ಸಿಪಿಐ, ಪೊಲೀಸರ ಮೇಲೆ ಹಲ್ಲೆ ಆರೋಪಿಗಳಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ

KannadaprabhaNewsNetwork |  
Published : Feb 09, 2026, 01:30 AM IST
NAGALAKSHMI | Kannada Prabha

ಸಾರಾಂಶ

ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕಿ ಗಾಯತ್ರಿ ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.

- ಕಾನೂನು ಎಲ್ಲರಿಗೂ ಒಂದೇ: ಮಹಿಳಾ ಆಯೋಗ ಅಧ್ಯಕ್ಷೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕಿ ಗಾಯತ್ರಿ ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.

ಹರಿಹರ ತಾ. ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ಮಹರ್ಷಿ ಶ್ರೀ ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರು ಕಾಂಗ್ರೆಸ್- ಜೆಡಿಎಸ್- ಬಿಜೆಪಿ ಎಂಬ ಪ್ರಶ್ನೆಗಳೇ ಬರುವುದಿಲ್ಲ. ಕಾನೂನಿನ ಮುಂದೆ ಚಿಕ್ಕವರು, ದೊಡ್ಡವರು ಎಲ್ಲರೂ ಒಂದೇ ಎಂದರು.

ವೃತ್ತ ನಿರೀಕ್ಷಕಿ ಗಾಯತ್ರಿ ಹಾಗೂ ಕಾನ್‌ಸ್ಟೆಬಲ್‌ಗಳ ಮೇಲೆ ಹಲ್ಲೆ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆ ತಪ್ಪಿದ್ದಲ್ಲ. ಸದ್ಯಕ್ಕೆ ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದೆ. ನಾನು ಎಲ್ಲ ಕಡೆ ಜನರಿಗಾಗಿಯೇ ಸುತ್ತಾಡುತ್ತಿದ್ದೇನೆ. 2 ವರ್ಷಗಳಿಂದ ಇದುವರೆಗೂ ಮುಖ್ಯಮಂತ್ರಿ ಅವರು ನನ್ನನ್ನು ಕರೆದು, ಆಯೋಗದ ಕೆಲಸದ ಬಗ್ಗೆ ಪ್ರಶ್ನಿಸಿಲ್ಲ. ನಾನು ಎಲ್ಲಿಗೆ ಹೋದರೂ ಅದು ಸರ್ಕಾರವೇ ಆಗಿರುತ್ತದೆ ಎಂದು ಬಿಜೆಪಿ ಟೀಕೆಗೆ ಅಧ್ಯಕ್ಷೆ ಪ್ರತಿಕ್ರಿಯಿಸಿದರು.

ಮಹಿಳಾ ಆಯೋಗ ರಾಜ್ಯಾಧ್ಯಕ್ಷೆಯಾಗಿ ನಾನು ಸ್ವತಂತ್ರವಾಗಿ ಕೆಲಸ ಮಾಡಲು ಮುಖ್ಯಮಂತ್ರಿ ಅಧಿಕಾರ ನೀಡಿದ್ದಾರೆ. ನಾನೇ ತಪ್ಪು ಮಾಡಿದರೂ ಬಿಡಬಾರದೆಂದು ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಪಡೆದ ನಾವುಗಳೇ ಧನ್ಯರು. ವಿಪಕ್ಷದಲ್ಲಿದ್ದೇವೆ, ಟೀಕೆ ಮಾಡಬೇಕೆಂದು ಎಲ್ಲದಕ್ಕೂ ಟೀಕೆ ಮಾಡಬಾರದು ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.

- - -

(ಕೋಟ್‌) ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಮಾನ ಇನ್ನೂ ಬಾಕಿ ಇದೆ. ಅದೆಲ್ಲವೂ ಮುಗಿದ ನಂತರ ಆಯೋಗಕ್ಕೆ ವರದಿ ಕಳಿಸಿಕೊಡಲಿದ್ದಾರೆ. ಆ ಬಳಿಕ ತನಿಖೆ ಆರಂಭವಾಗಲಿದೆ.

- ಡಾ.ನಾಗಲಕ್ಷ್ಮೀ ಚೌಧರಿ, ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ.

- - -

(ಫೋಟೋ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರ್ಮಿಕ ಆಚರಣೆಗಳಿಂದ ಸಾಮರಸ್ಯವೃದ್ಧಿ: ಶಾಸಕ ಶರತ್‌
ಮಹಿಳಾ ಮೋರ್ಚಾ ಬಗ್ಗೆ ಹಗುರ ಮಾತು: ಜಯಮ್ಮ ಎಚ್ಚರಿಕೆ