ಪರಂಪರೆ, ಕಲೆ,ವಾಸ್ತುಶಿಲ್ಪಗಳ ಅರಿವು ಮೂಡಿಸಿ

KannadaprabhaNewsNetwork | Published : Oct 22, 2023 1:00 AM

ಸಾರಾಂಶ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುನಮ್ಮ ನಾಡಿನ ಪರಂಪರೆ ಉಳಿಸುವಲ್ಲಿ ನಾಡ ಹಬ್ಬಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಸ್ಥಳೀಯ ಜೆಸಿ ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮೀ ಅಡಿಕೆ ಹೇಳಿದರು.ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಲಾಗಿದ್ದ 87ನೇಯ ವರ್ಷದ ನಾಡಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಪೀಳಿಗೆಗೆ ನಮ್ಮ ಪರಂಪರೆ, ಕಲೆ,ವಾಸ್ತುಶಿಲ್ಪಗಳ ಬಗ್ಗೆ ಪ್ರಾತ್ಯಕ್ಷಿಕ ಅರಿವು ಮೂಡಿಸುವಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಕಳೆದ 86 ವರ್ಷಗಳಿಂದ ಈ ವೇದಿಕೆಗೆ ನಾಡಿನ ಸಾಹಿತ್ಯ ದಿಗ್ಗಜರು,ಕಲಾವಿದರ ಆಗಮನದಿಂದ ಈ ರಂಗಮಂದಿರ ಪುಣ್ಯಕ್ಷೇತ್ರವೆನಿಸಿದೆ ಎಂದರು.
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ನಮ್ಮ ನಾಡಿನ ಪರಂಪರೆ ಉಳಿಸುವಲ್ಲಿ ನಾಡ ಹಬ್ಬಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಸ್ಥಳೀಯ ಜೆಸಿ ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮೀ ಅಡಿಕೆ ಹೇಳಿದರು. ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಲಾಗಿದ್ದ 87ನೇಯ ವರ್ಷದ ನಾಡಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಪೀಳಿಗೆಗೆ ನಮ್ಮ ಪರಂಪರೆ, ಕಲೆ,ವಾಸ್ತುಶಿಲ್ಪಗಳ ಬಗ್ಗೆ ಪ್ರಾತ್ಯಕ್ಷಿಕ ಅರಿವು ಮೂಡಿಸುವಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಕಳೆದ 86 ವರ್ಷಗಳಿಂದ ಈ ವೇದಿಕೆಗೆ ನಾಡಿನ ಸಾಹಿತ್ಯ ದಿಗ್ಗಜರು,ಕಲಾವಿದರ ಆಗಮನದಿಂದ ಈ ರಂಗಮಂದಿರ ಪುಣ್ಯಕ್ಷೇತ್ರವೆನಿಸಿದೆ ಎಂದರು. ಸ್ಥಳೀಯ ಫೋರ್ಸ ಸಂಸ್ಥೆಯ ಅಧ್ಯಕ್ಷ ವೀರೇಶ ಮಕರಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಮಾತನಾಡಿ,ರಂಗಕಲೆ ನಶಿಸುತ್ತಿರುವ ಇಂದಿನ ದಿನಗಳಲ್ಲಿ ಮಹಿಳೆಯೊಬ್ಬರು ನಡೆಸುತ್ತಿರುವ ಏಕವ್ಯಕ್ತಿ ರಂಗ ನಾಟಕದ 21ನೆಯ ಪ್ರಯೋಗವು ಒಂದು ಸಾಧನೆಯೇ ಸರಿ.ಇದು ನೂರಕ್ಕೂ ಹೆಚ್ಚು ಪ್ರಯೋಗಗಳತ್ತ ಮುಂದುವರೆದು ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವಂತಾಗಲಿ ಎಂದು ಹಾರೈಸಿದರು. ಚಿತ್ರನಟಿ, ರಂಗಕಲಾವಿದೆ ಪೂಜಾ ರಘುನಂದನ ಅಭಿನಯದ ತಾಯಿಯಾಗುವುದೆಂದರೆ ಏಕವ್ಯಕ್ತಿ ರಂಗ ನಾಟಕ ಸಭೀಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.ಶ್ರೀನಿಧಿ ಶಿರಹಟ್ಟಿ, ಅಭಿನಂದನ್ ಜೋಶಿ, ಇಂದಿರಾ ಜೋಶಿ, ಮೇಘನಾ ನಾಡಿಗೇರ, ಚಿದಂಬರ ಜೋಶಿ, ಶ್ರೀನಿವಾಸ ಏಕಬೋಟೆ ಮತ್ತಿತರರಿದ್ದರು.

Share this article