ಹುಣಸಗಿಯಲ್ಲಿ ನ್ಯಾಯಾಲಯ: ನ್ಯಾಯಾಧೀಶರಿಂದ ಪರಿಶೀಲನೆ

KannadaprabhaNewsNetwork |  
Published : Nov 27, 2026, 01:15 AM IST
ಹುಣಸಗಿ ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ಆರಂಭವಾಗುವ ಹುಣಸಗಿ ತಾಲೂಕು ನ್ಯಾಯಾಲಯಕ್ಕೆ ಯಾದಗಿರಿ ಜಿಲ್ಲಾ ಸತ್ರ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ಆರಂಭವಾಗುವ ಹುಣಸಗಿ ತಾಲೂಕು ನ್ಯಾಯಾಲಯಕ್ಕೆ ಯಾದಗಿರಿ ಜಿಲ್ಲಾ ಸತ್ರ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ಆರಂಭವಾಗುವ ಹುಣಸಗಿ ತಾಲೂಕು ನ್ಯಾಯಾಲಯಕ್ಕೆ ಯಾದಗಿರಿ ಜಿಲ್ಲಾ ಸತ್ರ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕರ್ನಾಟಕ ಉಚ್ಚ ನ್ಯಾಯಾಲಯ ರಿಜಿಸ್ಟರ್ ಜನರಲ್ ಅವರು ನ.16 ರಂದು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಸುರಪುರ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು ಹುಣಸಗಿ ತಾಲೂಕು ನ್ಯಾಯಾಲಯದಲ್ಲಿ ಪ್ರತಿ ಶುಕ್ರವಾರ ಹಾಗೂ ಶನಿವಾರ ಕಲಾಪ ನಡಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ನ್ಯಾಯಾಲಯದ ಪೂರ್ವ ಸಿದ್ಧತೆಯನ್ನು ಪರಿಶೀಲನೆ ನಡೆಸಿದರು. ಡಿಸೆಂಬರ್ ಮೊದಲ ವಾರದಲ್ಲಿ ಆರಂಭವಾಗುವ ಹುಣಸಗಿ ತಾಲೂಕು ನ್ಯಾಯಾಲಯದ ಆರಂಭಕ್ಕೆ ಬೇಕಾಗಿರುವ ಕೋರ್ಟ್ ಹಾಲ್, ಸಿಬ್ಬಂದಿ ಕೋಣೆ ಮತ್ತು ವಕೀಲರ ಸಂಘದ ಕೋಣೆಯನ್ನು ಪರಿಶೀಲಿಸಿ ಶೀಘ್ರವಾಗಿ ಕಾಮಗಾರಿಯನ್ನು ಮುಗಿಸುವಂತೆ ಸ್ಥಳದಲ್ಲಿದ್ದ ಕೆಬಿಜೆಎನ್ಎಲ್, ಲೋಕೋಪಯೋಗಿ ಹಾಗೂ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪ್ರಕಾಶ ಪಾಟೀಲ್, ಸುರಪುರ ವಕೀಲರ ಸಂಘದ ಉಪಾಧ್ಯಕ್ಷ ಮಲ್ಲಣ್ಣ ಬೋವಿ, ನಾಗರೆಡ್ಡಿ ಗೌಡಪ್ಪಗೋಳ, ವಿ.ಎಸ್ ಬೈಚಬಾಳ, ಪಿ.ಎಂ ಕಟ್ಟಿಮನಿ, ನಿಂಗರಾಜ ಕಿಲ್ಲೇದಾರ, ಪ. ಪಂ. ಮುಖ್ಯಾಧಿಕಾರಿ ಅರುಣಕುಮಾರ ಚವ್ಹಾಣ, ಎಎಸ್ಐ ಮಧುಸೂದನ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂವಿಧಾನ ಆಶಯಗಳ ಅರಿತು ಪಾಲಿಸುವುದು ಪ್ರತಿ ಪ್ರಜೆಯ ಕರ್ತವ್ಯ-ನಾಗರಾಜ
ಸಭೆ ಅರ್ಧಕ್ಕೆ ಎದ್ದು ಹೋದ ಟಿ.ಎಂ. ಶಾಹಿದ್ ತೆಕ್ಕಿಲ್