ಸಹಕಾರ ಸಂಘಗಳು ಕೃಷಿ ಜತೆ ಇತರ ಚಟುವಟಿಕೆಗಳಿಗೂ ಸಾಲ ನೀಡಬೇಕು

KannadaprabhaNewsNetwork |  
Published : Mar 07, 2025, 12:51 AM IST
05 ಎಚ್‍ಆರ್‍ಆರ್ 04ನಗರದ ವಿಶ್ವಬಂಧು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಭಾಂಗಣದಲ್ಲಿ ಸಹಕಾರ ಇಲಾಖೆಯಿಂದ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಒಂದು ದಿನದ ವಿಶೇಷ ತರಬೇತಿ ಶಿಬಿರವನ್ನು ಜಿಲ್ಲಾ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಡಿ. ಕುಮಾರ್ ಉದ್ಘಾಟಿಸಿದರು.ದಾವಣಗೆರೆ ಜಿಲ್ಲಾ ಮಹಾ ಮಂಡಳದ ಒಕ್ಕೂಟದ ಅಧ್ಯಕ್ಷ ಸಿರಿಗೇರಿ ರಾಜಣ್ಣ ಹಾಗೂ ಇತರರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಸಹಕಾರ ಸಂಘಗಳು ಕೃಷಿ ಸಾಲದ ಜತೆಗೆ ಇತರ ಆರ್ಥಿಕ ಚಟುವಟಿಕೆಗಳಿಗೂ ಸಾಲ ನೀಡಿದಲ್ಲಿ ಲಾಭ ಗಳಿಸಬಹುದು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಉಪಾಧ್ಯಕ್ಷ ಡಿ.ಕುಮಾರ್ ಹೇಳಿದ್ದಾರೆ.

- ವಿಶೇಷ ತರಬೇತಿ ಶಿಬಿರದಲ್ಲಿ ಡಿಸಿಸಿಬಿ ಉಪಾಧ್ಯಕ್ಷ ಡಿ.ಕುಮಾರ್‌ - - - ಕನ್ನಡಪ್ರಭ ವಾರ್ತೆ ಹರಿಹರ

ಸಹಕಾರ ಸಂಘಗಳು ಕೃಷಿ ಸಾಲದ ಜತೆಗೆ ಇತರ ಆರ್ಥಿಕ ಚಟುವಟಿಕೆಗಳಿಗೂ ಸಾಲ ನೀಡಿದಲ್ಲಿ ಲಾಭ ಗಳಿಸಬಹುದು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಉಪಾಧ್ಯಕ್ಷ ಡಿ.ಕುಮಾರ್ ಹೇಳಿದರು.

ನಗರದ ವಿಶ್ವಬಂಧು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ದಾವಣಗೆರೆ ಸಹಕಾರ ಇಲಾಖೆ ಆಶ್ರಯದಲ್ಲಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಒಂದು ದಿನದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ ತಳಹದಿಯ ಮೇಲೆ ನಿಂತಿರುವ ಸಂಘಗಳಲ್ಲಿ ಕೆಲವೊಂದು ಕೆಸಿಸಿ ಸಾಲ ಅಥವಾ ಕೃಷಿ ಚಟುವಟಿಕೆಗಳಿಗೆ ಮಾತ್ರ ಸಾಲ ನೀಡುತ್ತಿವೆ. ಇದರೊಂದಿಗೆ ಪೆಟ್ರೋಲ್ ಬಂಕ್, ರಸಗೊಬ್ಬರ ಅಂಗಡಿಗಳು ಟ್ರ್ಯಾಕ್ಟರ್ ಸಾಲ ಸೇರಿದಂತೆ ಅನೇಕ ಸಾಲಗಳನ್ನು ನೀಡಬಹುದಾಗಿದೆ. ಇದರಿಂದ ಸಂಘ ಹಾಗೂ ಸದಸ್ಯರು ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎಂದರು.

ಹರಿಹರ ತಾಲೂಕಿನಲ್ಲಿ ಸುಮಾರು 30 ಸಹಕಾರ ಸಂಘಗಳು ಇವೆ. ಅದರಲ್ಲಿ 22ಕ್ಕೂ ಹೆಚ್ಚು ಸಹಕಾರ ಸಂಘಗಳು ಲಾಭದಲ್ಲಿವೆ. ಉಳಿದವು ಯಾವುದೇ ಹೆಚ್ಚುವರಿ ಕಾರ್ಯನಿರ್ವಹಿಸದೇ ಸಾಮಾನ್ಯ ಮಟ್ಟದಲ್ಲಿ ಇವೆ. ಬಂಡವಾಳ ಕ್ರೋಢೀಕರಣ, ಪಿಗ್ಮಿ ವಸೂಲಿ ಮುಂತಾದವುಗಳ ಮೂಲಕ ಬಂಡವಾಳ ಹೆಚ್ಚಳ ಮಾಡುವ ಮೂಲಕ ಸಂಘವನ್ನು ಲಾಭದೆಡೆ ಕೊಂಡೊಯ್ಯಬಹುದು ಎಂದು ತಿಳಿಸಿದರು.

ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ನಡುವೆ ನಿರಂತರ ಸಂಪರ್ಕ, ಸಲಹೆ ಸೂಚನೆಗಳು, ನಿರ್ದೇಶಕರೊಂದಿಗೆ ಚರ್ಚೆ ಸಾಲ ಪಡೆಯುವವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ಕಾರ್ಯ ಮಾಡಬೇಕು. ಆಗ ಸಂಘಗಳು ಮಾದರಿಯಾಗಿ ಹೊರಹೊಮ್ಮುತ್ತವೆ ಎಂದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಜಿಲ್ಲಾ ಮಹಾಮಂಡಳ ಒಕ್ಕೂಟ ಅಧ್ಯಕ್ಷ ಸಿರಿಗೇರಿ ರಾಜಣ್ಣ ವಹಿಸಿದ್ದರು. ಒಕ್ಕೂಟದ ನಿರ್ದೇಶಕ ಕೆಂಚನಹಳ್ಳಿ ಮಹೇಶ್, ವಿಶ್ವಬಂಧು ಬ್ಯಾಂಕ್ ಅಧ್ಯಕ್ಷ ಅಮರಾವತಿ, ನಾಗರಾಜ್, ಮಂಜುನಾಥ ಹರಗನಹಳ್ಳಿ, ಸಿಡಿಒ ಸುನಿತಾ ಹಾಗೂ ಇತರರು ಭಾಗವಹಿಸಿದ್ದರು.

- - - -05ಎಚ್‍ಆರ್‍ಆರ್04:

ವಿಶೇಷ ತರಬೇತಿ ಶಿಬಿರವನ್ನು ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಡಿ.ಕುಮಾರ್ ಉದ್ಘಾಟಿಸಿದರು. ಜಿಲ್ಲಾ ಮಹಾಮಂಡಳ ಒಕ್ಕೂಟದ ಅಧ್ಯಕ್ಷ ಸಿರಿಗೇರಿ ರಾಜಣ್ಣ, ಇತರರು ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ