5 ಕೋಟಿ ಮೌಲ್ಯದ ನಕಲಿ ಔಷಧಿಗಳು ಜಪ್ತಿ

KannadaprabhaNewsNetwork |  
Published : Aug 19, 2026, 01:15 AM IST
11.ಲೇಬಲಿಂಗ್ ಸಾಮಗ್ರಿ | Kannada Prabha

ಸಾರಾಂಶ

ರಾಮನಗರ: ಬೆಂಗಳೂರು ದಕ್ಷಿಣ ತಾಲೂಕಿನ ಸಿ.ಕೆ.ತಾಂಡ್ಯ ಬಳಿಯ ಫಾಮ್ ಹೌಸ್ ಮೇಲೆ ಮಂಗಳವಾರ ದಾಳಿ ನಡೆಸಿ ಬೃಹತ್ ನಕಲಿ ಔಷಧ ತಯಾರಿಕಾ ಮತ್ತು ಮರು-ಪ್ಯಾಕಿಂಗ್ ದಂಧೆಯನ್ನು ಭೇದಿಸಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸುಮಾರು 5 ಕೋಟಿ ರುಪಾಯಿ ಮೌಲ್ಯದ ನಕಲಿ ಔಷಧಿ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ

ರಾಮನಗರ: ಬೆಂಗಳೂರು ದಕ್ಷಿಣ ತಾಲೂಕಿನ ಸಿ.ಕೆ.ತಾಂಡ್ಯ ಬಳಿಯ ಫಾಮ್ ಹೌಸ್ ಮೇಲೆ ಮಂಗಳವಾರ ದಾಳಿ ನಡೆಸಿ ಬೃಹತ್ ನಕಲಿ ಔಷಧ ತಯಾರಿಕಾ ಮತ್ತು ಮರು-ಪ್ಯಾಕಿಂಗ್ ದಂಧೆಯನ್ನು ಭೇದಿಸಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸುಮಾರು 5 ಕೋಟಿ ರುಪಾಯಿ ಮೌಲ್ಯದ ನಕಲಿ ಔಷಧಿ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.

ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್ ಹಾಗೂ ಎಸ್ಪಿ ಶ್ರೀನಿವಾಸಗೌಡ ನೇತೃತ್ವದ ತಂಡ ಜಂಟಿ ಕಾರ್ಯಾಚರಣೆ ನಡೆಸಿದಾಗ ಬಹುರಾಷ್ಟ್ರೀಯ ಹಾಗೂ ಪ್ರಸಿದ್ಧ ಬ್ರ್ಯಾಂಡೆಡ್ ಕಂಪನಿಗಳ ಹೆಸರಿನ ನಕಲಿ ಲೇಬಲ್‌ಗಳನ್ನು ಬಳಸಿ ನಕಲಿ ಔಷಧ ಮರು ಪ್ಯಾಕ್ ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡುತ್ತಿರುವುದು ಬಯಲಿಗೆ ಬಂದಿದೆ.

ದಂಧೆಯನ್ನು ಪ್ರಶಾಂತ ಸೇರಿ ಇತರರ ಜಾಲ ನಡೆಸುತ್ತಿರುವುದು ದಾಳಿ ವೇಳೆ ಗೊತ್ತಾಗಿದ್ದು, ಫಾರ್ಮ್ ಹೌಸ್ ಅನ್ನು ಲೀಸ್‌ಗೆ ಪಡೆದು ನಕಲಿ ಔಷಧಿಗಳನ್ನ ಮರು ಪ್ಯಾಕಿಂಗ್ ಮಾಡುವ ಘಟಕವನ್ನಾಗಿ ಮಾಡಿಕೊಂಡಿದ್ದರು. ಇದಕ್ಕೆ ಯಾವುದೇ ಪರವಾನಗಿ ಪಡೆದಿರಲಿಲ್ಲ.

ಈ ಜಾಲ ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ಮೂಲದಿಂದ ಕಡಿಮೆ ಮೌಲ್ಯದ ಔಷಧಿಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ನಕಲಿ ಮತ್ತು ಕಡಿಮೆ ಬೆಲೆಯ ಔಷಧಿಗಳಿಗೆ Pizzer ಮತ್ತು Xavitaz ಸೇರಿ ಹಲವು ಕಂಪೆನಿಗಳ ಲೇಬಲ್ ಅಂಟಿಸುತ್ತಿದ್ದರು. ಕೆಲ ಔಷಧಿಗಳ ಮೌಲ್ಯ 600 ರು.ಗಳಿದ್ದರೆ 6 ಸಾವಿರ ಬೆಲೆಯ ಔಷಧಿ ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿತ್ತು.

ಕಳೆದ ಒಂದು ವರ್ಷದಿಂದ ನಕಲಿ ಔಷಧಿಗಳಿಗೆ ಲೇಬಲ್ ಅಂಟಿಸಿ ಮಾರಾಟ ಮಾಡುವ ದಂಧೆ ನಡೆಯುತ್ತಿದ್ದು, ಸ್ಥಳೀಯ ಬೀಟ್ ಪೊಲೀಸರ ಮಾಹಿತಿ ಮೇರೆಗೆ ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಮತ್ತು ಎಸ್ಪಿ ಶ್ರೀನಿವಾಸಗೌಡರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದರು.

ದಾಳಿಯ ವೇಳೆ ಸ್ಥಳದಲ್ಲಿದ್ದ ಭಾರಿ ಪ್ರಮಾಣದ ನಕಲಿ ಮಾತ್ರೆಗಳು, ಕಚ್ಚಾವಸ್ತುಗಳು ಹಾಗೂ ಲೇಬಲಿಂಗ್ ಸಾಮಗ್ರಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಅಧಿಕಾರಿಗಳು ಫಾರ್ಮ್ ಹೌಸ್ ಅನ್ನು ಸೀಲ್ ಮಾಡಿದ್ದಾರೆ.

18ಕೆಆರ್ ಎಂಎನ್ 11,12,13.ಜೆಪಿಜಿ

11.ಲೇಬಲಿಂಗ್ ಸಾಮಗ್ರಿ.

12.ಔಷಧಿ ಬಾಟಲಿ.

13.ಆಹಾರ ಸುರಕ್ಷತೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಕವೀರರಾಗದೆ ಕೌಶಲ್ಯವಂತರಾಗಿ ಬೆಳವಣಿಗೆ ಸಾಧಿಸಿ: ಪ್ರೊ.ಕೆ.ಶಿವಚಿತ್ತಪ್ಪ
ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹ