ಕನ್ನಡಪ್ರಭ ವಾರ್ತೆ ಭಾಲ್ಕಿ
ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ನಂತರವೂ ಖಂಡ್ರೆ ಪರಿವಾರ ಜಿಲ್ಲೆಯ ಜನರ ಸೇವೆಗೆ ಮುಡಿಪಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಾಗರ ಖಂಡ್ರೆಯವರ ಜನ್ಮದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗಡಿ ಜಿಲ್ಲೆ ಬೀದರ್ ಪ್ರಗತಿಯಲ್ಲಿ ಖಂಡ್ರೆ ಮನೆತನದ ಕೊಡುಗೆ ಅನನ್ಯವಾಗಿದೆ ಎಂದರು.
ಶತಾಯಷಿ ಡಾ. ಚನ್ನಬಸವ ಪಟ್ಟದ್ದೇವರು, ಡಾ. ಭೀಮಣ್ಣ ಖಂಡ್ರೆಯವರು ಸ್ವತಂತ್ರ ಪೂರ್ವ ಬ್ರಿಟಿಷರ ವಿರುದ್ಧ ಸ್ವತಂತ್ರ ಬಳಿಕ ನಿಜಾಂನ ವಿರುದ್ಧ ಹೋರಾಟ ನಡೆಸಿ ಗಡಿ ಭಾಗವನ್ನು ಕನ್ನಡ ನೆಲದಲ್ಲಿ ಉಳಿಸಿದ್ದಾರೆ. ಅವರ ಹೋರಾಟ ಸ್ಮರಣೀಯವಾಗಿದೆ. ಭೀಮಣ್ಣ ಖಂಡ್ರೆಯವರು ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರಂತೆ ಅವರ ಪುತ್ರ ಈಶ್ವರ ಖಂಡ್ರೆ ಅವರು ಶಾಸಕರಾಗಿ, ಮಂತ್ರಿಯಾಗಿ ಜಿಲ್ಲೆಯ ಅಭಿವೃದ್ಧಿ ಅವಿರತವಾಗಿ ದುಡಿಯುತ್ತಿದ್ದಾರೆ. ಸಚಿವರ ಪುತ್ರ ಸಾಗರ ಖಂಡ್ರೆ ಅವರು ಕೂಡ ಸಾಮಾಜಿಕ ಸೇವೆಗೆ ಮುಂದಾಗುತ್ತಿರುವುದು ಹೆಮ್ಮೆ ತರಿಸಿದೆ. ಅವರ ಅಂದುಕೊಂಡ ಗುರಿ ಈಡೇರಲಿ ಎಂದು ಹಾರೈಸಿದರು.ಯುವ ಮುಖಂಡ ಸಾಗರ ಖಂಡ್ರೆ ಮಾತನಾಡಿ, ಹಿರೇಮಠ ಸಂಸ್ಥಾನದ ಆಶೀರ್ವಾದ ಸದಾ ನಮ್ಮ ಮನೆತನದ ಮೇಲಿದೆ. ಕಷ್ಟ ಸುಖಗಳಲ್ಲಿ ಪೂಜ್ಯರು ನಮ್ಮೊಂದಿಗೆ ಇದ್ದಾರೆ. ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಪೂಜ್ಯರು ನಮಗೆ ಆದರ್ಶಪ್ರಾಯರಾಗಿದ್ದಾರೆ. ವಿದ್ಯಾರ್ಥಿಗಳು ಮಠದಲ್ಲಿ ಸಿಗುತ್ತಿರುವ ಶಿಕ್ಷಣದ ಸೌಲಭ್ಯ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ಪ್ರಥಮ ದರ್ಜೆ ಗುತ್ತಿಗೆದಾರ ಸಂಗಮೇಶ ಹುಣಜೆ ಮದಕಟ್ಟಿ, ರವೀಂದ್ರ ಚಿಡಗುಪ್ಪೆ, ಗುತ್ತಿಗೆದಾರ ರಾಜಕುಮಾರ ಬಿರಾದಾರ, ಸಂತೋಷ ಹಡಪದ ಇದ್ದರು. ಬಾಬು ಬೆಲ್ದಾಳ ನಿರೂಪಿಸಿ ವಂದಿಸಿದರು.ಮಕ್ಕಳಿಗೆ ನೋಟ್ಬುಕ್ ವಿತರಣೆ:
ಇದೇ ವೇಳೆ ಹಿರೇಮಠ ಸಂಸ್ಥಾನದ ಗುರುಪ್ರಸಾದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 400ಕ್ಕೂ ಹೆಚ್ಚು ಬಡ ಮಕ್ಕಳಿಗೆ ಸಾಗರ ಖಂಡ್ರೆ ಅವರು ತಮ್ಮ ಜನ್ಮದಿನದ ಅಂಗವಾಗಿ ನೋಟ್ಬುಕ್, ಪೆನ್ ವಿತರಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು.ಸಾಗರ ಖಂಡ್ರೆ ಹುಟ್ಟು ಹಬ್ಬ, ರೋಗಿಗಳಿಗೆ ಹಣ್ಣು, ಹಂಪಲು ವಿತರಣೆಕಮಲನಗರ: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರ ಈಶ್ವರ ಖಂಡ್ರೆಯವರ ಜನ್ಮ ದಿನದ ನಿಮಿತ್ತ ಕಾಂಗ್ರೆಸ್ ಜಿಲ್ಲಾ ಕಾರ್ಮಿಕ ಉಪಾಧ್ಯಕ್ಷ ಪ್ರಭು ಬೆಣ್ಣೆ ಹಾಗೂ ಅಭಿನವ್ ಘಾಗರೆ ನೇತೃತ್ವದಲ್ಲಿ ಶುಕ್ರವಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.ಕಾಂಗ್ರೆಸ್ ಕಾರ್ಯಕರ್ತರಾದ ಸುರೇಶ ಮೇತ್ರೆ, ಬಾಬು ಘಾಗರೆ, ತಿರ್ಮೂಕಕುಮಾರ, ಸಾಗರ ಮುಚಳಂಬೆ, ಅನೀಲ ಬರ‍್ಗೆ, ಪ್ರದೀಪ ಪಾಟೀಲ್, ಸಂಜಯ ಠಾಕೂರ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಇತರರು ಇದ್ದರು.