ದಂಧೆಯಂತಾದ ರಾಜಕಾರಣ ಸ್ವಚ್ಛಗೊಳಿಸಬೇಕು

KannadaprabhaNewsNetwork |  
Published : Mar 22, 2025, 02:02 AM IST
ಸಿಕೆಬಿ-3 ಸುದ್ದಿ ಗೋಷ್ಟಿಯಲ್ಲಿ ಮಹಿಮಾ ಪಟೇಲ್ ಮಾತನಾಡಿದರು | Kannada Prabha

ಸಾರಾಂಶ

ಚುನಾವಣೆಗಳೆಂದರೆ ಜನರಲ್ಲಿ ಹೆಂಡ, ಬಿರ್ಯಾನಿ, ಹಣ, ಸೀರೆ ಹಾಗೂ ಬೆಲೆಬಾಳುವ ಉಡುಗೊರೆಗಳಿಗೆಗೆ ಮಾರುವ ಸರಕಾಗಿದೆ. ಮತದಾನದ ಬಗ್ಗೆ ಅಸಹ್ಯಕರ ಭಾವನೆಯನ್ನು ಮೂಡುವಂತಾಗಿರುವುದು ಖಂಡನೀಯ. ದೇಶದ ಸಮಗ್ರ ಅಭಿವೃದ್ಧಿಗೆ ಸ್ವಚ್ಛ ಆಡಳಿತ ಬೇಕು ಎಂದರೆ ಸ್ವಚ್ಛ ಮತದಾನವಾಗಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇಂದಿನ ರಾಜಕಾರಣದಲ್ಲಿ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದ್ದು ಇದರ ಭಾಗವಾಗಿ ಇಂದು ರಾಜಕಾರಣ ಇಂದು ದಂಧೆಯಾಗಿರುವುದರಿಂದ ಇದನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷ (ಜೆಡಿಯು) ಮಹಿಮಾ ಪಟೇಲ್ ತಿಳಿಸಿದರು ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಇಂದಿನ ರಾಜಕಾರಣ ತುಂಬ ಮಲಿನತೆಯಿಂದ ಕೂಡಿದ್ದು ಇದು ಹೀಗೆ ಮುಂದುವರೆದರೆ ನಾಳಿನ ಜನಾಂಗಕ್ಕೆ ರಾಜಕಾರಣ ಮತ್ತು ಆಡಳಿತ ಯಂತ್ರಾಂಗ ಸಂಪೂರ್ಣವಾಗಿ ಕುಸಿದು, ಮತ್ತೊಮ್ಮೆ ಬ್ರಿಟಿಷರು ನಮ್ಮನ್ನು ಆಳುವಂತಹ ಕ್ರಮವನ್ನು ಸೃಷ್ಟಿಸಬಹುದಾದ ಹೀನ ಸಂಸ್ಕೃತಿಯು ಬರುವ ದಿನಗಳು ದೂರದಲ್ಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು,ಮಾರಾಟದ ಸರಕಾದ ಮತ

ಚುನಾವಣೆಗಳೆಂದರೆ ಜನರಲ್ಲಿ ಹೆಂಡ, ಬಿರ್ಯಾನಿ, ಹಣ, ಸೀರೆ ಹಾಗೂ ಬೆಲೆಬಾಳುವ ಉಡುಗೊರೆಗಳಿಗೆಗೆ ಮಾರುವ ಸರಕಾಗಿದೆ. ಮತದಾನದ ಬಗ್ಗೆ ಅಸಹ್ಯಕರ ಭಾವನೆಯನ್ನು ಮೂಡುವಂತಾಗಿರುವುದು ಖಂಡನೀಯ. ಇಂತ ಶೋಚನೀಯ ಸ್ಥಿತಿಯಲ್ಲಿ ನಮ್ಮ ಡಾ.ನಾಗರಾಜ್ ರವರು ಮುಂಬರುವ ಆಗ್ನೇಯ ಪದವೀಧರರ ಕ್ಷೇತ್ರದಿಂದ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಪ್ರತಿನಿಧಿಸಲಿದ್ದಾರೆ ಎಂದರು.

ಇದರ ಭಾಗವಾಗಿ ದೇಶದ ಮತ್ತು ರಾಜ್ಯದ ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಸಂಘ, ಹಾಗೂ ಸಂಘಟನೆಗಳು ಹೋರಾಟ ಮಾಡುತ್ತಿದ್ದು ಇಂತಹ ಸಮಯಕ್ಕೆ ಎದುರು ನೋಡುತ್ತಿದ್ದ ಅವರು ರಾಜ್ಯದ ಕೆ,ಆರ್.ಎಸ್. ಪಕ್ಷವು ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ, ಇದೇ ದೆಸೆಯಲ್ಲಿ ಕರ್ನಾಟಕದಲ್ಲಿ ಹಲಾವಾರು ಸ್ಥಳಗಳಲ್ಲಿ ಜಾಥಾ ಮಾಡುವ ಮೂಲಕ ಜನರಲ್ಲಿ ಭ್ರಷ್ಟಾಚಾರ ರಹಿತ ರಾಜಕೀಯ ಮತ್ತು ಮತದಾನದ ಅರಿವನ್ನು ಮೂಡಿಸಿ ಪಾರದರ್ಶಕ ಚುನಾವಣೆಯನ್ನು ತರುವಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ನುಡಿದರು.

ಸ್ವಚ್ಛ ಆಡಳಿತ, ಸ್ವಚ್ಛ ಮತದಾನಆಗ್ನೇಯ ಪದವೀದರ ಕ್ಷೇತ್ರದ ಅಭ್ಯರ್ಥಿ ಡಾ.ನಾಗರಾಜ್ ಮಾತನಾಡಿ, ಇಂದು ದೇಶ ಮತ್ತು ರಾಜ್ಯಅಭಿವೃದ್ಧಿಗೆ ಬಹಳ ಮಾರಕವಾದ ವಿಷಯವಾಗಿದೆ. ಅದ್ದರಿಂದ ಸರ್ವೋದಯ ಎಂಬ ಅಂಶದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಪರಿಸರ, ಮತ್ತು ಆಡಳಿತ ಇವುಗಳನ್ನು ಉನ್ನತಿಕರಿಸಿ ಉತ್ತಮ ಮಾರ್ಗದಲ್ಲಿ ನಡೆಯುವ ಹಾಗೆ ಸ್ವಚ್ಛ ಆಡಳಿತ ಬೇಕು ಎಂದರೆ ಸ್ವಚ್ಛ ಮತದಾನವಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಯು ನ ರಾಜ್ಯ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ್ ಗಂಗೂರ್, ಡಿ.ಕೆ ಶ್ರೀನಿವಾಸ ಗೌಡ, ಕಲಾವತಿ, ಕೆ.ಆರ್. ರಂಗನಾಥ್, ಡಿ.ಜೆ.ಪ್ರಭು,ನಾರಾಯಸ್ವಾಮಿ ಗೌಡ, ಮಹೇಶ್ ಗೌಡ, ಮನೋಜ್ ಗೌಡ, ನಾರಾಯಣಸ್ವಾಮಿ, ಮೋತಿಲಾಲ್, ಫಿಜ ಸುಲ್ತಾನ, ಸುಮಾ, ಲಕ್ಷ್ಮೀ, ಮಲ್ಲಮ್ಮ, ಮಂಜುನಾಥ್ ಗೌಡ, ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ
ಹತ್ಯೆ ಕೇಸಲ್ಲಿ ಬೈರತಿಗೆ ಸದ್ಯಕ್ಕಿಲ್ಲ ಬಂಧನ ಭೀತಿ