ಹಳದಿ-ಕೆಂಪು ಬಣ್ಣಕ್ಕೆ ತಿರುಗುತ್ತಿರುವ ಹತ್ತಿ ಬೆಳೆಯ ಎಲೆಗಳು

KannadaprabhaNewsNetwork |  
Published : Jul 20, 2025, 01:22 AM IST
ಚಿತ್ರ: ೧೬ಎಸ್.ಎನ್.ಡಿ.೦೨-  ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಮಂಜುನಾಥ್ ಹಾಗೂ ಹಗರಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪಾಲಯ್ಯ ಮತ್ತು ವಿಜ್ಞಾನಿ ಡಾ. ರವಿ ರೈತರ ಜಮೀನಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ತಾಲೂಕಿನ ತೋರಣಗಲ್ಲು ಹೋಬಳಿಯ ಕೋಡಾಲು ಗ್ರಾಮದ ಜಮೀನುಗಳಲ್ಲಿ ಬೆಳೆದಿರುವ ಹತ್ತಿ ಬೆಳೆಯಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಎಲೆಗಳು ಹೆಚ್ಚಳವಾಗಿರುವ ಹಿನ್ನೆಲೆ ಬಳ್ಳಾರಿಯ ಉಪ ಕೃಷಿ ನಿರ್ದೇಶಕ ಮಂಜುನಾಥ ಹಾಗೂ ಹಗರಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪಾಲಯ್ಯ ಮತ್ತು ವಿಜ್ಞಾನಿ ಡಾ. ರವಿ ರೈತರ ಬೆಳೆ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ರೈತರ ಜಮೀನುಗಳಿಗೆ ಬಳ್ಳಾರಿಯ ಉಪ ಕೃಷಿ ನಿರ್ದೇಶಕ ಮಂಜುನಾಥ ಹಾಗೂ ಹಗರಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪಾಲಯ್ಯ ಮತ್ತು ವಿಜ್ಞಾನಿ ಡಾ. ರವಿ ಭೇಟಿ

ಕನ್ನಡಪ್ರಭ ವಾರ್ತೆ ಸಂಡೂರು

ತಾಲೂಕಿನ ತೋರಣಗಲ್ಲು ಹೋಬಳಿಯ ಕೋಡಾಲು ಗ್ರಾಮದ ಜಮೀನುಗಳಲ್ಲಿ ಬೆಳೆದಿರುವ ಹತ್ತಿ ಬೆಳೆಯಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಎಲೆಗಳು ಹೆಚ್ಚಳವಾಗಿರುವ ಹಿನ್ನೆಲೆ ಬಳ್ಳಾರಿಯ ಉಪ ಕೃಷಿ ನಿರ್ದೇಶಕ ಮಂಜುನಾಥ ಹಾಗೂ ಹಗರಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪಾಲಯ್ಯ ಮತ್ತು ವಿಜ್ಞಾನಿ ಡಾ. ರವಿ ರೈತರ ಬೆಳೆ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಹತ್ತಿ ಬೆಳೆಯಲ್ಲಿ ಮೆಗ್ನಿಷಿಯಂ, ಬೋರಾನ್ ಮತ್ತು ಪೊಟಾಶ್ ಪೋಷಕಾಂಶಗಳ ಕೊರತೆ ಇರುವುದು ಮತ್ತು ರಸ ಹೀರುವ ಕೀಟಗಳು (ಮೀಲಿ ಬಗ್ಸ್) ಪರಿಶೀಲನೆ ಸಂದರ್ಭ ಕಂಡ ಬಂದ ಹಿನ್ನೆಲೆ ತಜ್ಞರು ಅವುಗಳ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.

ನಂತರ ಕೋಡಾಲು ಗ್ರಾಮದ ರೈತರಿಗೆ ಆತ್ಮ ಯೋಜನೆ ಅಡಿಯಲ್ಲಿ ಹತ್ತಿ ಬೆಳೆಯಲ್ಲಿ ಸಮಗ್ರ ಕೀಟ ಹಾಗೂ ಪೋಷಕಾಂಶಗಳ ನಿರ್ವಹಣೆ ಮತ್ತು ನೈಸರ್ಗಿಕ ಕೃಷಿ ಅಭಿಯಾನದ ಬಗ್ಗೆ ತರಬೇತಿ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಕೃಷಿ ನಿರ್ದೇಶಕ ಮಂಜುನಾಥ್ ಕೃಷಿ ಇಲಾಖೆಯ ವಿವಿಧ ಯೋಜನೆಗಳಾದ ಕೃಷಿ ಭಾಗ್ಯ ಯೋಜನೆ, ಕೃಷಿ ಯಾಂತ್ರೀಕರಣ, ಸೂಕ್ಷ್ಮ ನೀರಾವರಿ, ಸಮಗ್ರ ಕೃಷಿ ಪದ್ಧತಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಗಳ ಕುರಿತು ವಿವರಿಸಿದ್ದಲ್ಲದೆ, ಬೆಳೆ ವಿಮೆಯ ಮಹತ್ವ ಕುರಿತು ಜಾಗೃತಿ ಮೂಡಿಸಿದರು.

ರೈತ ಮಹಿಳೆ ನಾಜನೀನ್ ನದಾಫ್, ಕೃಷಿ ಅಧಿಕಾರಿ ಕೆ.ಆರ್. ಸಂತೋಷ್, ಆತ್ಮ ಸಿಬ್ಬಂದಿಗಳಾದ ಕವಿತಾ ಕುಮಾರಿ, ಧನಂಜಯ ಜೆ.ಪಿ., ಗ್ರಾಪಂ ಸದಸ್ಯರಾದ ವೀರೇಶ್, ರೈತ ಮುಖಂಡ ಸುರೇಶ್ ಮತ್ತಿತರ ರೈತರು ಉಪಸ್ಥಿತರಿದ್ದರು.

PREV

Latest Stories

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ
ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ