ಮೈಕ್ರೋ ಫೈನಾನ್ಸ್‌ ನಿಯಂತ್ರಣ ಕಾಯ್ದೆ ಜಾರಿಗೆ ಸಿಪಿಐಎಂ ಆಗ್ರಹ

KannadaprabhaNewsNetwork | Published : Feb 19, 2025 12:51 AM

ಸಾರಾಂಶ

ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು, ಬಾಧಿತ ಜನತೆಯ ನೆರವಿಗಾಗಿ ಆಗ್ರಹಿಸಿ ಮಂಗಳವಾರ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ಯುವ ಸೇನೆ ಜಂಟಿಯಾಗಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಉಡುಪಿ

ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು, ಬಾಧಿತ ಜನತೆಯ ನೆರವಿಗಾಗಿ ಆಗ್ರಹಿಸಿ ಮಂಗಳವಾರ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ಯುವ ಸೇನೆ ಜಂಟಿಯಾಗಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಿತು.ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ದಲಿತ ಸಂಘರ್ಷ ಸಮಿತಿ ಸಂಚಾಲಕ ಜಯನ್ ಮಲ್ಪೆ, ಸಿಪಿಐಎಂ ಪಕ್ಷದ ರಾಜ್ಯ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಮುಖಂಡರಾದ ಕೆ. ಶಂಕರ್, ಎಚ್. ನರಸಿಂಹ, ಶಶಿಧರ ಗೊಲ್ಲ, ಚಂದ್ರಶೇಖರ, ಕವಿರಾಜ್ ಎಸ್., ಉಮೇಶ್ ಕುಂದರ್, ಸರೋಜ, ದಲಿತ ಸಂಘರ್ಷ ಸಮಿತಿ ಯ ಮುಖಂಡರಾದ ಗಣೇಶ್ ನೆರ್ಗಿ, ಕ್ರಷ್ಣ ಶ್ರೀ ಯಾನ್, ಸಂಧ್ಯಾ, ಋಣಮುಕ್ತ ಹೋರಾಟ ಸಮಿತಿಯ ಸಂಚಾಲಕರಾದ ಮಮತಾ ನಾಯಕ್, ದಲಿತ ಹಕ್ಕುಗಳ ಸಮಿತಿ ಸಂಚಾಲಕರಾದ ಸಂಜೀವ ಬಳ್ಕೂರು, ಸಿಐಟಿಯು ಮುಖಂಡರಾದ ನಳಿನಿ, ದಯಾನಂದ, ಮುರಳಿ, ವೆಂಕಟೇಶ ಕೋಣಿ, ಸೈಯಾದ್ ಅಲಿ, ರಮೇಶ್, ರಾಮ ಕಾರ್ಕಡ ಮುಂತಾದವರು ಭಾಗವಹಿಸಿದ್ದರು.

ಪ್ರತಿಭಟನೆಯ ಬೇಡಿಕೆಗಳು:

ಪ್ರತಿಭಟನೆಯಲ್ಲಿ, ಮೈಕ್ರೋ ಫೈನಾನ್ಸ್‌ಗಳ ಸಾಲದ ಸುಳಿಯಲ್ಲಿ ಸಿಕ್ಕಿ ನಲುಗುತ್ತಿರುವವರನ್ನು ರಕ್ಷಿಸಬೇಕು, ಸಾಲ ವಸೂಲಾತಿಯ ಬರ್ಬರಿಕ, ಕಿರುಕುಳ, ಶೋಷಣೆಯನ್ನು ನಿಲ್ಲಿಸಬೇಕು, ಋಣಮುಕ್ತಿ ಆಯೋಗವನ್ನು ತಳ ಹಂತದವರೆಗೆ ವಿಸ್ತರಿಸಬೇಕು, ಎಲ್ಲ ಮೈಕ್ರೋ ಫೈನಾನ್ಸ್‌ಗಳನ್ನು ಆರ್‌ಬಿಐ - ನಬಾರ್ಡ್‌ ನಿಯಂತ್ರಣಕ್ಕೊಳಪಡಿಸಬೇಕು, ಮೈಕ್ರೋ ಫೈನಾನ್ಸ್ ನಿಯಂತ್ರಣ ಪ್ರಾಧಿಕಾರ ರಚಿಸಬೇಕು, ಮೈಕ್ರೋ ಫೈನಾನ್ಸ್ ಲೇವಾದೇವಿ ನಿಯಂತ್ರಣ ಕಾಯ್ದೆ ಜಾರಿಗೊಳಿಸಬೇಕು, ಸರ್ಕಾರಿ ಸ್ವಸಹಾಯ ಸಂಘ, ಸಹಕಾರಿ ಬ್ಯಾಂಕ್‌ಗಳ ಬಲವರ್ಧನೆಗೊಳಿಸಬೇಕು, ಲೇವಾದೇವಿದಾರರ ಕಿರುಕುಳದ ಬಗ್ಗೆ ದೂರು ದಾಖಲಿಸಲು ಜಿಲ್ಲಾ ಮಟ್ಟದಲ್ಲಿ ದೂರು ಕೇಂದ್ರ ಆರಂಭಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು.

Share this article