ಡಂಬಳ: ತಂಬಾಕು ಸೇವನೆಯಿಂದ ಮನುಷ್ಯನ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುವುದು ಅಗತ್ಯ ಎಂದು ಮುಖಂಡ ಜಿ.ಎಸ್. ಕೊರ್ಲಹಳ್ಳಿ ಹೇಳಿದರು.
ಮುಖ್ಯ ಅತಿಥಿಯಾಗಿ ಎ.ಕೆ. ಮುಲ್ಲಾ, ನಾಗೇಶ ಹುಬ್ಬಳ್ಳಿ ಮಾತನಾಡಿ, ತಂಬಾಕು ಸೇವನೆಯಿಂದ ಮುಕ್ತರಾಗಲು ಪಣ ತೊಡಬೇಕು ಎಂದರು.
ಸಮಾಜ ಸೇವಕ ಭೀಮಪ್ಪ ಗದಗಿನ ಮಾತನಾಡಿ, ಒತ್ತಡ ಕಡಿಮೆ ಮಾಡಲು ಧೂಮಪಾನ ಸಹಕಾರಿ, ಧೂಮಪಾನ ಸಂತೋಷ ಹೆಚ್ಚಿಸುತ್ತದೆ ಧೈರ್ಯ ತುಂಬುತ್ತದೆ ಎಂಬೆಲ್ಲ ಹಸಿಕಲ್ಪನೆಗಳು ಜನರಲ್ಲಿ ಮೂಡಿರುವುದು ದುರಾದೃಷ್ಟಕರ, ಬೀಡಿ ಸಿಗರೇಟು ಗುಟ್ಕಾ ಸಾರಾಯಿಯಂತಹ ಉತ್ಪನ್ನಗಳಲ್ಲಿ 100ರಷ್ಟು ವಿಷಕಾರಿ ಹಾಗೂ ಶೇ.70 ರಷ್ಟು ಕ್ಯಾನ್ಸರಕಾರಕ ಅಂಶ ಇದೆ ಎಂದರು.ಕಾರ್ಯಕ್ರಮದಲ್ಲಿ ಸಿಎಸ್‍ಸಿ ನೋಡಲ್ ಅಧಿಕಾರಿ ಕಿರಣ, ಮುಂಡರಗಿಯ ಸಂಯೋಜನಾಧಿಕಾರಿ ವಿಶಾಲಾ ಮಲ್ಲಾಪುರ, ಡಂಬಳ ಗ್ರಾಮದ ಧರ್ಮಸ್ಥಳದ ಮೇಲ್ವಿಚಾರಕರ ಅಣ್ಣಪ್ಪ, ಸ್ಥಳೀಯ ಸೇವಾಪ್ರತಿನಿಧಿಗಳು, ನವಜೀವನ ಸಮಿತಿ ಸದಸ್ಯರು, ಮಹಿಳಾ ಸಂಘದ ಸದಸ್ಯರು ಇದ್ದರು.