ಕನ್ನಡಪ್ರಭ ವಾರ್ತೆ ನಿಪ್ಪಾಣಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಪ್ಪಾಣಿ ನಗರದ ಜನಸಂಖ್ಯೆಯನ್ನು ಪರಿಗಣಿಸಿದರೇ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಸಂಖ್ಯೆ ಕಡಿಮೆವಿರುವ ಕಾರಣ ಇದು ಆಡಳಿತದ ಮೇಲೆ ಹೆಚ್ಚುವರಿ ಹೊರೆ ಹಾಕುತ್ತಿದೆ. ಇದನ್ನು ಮೆಟ್ಟಿ ನಿಲ್ಲಲು ಕೆಲವು ಯುವಕರನ್ನು, ವೈಟ್ ಆರ್ಮಿ, ಕಾಲೇಜು ವಿದ್ಯಾರ್ಥಿಗಳ ಸಹಾಯವನ್ನು ತೆಗೆದುಕೊಳ್ಳುತ್ತಿದ್ದು, ಜತೆಗೆ ಕ್ರಮಗಳನ್ನು ಅನುಸರಿಸುತ್ತಿದ್ದೇವೆ. ಸಿಸಿಟಿವಿ ಕ್ಯಾಮೆರಾಗಳು ಸಹ ಮಹತ್ವದ ಪಾತ್ರ ವಹಿಸುತ್ತವೆ. ಆದರೆ, ಸಿಸಿಟಿವಿ ಕ್ಯಾಮೆರಾಗಳಿಗೆ ಸರ್ಕಾರದಿಂದ ಯಾವುದೇ ಅನುದಾನ ಸಿಗುತ್ತಿಲ್ಲ. ನಾಗರಿಕರೆಲ್ಲರೂ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ತಮ್ಮ ಎಲ್ಲ ಸಂಸ್ಥೆಗಳ, ಅಂಗಡಿ ಮುಂಗಟ್ಟು, ಮನೆ, ಕಚೇರಿಗಳು, ಎದುರುಗಡೆ ರಸ್ತೆ ಕಡೆ, ಪ್ರಮುಖ ಪ್ರವೇಶಗಳ ಕಡೆ ಮುಖ ಮಾಡಿರುವಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಇಂದಿನ ಅಗತ್ಯವಾಗಿದೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಹೋಗುವಾಗ ಮಹಿಳೆಯರು ಚಿನ್ನದ ಆಭರಣಗಳನ್ನು ಧರಿಸಬಾರದು. ಕಡಿಮೆ ಜನರಿರುವ ಪ್ರದೇಶಗಳಲ್ಲಿ ರಾತ್ರಿ ಮತ್ತು ಬೆಳಗ್ಗೆ ಏಕಾಂಗಿಯಾಗಿ ಸಾಗಬೇಡಿ. ಅಂತಹ ಸಂದರ್ಭ ಒದಗಿದ್ದೆಯಾದರೇ ಮಹಿಳೆಯರು ತಮ್ಮ ಜತೆಗೆ ಖಾರದಪುಡಿ ಅಥವಾ ಚಿಕ್ಕ ಕೋಲನ್ನಾದರೂ ತಮ್ಮ ಜತೆಗೆ ತೆಗೆದುಕೊಂಡು ಹೋಗಬೇಕು. ಮಾಸ್ಕ್ ಅಥವಾ ಹೆಲ್ಮೆಟ್ ಧರಿಸಿ ಮತ್ತು ಯಾವುದೇ ಅನುಮಾನಸ್ಪದ ಬೈಕ್ ಸವಾರರನ್ನು ಕಂಡರೆ ಕೂಡಲೇ ಈ ಆರ್‌ಎಸ್ಎಸ್ 112ಗೆ ತಕ್ಷಣ ಕರೆ ಮಾಡಿ ತಿಳಿಸಬೇಕು ಎಂದು ಕೋರಿದರು.ಜಾತ್ರೆಗಳು, ಬಸ್ ನಿಲ್ದಾಣಗಳಲ್ಲಿ ಸಾಗುವಾಗ ಮತ್ತು ಜನಸಂದಣಿ ಇರುವ ಸ್ಥಳಗಳಲ್ಲಿ ನಿಮ್ಮ ವ್ಯಾಲೆಟ್ ಮೊಬೈಲ್ ಮತ್ತು ಬೆಲೆ ಬಾಳುವ ವಸ್ತುಗಳ ಮೇಲೆ ನಿಗಾ ವಹಿಸಬೇಕು. ಮನೆಯಲ್ಲಿನ ಚಿನ್ನಾಭರಣ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕಿನ ಲಾಕರ್‌ನಲ್ಲಿ ಸುರಕ್ಷಿತವಾಗಿಡಬೇಕು. ವಂಚನೆಗೆ ಬಲಿಯಾಗುವುದು ಅರಿತುಕೊಳ್ಳುವಷ್ಟರಲ್ಲಿ ಅದು ತುಂಬಾ ತಡವಾಗಿರುತ್ತದೆ, ಆದಕಾರಣ ಹೆಚ್ಚು ಜಾಗೃಕರಾಗಿರುವುದು ಉತ್ತಮ ಎಂದರು.ಕಳ್ಳರನ್ನು ಹಿಡಿಯಲು ಪೊಲೀಸರು ಹರಸಾಹಸ ಪಡುತ್ತಿದ್ದು, ನಗರದ ತುಂಬೆಲ್ಲ ಬಿಗಿ ಬಂದೋಬಸ್ತ ಜತೆಗೆ ಬೇರೆ ಬೇರೆ ಆಯಾಮಗಳಲ್ಲಿ ಕ್ರಮಗಳನ್ನು ಕೈಗೊಂಡಿದ್ದು, ಕಳ್ಳರನ್ನು ಹಿಡಿಯಲು ಪೊಲೀಸರು ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರವು ಅಗತ್ಯ. ನಿಪ್ಪಾಣಿ ನಗರ ಪಾಲಿಕೆ ವತಿಯಿಂದ ಅಳವಡಿಸಿದ್ದ 55 ಸಿಸಿಟಿವಿ ಕ್ಯಾಮೆರಾಗಳು ಸದ್ಯ ಕಣ್ಣ ಮುಚ್ಚಿಕೊಂಡಿದ್ದು ಕಾರ್ಯನಿರ್ವಹಿಸುತ್ತಿಲ್ಲ. ಅವುಗಳನ್ನು ಸಕ್ರಿಯಗೊಳಿಸಲು ಪ್ರಯತ್ನವನ್ನು ನಡೆಸಿದ್ದು, ನಗರಸಭೆ ಆಡಳಿತವೂ ಕೂಡ ಪೊಲೀಸರಿಗೆ ಸಹಕಾರ ನೀಡಬೇಕೆಂಬುವುದು ಆಶಯ.
- ಉಮಾದೇವಿಗೌಡ, ಶಹರ ಪೊಲೀಸ್ ಠಾಣೆ ಪಿಎಸೈ.