ಮಾಜಿ ಪ್ರಧಾನಿ ಪುಣ್ಯಸ್ಮರಣೆ
ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಏರ್ಪಡಿಸಿದ ಸರ್ದಾರ್ ವಲ್ಲಭ ಬಾಯಿ ಪಟೇಲ್ ಜನ್ಮ ದಿನ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಭಾರತ ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಕಟ್ಟುವ ಕೆಲಸ ಮಾಡಿದರು. ದೇಶದ ಜನರ ಕಲ್ಯಾಣಕ್ಕಾಗಿ ಜಾರಿಗೆ ತಂದ ಗರೀಬಿ ಹಠಾವೋ, ಭೂ ಸುಧಾರಣೆ, ಆಹಾರಭದ್ರತೆಯಂತಹ ೨೦ ಅಂಶದ ಕಾರ್ಯಕ್ರಮಗಳು ಇಂದಿಗೂ ಜನಪ್ರಿಯವಾಗಿವೆ. ಇಂದಿರಾ ಗಾಂಧಿ ಅವರಂತೆ ವಲ್ಲಭಬಾಯಿ ಪಟೇಲರು ಉಕ್ಕಿನ ಮನುಷ್ಯ ಎಂದೇ ಪ್ರಸಿದ್ದಿಯಾಗಿದ್ದರು. ಸ್ವಾತಂತ್ರ್ಯ ನಂತರ ಹಲವಾರು ಕಡೆ ಹರಿದು ಹಂಚಿಹೋಗಿದ್ದ ನಾನಾ ಭಾಗಗಳನ್ನು ಒಟ್ಟುಗೂಡಿಸಿದರು ಎಂದು ಹೇಳಿದರು.ಕಾಡಾ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ,ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್,ಮಹದೇವ್, ಗ್ರಾಪಂ ಅಧ್ಯಕ್ಷ ಶೇಖರಪ್ಪ, ಉಪಾಧ್ಯಕ್ಷ ಪಟೇಲ್ ಗುರುಮಲ್ಲಪ್ಪ, ರಾಜಣ್ಣ, ಸದಸ್ಯ ಮಹೇಶ್, ಯಜಮಾನ್ ನಾಗರಾಜು, ನಗರಸಭೆ ಮಾಜಿ ಸದಸ್ಯ ಪುಟ್ಟಸ್ವಾಮಿ, ಸೈಯದ್ ಅತೀಕ್, ನಸ್ರುಲ್‌ಖಾನ್, ಅಪ್ಸರ್ ಅಹಮದ್, ಇಮ್ರಾನ್ ಖಾನ್, ನಾಗವಳ್ಳಿನಾಗಯ್ಯ, ಕರಿನಂಜನಪುರಸ್ವಾಮಿ, ಕುಮಾರ್ ಮರಿಯಾಲದಹುಂಡಿ, ವಿನೋದ್, ನಾಗೇಂದ್ರ ಹರದನಹಳ್ಳಿ, ಚಂದುಕಟ್ಟೆಮೋಳೆ ಮೋಹನ್‌ನಗು, ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.