರು.