ಎತ್ತಿನಹೊಳೆ ಯೋಜನೆ ವೆಚ್ಚ ಏರಿಕೆ

KannadaprabhaNewsNetwork |  
Published : Oct 15, 2026, 01:45 AM IST
14ಎಚ್ಎಸ್ಎನ್11 :  | Kannada Prabha

ಸಾರಾಂಶ

ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿಯು ಬುಧವಾರ ಸಕಲೇಶಪುರ ತಾಲೂಕಿನ ಎತ್ತಿನಹೊಳೆ ಯೋಜನೆಯ ವಿವಿಧ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಯೋಜನೆಯ ಮೂಲ ಅಂದಾಜು, ನಂತರದ ಪರಿಷ್ಕರಣೆಗಳು ಹಾಗೂ ವೆಚ್ಚ ಏರಿಕೆಗೆ ಕಾರಣಗಳೇನು ಎಂಬುದರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಲಾಗುತ್ತಿದೆ. ಕಾಮಗಾರಿಗಳಲ್ಲಿ ಬದಲಾವಣೆ ಮಾಡಿರುವುದು ಸೂಕ್ತವಾಗಿದೆಯೇ, ಯೋಜನೆ ಪೂರ್ಣಗೊಳ್ಳಲು ಇನ್ನೆಷ್ಟು ಸಮಯ ಬೇಕಾಗುತ್ತದೆ ಎಂಬುದನ್ನೂ ಸಮಿತಿ ಗಮನಿಸುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಈ ವರ್ಷದ ಅಂತ್ಯದ ವೇಳೆಗೆ ಎತ್ತಿನಹೊಳೆ ಕುಡಿಯುವ ನೀರು ತುಮಕೂರು ಜಿಲ್ಲೆ ತಲುಪಲಿದೆ ಎಂದು ಸಾರ್ವಜನಿಕ ಉದ್ಯಮಗಳ ಸಮಿತಿ ಅಧ್ಯಕ್ಷ ಎಂ.ಸಿ. ಸುಧಾಕರ್ ತಿಳಿಸಿದರು.ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿಯು ಬುಧವಾರ ಸಕಲೇಶಪುರ ತಾಲೂಕಿನ ಎತ್ತಿನಹೊಳೆ ಯೋಜನೆಯ ವಿವಿಧ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಯೋಜನೆಯ ಮೂಲ ಅಂದಾಜು, ನಂತರದ ಪರಿಷ್ಕರಣೆಗಳು ಹಾಗೂ ವೆಚ್ಚ ಏರಿಕೆಗೆ ಕಾರಣಗಳೇನು ಎಂಬುದರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಲಾಗುತ್ತಿದೆ. ಕಾಮಗಾರಿಗಳಲ್ಲಿ ಬದಲಾವಣೆ ಮಾಡಿರುವುದು ಸೂಕ್ತವಾಗಿದೆಯೇ, ಯೋಜನೆ ಪೂರ್ಣಗೊಳ್ಳಲು ಇನ್ನೆಷ್ಟು ಸಮಯ ಬೇಕಾಗುತ್ತದೆ ಎಂಬುದನ್ನೂ ಸಮಿತಿ ಗಮನಿಸುತ್ತಿದೆ ಎಂದರು.2011–12ರಲ್ಲಿ ಯೋಜನೆಯ ಅಂದಾಜು ವೆಚ್ಚ ಸುಮಾರು 8,300 ಕೋಟಿ ಇತ್ತು. 2014–15ರಲ್ಲಿ ಪರಿಷ್ಕೃತ ಅಂದಾಜು 12,700 ಕೋಟಿಗೂ ಅಧಿಕವಾಗಿದ್ದು, 2023ರಲ್ಲಿ ಮತ್ತೊಮ್ಮೆ ಪರಿಷ್ಕರಿಸಿದಾಗ ವೆಚ್ಚ 23 ಸಾವಿರ ಕೋಟಿಗೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವೆಚ್ಚ ಹೆಚ್ಚಳ ಮತ್ತು ವಿಳಂಬಕ್ಕೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸುವುದು ಸಮಿತಿಯ ಭೇಟಿಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.ಯೋಜನೆಯ ಮೂಲ ಉದ್ದೇಶ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಏಳು ಜಿಲ್ಲೆಗಳ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸುಮಾರು 6,000 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವುದಾಗಿದೆ. ಆರಂಭದಲ್ಲಿ 24.01 ಟಿಎಂಸಿ ನೀರು ಲಭ್ಯವಾಗುವ ನಿರೀಕ್ಷೆ ಇತ್ತು. ಆದರೆ, ಕಳೆದ ಐದಾರು ವರ್ಷಗಳ ಮಳೆಯ ಪ್ರಮಾಣವನ್ನು ಗಮನಿಸಿದಾಗ ಸರಾಸರಿ 16ರಿಂದ 17 ಟಿಎಂಸಿ ನೀರು ಲಭ್ಯವಾಗುತ್ತಿದೆ. 2023ರ ಬರಗಾಲದ ಸಂದರ್ಭದಲ್ಲಿ ಸುಮಾರು 7ರಿಂದ 8 ಟಿಎಂಸಿ ಹಾಗೂ ಪ್ರಸಕ್ತ ಸಾಲಿನ ತೀವ್ರ ಬರ ಪರಿಸ್ಥಿತಿಯಲ್ಲಿ ಸುಮಾರು 4 ಟಿಎಂಸಿ ನೀರು ಮಾತ್ರ ಲಭ್ಯವಾಗಿದೆ ಎಂಬ ಮಾಹಿತಿ ದೊರೆತಿದೆ ಎಂದರು.ಯೋಜನೆಗೆ ನೀರು ಲಭ್ಯವಾಗುವುದಿಲ್ಲ ಎಂಬ ಆತಂಕ ಜನರಲ್ಲಿ ಇತ್ತು. ಆದರೆ, ಈ ಹಿಂದೆ ಎದುರಾಗಿದ್ದ ಅರಣ್ಯ ಇಲಾಖೆಯ ಅನುಮತಿ ಹಾಗೂ ರೈತರ ಭೂಮಿಗೆ ಪರಿಹಾರ ನೀಡುವಂತಹ ಹಲವು ತೊಡಕುಗಳು ನಿವಾರಣೆಯಾಗಿವೆ. ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಯೂ ಇತ್ತೀಚಿನ ತಿಂಗಳುಗಳಲ್ಲಿ ದೊರೆತಿರುವುದರಿಂದ ಕಾಮಗಾರಿಗಳಿಗೆ ವೇಗ ಬಂದಿದೆ ಎಂದು ತಿಳಿಸಿದರು. ಈ ವರ್ಷದ ಅಂತ್ಯದ ವೇಳೆಗೆ ತುಮಕೂರು ಜಿಲ್ಲೆಯ ಒಂದು ಭಾಗಕ್ಕೆ ನೀರು ತಲುಪುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಸೇರಿದಂತೆ ಸಂಬಂಧಪಟ್ಟ ಜಿಲ್ಲೆಗಳಿಗೆ ನೀರು ತಲುಪಿಸುವ ಪ್ರಕ್ರಿಯೆ ಮುಂದುವರಿಯುವ ನಿರೀಕ್ಷೆಯಿದೆ. ನೀರನ್ನು ಸಂಸ್ಕರಿಸಿ ಕುಡಿಯಲು ಯೋಗ್ಯವಾಗಿಸುವ ವ್ಯವಸ್ಥೆಗಳ ಬಗ್ಗೆಯೂ ಸಮಿತಿ ಸಭೆಯಲ್ಲಿ ಚರ್ಚಿಸಿದೆ ಎಂದು ಹೇಳಿದರು.ಸಮಿತಿಯು ಎತ್ತಿನಹೊಳೆ ಯೋಜನೆಯ ವಿಯರ್‌-1, ಡಿಸಿ-1 ಪಂಪ್‌ಹೌಸ್, ದೊಡ್ಡನಗರದ ಡಿಸಿ-3 ಪಂಪ್‌ಹೌಸ್, ಡಿಸಿ-4 ಕಾಮಗಾರಿ ಸ್ಥಳ, ಹೆಬ್ಬನಹಳ್ಳಿಯ 400 ಕೆವಿ ಉಪಕೇಂದ್ರ, ಸುರಂಗ ನಿರ್ಗಮನ ಸ್ಥಳ ಹಾಗೂ ಕಾಲುವೆಗಳ ಕಾಮಗಾರಿಗಳನ್ನು ಪರಿಶೀಲಿಸಿತು.ಈ ಸಂದರ್ಭದಲ್ಲಿ ವಿಧಾನಸಭಾ ಸದಸ್ಯರಾದ ವೆಂಕಟಶಿವಾರೆಡ್ಡಿ, ಶಾಂತನಗೌಡ, ಸಮರ್ಥ್‌ ಶಾಮನೂರು, ಶಿವಶಂಕರಪ್ಪ ಹಾಗೂ ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ, ಕಿಶೋರ್ ಕುಮಾರ್‌ ಪುತ್ತೂರು ಸೇರಿದಂತೆ ಸಮಿತಿಯ ಸದಸ್ಯರು, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಸತ್ಯನಾರಾಯಣ, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮೆಂದ್ರ, ಮುಖ್ಯ ಎಂಜಿನಿಯರ್‌ ಆನಂದ್, ಕಾರ್ಯಪಾಲಕ ಎಂಜಿನಿಯರ್ ಗೋಪಾಲ್ ಟಿ., ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೊಹಮ್ಮದ್ ಇಕ್ಬಾಲ್, ಪ್ರಮೋದ್, ಶಶಿಕುಮಾರ್‌, ಶಶಿಧರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಸರಾ ಸಂಭ್ರಮಕ್ಕೆ ಮತ್ಸ್ಯಲೋಕದ ಮೆರುಗು
ಸಿದ್ದರಾಮಯ್ಯ ನಿವಾಸಕ್ಕೆ ಸಚಿವ ಕೆ.ಎಸ್.ಬಸವಂತಪ್ಪ ಭೇಟಿ