ಇಂದಿನಿಂದ ಗಜಗಳ ಗಣತಿ ಆರಂಭ

KannadaprabhaNewsNetwork |  
Published : May 23, 2024, 01:08 AM ISTUpdated : May 23, 2024, 12:53 PM IST
22ಜಿಪಿಟಿ1ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪ್ರವೇಶ ದ್ವಾರ. | Kannada Prabha

ಸಾರಾಂಶ

ಇಂದಿನಿಂದ ಮೇ 23 ರಿಂದ 25ರ ತನಕ ಆನೆ ಗಣತಿ ಆರಂಭವಾಗಲಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಗಣತಿ ಆರಂಭವಾಗಲಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ 13 ವಲಯಗಳಲ್ಲಿ ಆನೆ ಗಣತಿಗೆ ಬಂಡೀಪುರ ವನ್ಯಜೀವಿ ಧಾಮ ಸಜ್ಜುಗೊಂಡಿದೆ.

 ಗುಂಡ್ಲುಪೇಟೆ :  ಇಂದಿನಿಂದ ಮೇ 23 ರಿಂದ 25ರ ತನಕ ಆನೆ ಗಣತಿ ಆರಂಭವಾಗಲಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಗಣತಿ ಆರಂಭವಾಗಲಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ 13 ವಲಯಗಳಲ್ಲಿ ಆನೆ ಗಣತಿಗೆ ಬಂಡೀಪುರ ವನ್ಯಜೀವಿ ಧಾಮ ಸಜ್ಜುಗೊಂಡಿದೆ.

ಮೇ 23 ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಗಣತಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಗ್ಗೆ 6 ರಿಂದ ಸಂಜೆ 6 ರ ತನಕ ಕಾಡಿನಲ್ಲಿ ನಡೆದುಕೊಂಡು ನೇರವಾಗಿ ಕಾಣುವ ಆನೆಗಳ ಗಣತಿ ಮಾಡಲಿದ್ದಾರೆ. ಮೇ 24 ರ 2 ನೇ ದಿನ 114 ಬೀಟ್‌ ಗಳಲ್ಲಿ ಟ್ರಾಂಜಾಕ್ಟ್‌ ಲೈನ್‌ನಲ್ಲಿ ನಡೆದುಕೊಂಡು ಎಡ, ಬಲ ಸಿಕ್ಕುವ ಲದ್ದಿ ನೋಡಿ ಆನೆಗಳು ಇರುವ ಬಗ್ಗೆ ಪರೋಕ್ಷವಾಗಿ ಗಣತಿ ಮಾಡಲಿದ್ದಾರೆ. 3 ನೇ ದಿನ ಕಾಡಿನ ನೀರಿರುವ ಸ್ಥಳಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 6 ರ ತನಕ ಬಂದ ಆನೆಗಳು ಆನೆ ಗಂಡೋ, ಹೆಣ್ಣೋ ಹಾಗೂ ವಯಸ್ಸು ಮತ್ತು ಮರಿ ಆನೆಗಳ ಬಗ್ಗೆ ಫಾರ್ಮೆಟ್‌ನಲ್ಲಿ ನಮೂದಿಸಲಿದ್ದಾರೆ.

ಪ್ರತಿ ಬೀಟ್‌ನಲ್ಲಿ 3 ಜನ:  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 114ಬೀಟ್‌ಗಳಿದ್ದು, ಪ್ರತಿ ಬೀಟ್‌ನಲ್ಲಿ 2 ಜನ ಇರಲಿದ್ದು, ಓರ್ವ ಗಾರ್ಡ್‌, ಓರ್ವ ವಾಚರ್‌, ಓರ್ವ ಬಂದೂಕುಧಾರಿ ಇರಲಿದ್ದಾರೆ. ಈ ಮೂವರು ಕಡ್ಡಾಯ ಇರಲಿದ್ದಾರೆ ಎಂದು ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಪ್ರಭಾಕರ್‌ ಎಸ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

250 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಆನೆ ಗಣತಿಯಲ್ಲಿ ಭಾಗವಹಿಸಲಿದ್ದು, ವಲಯ ಅರಣ್ಯಾಧಿಕಾರಿಗಳು, ಸಹಾಯಕ ಸಂರಕ್ಷಣಾಧಿಕಾರಿಗಳು ಆನೆ ಗಣತಿ ನಡೆಯುವ ಮೂರು ದಿನಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.

ಆನೆಗಣತಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆರಂಭವಾಗಲಿದ್ದು, ಮೂರು ದಿನಗಳ ಕಾಲ ಬೆಳಗ್ಗೆ 6 ರಿಂದ ಸಂಜೆ 6ರ ತನಕ ಗಣತಿಯನ್ನು ಅರಣ್ಯ ಸಿಬ್ಬಂದಿ ನಡೆಸಲಿದ್ದಾರೆ. ಮೊದಲ ದಿನ ನೇರವಾಗಿ ಆನೆ ಗಣತಿ ಮಾಡಲಿದ್ದಾರೆ. 2 ನೇ ದಿನ ಟ್ರಾಂಜೆಕ್ಟ್‌ ಲೈನ್‌ನಲ್ಲಿ ಆನೆಗಳು ಹೋದ ಲದ್ದಿಗಳ ನೋಡುವುದು ಹಾಗೂ ಮೂರನೇ ದಿನ ನೀರಿರುವ ಸ್ಥಳದಲ್ಲಿ ಆನೆಗಳ ಗಣತಿ ಮಾಡಲಿದ್ದಾರೆ.-ಪ್ರಭಾಕರನ್‌.ಎಸ್‌, ಡಿಸಿಎಫ್‌, ಬಂಡೀಪುರ

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’