ಕನ್ನಡಪ್ರಭ ವಾರ್ತೆ ಕುಶಾಲನಗರ
ಅವರು ಕುಶಾಲನಗರದಲ್ಲಿ ಬಸವನಹಳ್ಳಿ ಸಮೀಪ ಕುಶಾಲನಗರ ಗೌಡ ಸಮಾಜದ ನೂತನ ಕಟ್ಟಡ ಸಂಕೀರ್ಣಕ್ಕೆ ಭೂಮಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ಖಜಾನೆ ಲೂಟಿ ಮಾಡುವ ಕಾಯಕದಲ್ಲಿ ಸರ್ಕಾರ ತೊಡಗಿದೆ. ಡಿ ಕೆ ಶಿವಕುಮಾರ್ ನಂತರದಲ್ಲಿ ಗೃಹ ಸಚಿವ ಪರಮೇಶ್ವರ ಕೂಡ ಹಗರಣದಲ್ಲಿ ಸಿಲುಕಿರುವುದು ಗೋಚರಿಸಿದೆ.ಇಡಿ ಮೂಲಕ ಅವರ ಸಂಸ್ಥೆಗಳಿಗೆ ದಾಳಿ ನಡೆದಿದೆ. ಆಲಿಬಾಬ 40 ಕಳ್ಳರು ಎಂಬಂತೆ ಸಿದ್ದರಾಮಯ್ಯ ಮತ್ತು ಮಂತ್ರಿಮಂಡಲ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಖಜಾನೆಯನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
ಇ ಡಿ ಸ್ವತಂತ್ರವಾಗಿ ತನ್ನ ಕರ್ತವ್ಯ ಮಾಡುತ್ತಿದೆ. ಸದ್ಯದಲ್ಲಿ ಸತ್ಯಾಂಶ ಹೊರಬೀಳಲಿದೆ ಎಂದ ಸದಾನಂದ ಗೌಡ ಅವರು ಗೃಹ ಸಚಿವ ಪರಮೇಶ್ವರ್ ಅವರು ಕೆಲವು ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡಿರುವುದು ಸ್ಪಷ್ಟವಾಗುತ್ತಿದೆ.
ಸರ್ಕಾರದ ಎರಡು ವರ್ಷಗಳ ಸಾಧನ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದ ಗೌಡರು ಬೆಂಗಳೂರಿನಲ್ಲಿ ನಡೆಯಬೇಕಾದ ಸಮಾವೇಶವನ್ನು ಹೊರಗಡೆ ಮಾಡಿರುವುದು ನಿಜಕ್ಕೂ ಸರಿಯಲ್ಲ. ಬೆಂಗಳೂರು ಸಂಪೂರ್ಣ ಮುಳುಗಿರುವ ಸಂದರ್ಭ ಸರ್ಕಾರ ಮೋಜು ಮಸ್ತಿ ಮಾಡಿದಂತೆ ಕಾಣುತ್ತಿದೆ.
ಪ್ರಸಕ್ತ ಬೆಂಗಳೂರಿನ ನಗರದ 1.5 ಕೋಟಿ ಜನರು ನೀರಿನಲ್ಲಿ ತೇಲಾಡುತ್ತಿರುವ ಸಂದರ್ಭ ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಯಲ್ಲಿ ಎರಡು ವರ್ಷಗಳ ಸಾಧನ ಸಮಾವೇಶ ಮಾಡಿರುವುದು ಸರಿಯಲ್ಲ ಎಂದರು.