ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಹೊರ ವಲಯದ ಅಡ್ಯಾರು ಗಾರ್ಡನ್‌ನಲ್ಲಿ ಶನಿವಾರ ನಡೆದ 51ನೇ ವಾರ್ಷಿಕ ಮಹಾಸಭೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಈ ವಿಚಾರ ತಿಳಿಸಿದರು.
ಕೃಷಿಕರಿಗೆ ಬೇಕಾದ ಪೋಷಕಾಂಶ ಗೊಬ್ಬರಗಳ ಕಚ್ಚಾವಸ್ತುಗಳನ್ನು ಪ್ರಸಕ್ತ ಕ್ಯಾಂಪ್ಕೋ ಹೊರಗಿನಿಂದ ಖರೀದಿಸಿ ಕ್ಯಾಂಪ್ಕೋ ಬ್ರಾಂಡ್‌ನಲ್ಲಿ ನೀಡುತ್ತಿದೆ. ಇನ್ನು ಮುಂದೆ ಸ್ವತಃ ಕ್ಯಾಂಪ್ಕೋ ಸಂಸ್ಥೆ ಸಾವಯವ ಗೊಬ್ಬರ ಉತ್ಪಾದಿಸುವ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಚಿತ್ರದುರ್ಗದ ಹಿರಿಯೂರಿನಲ್ಲಿ 18 ಎಕರೆ ಜಾಗ ಖರೀದಿಗೆ ನಿರ್ಧರಿಸಿದೆ. ಪ್ರಧಾನ ಮಂತ್ರಿಗಳ ಸಾವಯವ ಉತ್ಪನ್ನಗಳಿಗೆ ಒತ್ತು ನೀಡುವ ಉದ್ದೇಶವನ್ನು ಸಾಕಾರಗೊಳಿಸಲು ಕ್ಯಾಂಪ್ಕೋ ಬದ್ಧವಾಗಿದೆ ಎಂದರು.ಅಡಕೆ ಅಡಮಾನ ಯೋಜನೆ:
ಅಡಕೆ ತೇವಾಂಶ ಅಧ್ಯಯನ:
ಕೃಷಿಕರಿಗೆ ನೆರವಾಗಲು ಕ್ಯಾಂಪ್ಕೋ ವತಿಯಿಂದ ಪುತ್ತೂರಿನಲ್ಲಿ ಅತ್ಯಾಧುನಿಕ ಮಾದರಿಯ ಮಣ್ಣು ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಇದನ್ನು ಕ್ಯಾಂಪ್ಕೋದ ಎಲ್ಲ ಶಾಖೆಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದರು.
ಅಡಕೆ ಮೇಲೆ ಕೇಂದ್ರ ಸರ್ಕಾರ ಶೇ.18ರ ಜಿಎಸ್‌ಟಿ ತೆರಿಗೆ ವಿಧಿಸುತ್ತಿದೆ. ಇದನ್ನು ಶೇ. 5ಕ್ಕೆ ಇಳಿಕೆ ಮಾಡುವಂತೆ ಕೇಂದ್ರ ಹಣಕಾಸು ಸಚಿವರನ್ನು ಕ್ಯಾಂಪ್ಕೋ ನಿಯೋಗ ಜನಪ್ರತಿನಿಧಿಗಳ ಜೊತೆ ತೆರಳಿ ಮನವರಿಕೆ ಮಾಡಿದೆ. ಆದರೆ ಇತ್ತೀಚೆಗೆ ನಡೆದ ಜಿಎಸ್‌ಟಿ ಸಭೆಯಲ್ಲಿ ಈ ತೆರಿಗೆ ಇಳಿಕೆ ಮಾಡಿಲ್ಲ. ಹಾಗಾಗಿ ಮತ್ತೊಮ್ಮೆ ವಿತ್ತ ಸಚಿವರ ಮೇಲೆ ಒತ್ತಡ ತರುವ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.
ಕೊಳೆರೋಗ ಪರಿಹಾರಕ್ಕೆ ಮನವಿ:
51.85 ಕೋಟಿ ರು. ಲಾಭ, ಶೇ.8 ಲಾಭಾಂಶ
2024-25ನೇ ಸಾಲಿನಲ್ಲಿ ಕ್ಯಾಂಪ್ಕೋ ಸಂಸ್ಥೆ 51.85 ಕೋಟಿ ರು. ಲಾಭ ದಾಖಲಿಸಿದ್ದು, 3,632 ಕೋಟಿ ರು.ಗಳ ವ್ಯವಹಾರ ದಾಖಲಿಸಿದೆ. ಸದಸ್ಯ ಗ್ರಾಹಕರಿಗೆ ಶೇ.8 ಲಾಭಾಂಶ ಪ್ರಕಟಿಸಿದೆ ಎಂದು ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.ಸದಸ್ಯ ಗ್ರಾಹಕರಿಗೆ ಅಡಕೆ ಕೇಜಿಗೆ 2 ರು., ಕೊಕ್ಕೋ ಹಸಿ ಬೀಜ ಕೇಜಿಗೆ 4 ರು. ಮತ್ತು ಒಣ ಕೋಕ್ಕೋ ಕೇಜಿಗೆ 6 ರು.ನಂತೆ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ಕ್ಯಾಂಪ್ಕೋ ಸಿಬ್ಬಂದಿಗೆ ಶೇ.14ರ ಉದಾರ ಭತ್ಯೆ ನೀಡಲು ಸಮ್ಮತಿಸಲಾಗಿದೆ ಎಂದರು.
ಈ ಸಂಸ್ಥೆಯು 2,825.77 ಕೋಟಿ ರು. ಮೌಲ್ಯದ 65,675.39 ಮೆಟ್ರಿಕ್ ಟನ್ ಅಡಕೆ ಮಾರಾಟ ಮಾಡಿದೆ ಎಂದರು. ಪಾನ್‌ಮಸಾಲದಲ್ಲಿ ಶೇ.96 ಅಡಕೆ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಸರಿಯಲ್ಲ. ಅದನ್ನು ಸರಿಪಡಿಸಲು ಸರಿಯಾದ ದಾಖಲೆಗಳನ್ನು ಒದಗಿಸಲು ಸಿಪಿಸಿಆರ್‌ಐ ಸೇರಿದಂತೆ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಸಂಶೋಧನೆ ನಡೆಯುತ್ತಿದೆ. ಪಾನ್‌ಮಸಾಲ(ಗುಟ್ಕಾ-ತಂಬಾಕು ಅಲ್ಲ)ದಲ್ಲಿ ಶೇ.96ರಷ್ಟು ಅಡಕೆಯೇ ಇದೆ. ಉಳಿದ ಶೇ.4 ಭಾಗ ಇತರೆ ಉತ್ಪನ್ನಗಳ ಮಿಶ್ರಣ ಇದೆ. ಇದು ಆರೋಗ್ಯಕ್ಕೆ ಹಾನಿಕಾರಕ ಅಲ್ಲ. ಇದೇ ವೇಳೆ ಪಾನ್‌ಮಸಾಲ ಮೇಲಿನ ಜಿಎಸ್‌ಟಿಯನ್ನು ಶೇ. 28ರಿಂದ ಶೇ.40ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಭವಿಷ್ಯದಲ್ಲಿ ಅಡಕೆ ಉತ್ಪನ್ನಗಳಿಗೂ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.---ಕ್ಯಾಂಪ್ಕೋ ಸಂಸ್ಥೆ ಬಗ್ಗೆ ಯಾರೂ ಮಿಥ್ಯಾರೋಪ ಮಾಡಬೇಡಿ. ಇದು ಬೆಳೆಗಾರರ ಹಿತರಕ್ಷಣಾ ಸಂಸ್ಥೆ. ಕ್ಯಾಂಪ್ಕೋ ಸಂಸ್ಥೆ ಇಲ್ಲದಿದ್ದರೆ ಬೆಳೆಗಾರರು ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕ್ಯಾಂಪ್ಕೋ ಸಹಿತ ಸಹಕಾರಿ ಸಂಘಗಳಿಗೆ ಅಡಕೆ ಮಾರಾಟ ಮಾಡುವಾಗ ಬಿಲ್ ಕಡ್ಡಾಯ ಪಡೆದುಕೊಳ್ಳಿ, ಏನೇ ಸಮಸ್ಯೆಗಳು ಇದ್ದರೂ ಕ್ಯಾಂಪ್ಕೋ ಅಧಿಕಾರಿಗಳ ಗಮನಕ್ಕೆ ತರಬಹುದು.
-ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷರು, ಕ್ಯಾಂಪ್ಕೋ ಮಂಗಳೂರು