ಹುಬ್ಬಳ್ಳಿ:
ಇಲ್ಲಿನ ಕಮರಿಪೇಟೆ, ದಾಜಿಬಾನ್‌ಪೇಟೆ ಗೌಳಿ, ಅರಳಿಕಟ್ಟಿ ಓಣಿ, ಹಳೇಹುಬ್ಬಳ್ಳಿಯ ಶ್ರೀರಾಮ ದೇವಸ್ಥಾನವನ್ನು ರಾಮನವಮಿ ನಿಮಿತ್ತ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಲ್ಲದೇ, ರಾಮನಾಮ ಸ್ಮರಣೆ ಮಧ್ಯೆ ರಾಮತಾರಕ ಹೋಮ ಸೇರಿದಂತೆ ವಿವಿಧ ಬಗೆಯ ವಿಶೇಷ ಪೂಜೆ ನೆರವೇರಿಸಲಾಯಿತು.
ರಾಮನವಮಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಮಹಿಳೆಯರು, ಮಕ್ಕಳು ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀರಾಮನ ದರ್ಶನ ಪಡೆದರು. ಇದಕ್ಕೂ ಪೂರ್ವ ಶ್ರೀರಾಮ ಜನ್ಮೋತ್ಸವ ಅಂಗವಾಗಿ ಶ್ರೀರಾಮನ ದೇವಸ್ಥಾನಗಳಲ್ಲಿ ಧಾರ್ಮಿಕ ವಿಧಿ-ವಿಧಾನದೊಂದಿಗೆ ತೊಟ್ಟಿಲೋತ್ಸವ ನಡೆಯಿತು. ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು, ತೊಟ್ಟಿಲು ತೂಗುವ ಮೂಲಕ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.ವಿಶೇಷವಾಗಿ ದಾಜಿಬಾನಪೇಟೆ, ಕಮರಿಪೇಟೆ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ರಾಮ-ಲಕ್ಷ್ಮಣ, ಸೀತಾ ಅವರ ಮೂರ್ತಿ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸುತ್ತಲಿನ ಪ್ರದೇಶದ ನಿವಾಸಿಗಳು ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು. ಆಂಜನೇಯ ದೇವಸ್ಥಾನದಲ್ಲೂ ವಿಶೇಷ ಪೂಜೆ-ಪುನಸ್ಕಾರ ನಡೆದವು. ಅಲ್ಲದೇ, ದೇವಸ್ಥಾನದ ಆವರಣದಲ್ಲಿ ಶ್ರೀರಾಮ-ಲಕ್ಷ್ಮಣರ ಭಾವಚಿತ್ರವಿಟ್ಟು ವಿಶೇಷ ಪೂಜೆ ಸಲ್ಲಿಸಿ ನಂತರ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಪ್ರಸಾದ ವಿತರಿಸಲಾಯಿತು.
ಅರಳಿಕಟ್ಟಿ ಓಣಿ:
ಪ್ರವಚನ:
ಕೇಶ್ವಾಪುರದ ಅಂಬಿಕಾನಗರದಲ್ಲಿರುವ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದಲ್ಲಿ ಪಂ. ಯಾದವಾಚಾರ್ಯ ದಿವಾಕರ ನೇತೃತ್ವದಲ್ಲಿ ರಾಮನವಮಿ ನಿಮಿತ್ತ ಪ್ರವಚನ ಕಾರ್ಯಕ್ರಮ ನಡೆಯಿತು. ಈ ಮೂಲಕ ರಾಮನ ಸಂದೇಶ ತಿಳಿಸಲಾಯಿತು. ಈ ವೇಳೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಮಹಿಳೆಯರು, ಮಕ್ಕಳು ಇದ್ದರು.