- ಸುದ್ದಿಗೋಷ್ಠಿ ನಡೆಸಿ ಶಾಸಕ ಬಿ.ದೇವೇಂದ್ರಪ್ಪ ಮಾಹಿತಿ । ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗಣ್ಯರು ಭಾಗಿಕನ್ನಡಪ್ರಭ ವಾರ್ತೆ ಜಗಳೂರು
ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳು, ಶಾಸಕರು ಸೇರಿದಂತೆ ಅನೇಕ ಗಣ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿಂದೆ ಮಾಡಿರುವ ಜಾತಿ ಜನಗಣತಿ ಸಮೀಕ್ಷೆ ಸರಿಯಾಗಿ ಆಗಿಲ್ಲ. ಸರ್ಕಾರ ಇನ್ನೊಮ್ಮೆ ಜಾತಿ ಜನಗಣತಿ ಮಾಡಿ ವರದಿ ನೀಡಬೇಕೆಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ ಎಂಬ ಪತ್ರಕರ್ತರು ಕೇಳಿದ ಪ್ರಶ್ನೆಗೆ, ‘ಸಮಬಾಳು ಸಮಪಾಲು’ ಎಲ್ಲರಿಗೂ ಕೇಳುವ ಹಕ್ಕಿದೆ. ಕಾಂತರಾಜ್ ವರದಿ ಜಾರಿಯಾದ ಮೇಲೆ ವರದಿಯಲ್ಲಿ ಏನಿದೆ ಎಂಬುದು ಗೊತ್ತಾಗು ತ್ತದೆ. ಈಗಲೇ ಏನು ಹೇಳಲು ಆಗುವುದಿಲ್ಲ. ಲೋಪ ದೋಷಗಳು ಕಂಡು ಬಂದರೆ ಸರಿಪಡಿಸುವ ಸಾಧ್ಯತೆಯೂ ಇದೆ. ಕಾಂಗ್ರೆಸ್ ಪಕ್ಷವಾಗಲಿ ಯಾವುದೇ ಪಕ್ಷವಾಗಲಿ ಸರ್ವೇ ಮಾಡಿಲ್ಲ. ಆಯೋಗ ನೀಡಿದ ವರದಿಯಾಗಿರುತ್ತದೆ ಎಂದು ಶಾಸಕರು ಸ್ಪಷ್ಟಪಡಿಸಿದರು.ಎಸ್‌ಟಿ ಶೆಲ್‌ನ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಶಾಸಕರ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ 28ರಂದು ನಡೆಯುವ ಶೋಷಿತ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಕಲ್ಲೇಶರಾಜ ಪಟೇಲ್, ಬ್ಲಾಕ್ ಅಂಗೈ ಅಧ್ಯಕ್ಷ ಶಂಷೀರ್ ಅಹಮದ್ ಖಾನ್, ರಾಜ್ಯ ಪರಿಶಿಷ್ಟ ಪಂಗಡದ ಕೀರ್ತಿಕುಮಾರ್, ಜಿಎಚ್ ಶಂಭುಲಿಂಗಪ್ಪ, ಓಮಣ್ಣ, ಪಲ್ಲಾಗಟ್ಟಿ ಶೇಖರಪ್ಪ, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ.ಮಹೇಶ್ವರಪ್ಪ, ಲಕ್ಷ್ಮಣ, ಡಿ.ಆರ್ ಹನುಮಂತಪ್ಪ, ಗುರುಸಿದ್ದನಗೌಡ, ಹರೀಶ, ಕೆಳಗೋಟೆ ಶೌಕತ್, ಸೇರಿದಂತೆ ಯುವ ಘಟಕದ ಅಧ್ಯಕ್ಷರು, ಸಾಮಾಜಿಕ ಜಾಲತಾಣದ ಪದಾಧಿಕಾರಿಗಳು ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.24 ಜೆ.ಜಿ.ಎಲ್ 1: ಜಗಳೂರು ಪಟ್ಟಣದ ಪತ್ರಕರ್ತರ ಭವನದಲ್ಲಿ ಬುಧುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಕ್ಷೇತ್ರದ ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿದರು.